CHANNA PALAV ಚನ್ನ ಪಲಾವ್

Categories: Kannada, OotaPublished On: November 22, 20170 Comments0.3 min read
Indu Jayaram
SHARE
ಪಲಾವ್ ಹೇಗೇ ಮಾಡಿದರೂ ಚೆಂದ! ಎಷ್ಟು ಬಗೆ!ಎಷ್ಟು ಹೆಸರು! ಹೀಗೊಮ್ಮೆ ಮಾಡಿ ನೋಡಿ!

ಮಾಡುವ ವಿಧಾನ:-

1 ಲೋಟ ಕಾಬೂಲ್ ಕಡಲೇ ರಾತ್ರಿ ಪೂರ ನೆನೆಸಿ 1 ವಿಷಲ್ ಕೂಗಿಸಿಡಿ.

1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ.

1 ಲೋಟ ಕಾಯಿ ಹಾಲು ತೆಗೆದಿಡಿ.

1 ಈರುಳ್ಳಿ, 2 ಟೋಮೋಟೋ, 1 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ , 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ, ಸ್ವಲ್ಪ ಎಣ್ಣೆ ಹಾಕಿ ಹುರಿದು ನುಣ್ಣಗೆ ರುಬ್ಬಿಡಿ.

   

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, 1 ಪಲಾವ್ ಎಲೆ ಹಾಕಿ ಹುರಿದು, ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ, ಬಾಸುಮತಿ ಅಕ್ಕಿ, ಬೆಂದ ಕಡಲೇ ಕಾಳು, ಉಪ್ಪು, 1 ಲೋಟ ಕಾಯಿ ಹಾಲು, 1 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 1 ವಿಷಲ್ ಕೂಗಿಸಿಡಿ.

   

ನಂತರ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿದರೆ, ರುಚಿಯಾದ ಮಕ್ಕಳಿಗೆ ತುಂಬಾ ಇಷ್ಟವಾಗುವ ಚನ್ನ ಪಲಾವ್ ಸಿದ್ಧ!

ಧನ್ಯವಾದಗಳು.

 

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment