ಬೆಟ್ಟದ ನೆಲ್ಲಿ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕ್ಕೆ ಪೂರಕವಾದ ಅಂಶಗಳಿವೆ! ಅದರ ರುಚಿಯಾದ ಚಿತ್ರಾನ್ನ ಮಾಡುವ ವಿಧಾನ ಇಲ್ಲಿದೆ ನೋಡಿ:-

1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ.

6 ರಿಂದ 8 ಬೆಟ್ಟದ ನೆಲ್ಲಿ ಕಾಯಿ ತೊಳೆದು, ತುರಿದಿಡಿ.

2 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಸಾಸಿವೆ, ಸ್ವಲ್ಪ ಮೆಂತ್ಯ ಎಣ್ಣೆ ಹಾಕದೆ ಹುರಿದಿಡಿ.

    

6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ ಎಣ್ಣೆ ಹಾಕಿ ಹುರಿದಿಡಿ.

ಹುರಿದ ಎಲ್ಲಾ ಸಾಮಗ್ರಿಗಳನ್ನು ಪುಡಿ ಮಾಡಿಡಿ.

4 ಚಮಚ ಒಣ ಕೊಬ್ಬರಿ/ ಕಾಯಿ ತುರಿದಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ.

    

ಅದೇ ಎಣ್ಣೆಗೆ ಸಾಸಿವೆ, ಇಂಗು, ಕರಿಬೇವು, ಚಿಟಿಕೆ ಅರಿಶಿಣ, ಇಂಗು ಹಾಕಿ ಒಗ್ಗರಣೆ ಮಾಡಿ. ನಂತರ ತುರಿದ ನೆಲ್ಲಿ ಕಾಯಿ, ಹುರಿದು ಪುಡಿ ಮಾಡಿದ್ದೂ, ಉಪ್ಪು, ಚೂರು ತುರಿದ ಬೆಲ್ಲ ಹಾಕಿ, ಸ್ವಲ್ಪ ಬಾಡಿಸಿ.

ಕೊನೆಯಲ್ಲಿ ಅನ್ನ, ಕಾಯಿ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಡಲೇ ಬೀಜ ಹಾಕಿ ಕಲೆಸಿದರೆ, ರುಚಿಯಾದ, ಆರೋಗ್ಯಕರವಾದ ಆಮ್ಲಾ ರೈಸ್ ಸವಿಯಲೂ ಸಿದ್ಧ!

ಧನ್ಯವಾದಗಳು.