ಬಡವರ ಬಾದಾಮಿ ಕಡಲೇ ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ!? ಸಂಜೆ ಕಾಫಿ ಟೀ ಜೊತೆಗೆ ಕುರುಂ ಕುರುಂ ಅಂತ ತಿನ್ನೋದಕ್ಕೆ ಎಷ್ಟು ಚೆಂದ ಅಲ್ಲವೇ!?

ಮಾಡುವ ವಿಧಾನ:-

1 ಕಟ್ಟು ಪುದೀನಾ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ನಾಲ್ಕೈದು ಹರಳು ನಿಂಬುಪ್ಪು, ಉಪ್ಪು ಹಾಕಿ ನೀರು ಹಾಕದೆ ಪೇಸ್ಟ್ ಮಾಡಿಡಿ.

ದೊಡ್ಡ ಪಾತ್ರೆಯಲ್ಲಿ ಕಡಲೇ ಬೀಜ, 4 ಚಮಚ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ. ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ. ನೀರು ಒಟ್ಟಿಗೆ ಸುರಿಯಬೇಡಿ. ಚಿಮುಕಿಸಿದರೆ ಸಾಕು!

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಕಡಲೇ ಬೀಜ ಬಿಡಿ ಬಿಡಿಯಾಗಿರುವಂತೆ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗರಿ ಗರಿಯಾಗಿ ಆಗುವವರೆಗೆ ಕರಿದು ತೆಗೆದಿಡಿ.

ಸ್ವಲ್ಪ ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

ಇದೇ ರೀತಿ ಗೋಡಂಬಿ, ಬಾದಾಮಿಯಲ್ಲಿ ಬೇಕಾದರೂ ಮಾಡಬಹುದು! ( ಮನೆಯಲ್ಲಿ ಹೆಚ್ಚು ಇದ್ದಾಗ!)

ಇದೇ ಕಡಲೇ ಬೀಜ OVEN ನಲ್ಲಿ ಬೇಕಾದರೂ ಮಾಡಬಹುದು. Microwave safe plate ನಲ್ಲಿ ಸ್ವಲ್ಪ ಸ್ವಲ್ಪವೇ ಹರಡಿ 3 ರಿಂದ 4 ನಿಮಿಷ ಬಿಸಿ ಮಾಡಬೇಕು. ಮಧ್ಯದಲ್ಲಿ ಆಗಾಗ ಮೆದುವಾಗಿ ಕಲೆಸಿ ಅಂಟಿಕೊಡ ಬೀಜಗಳನ್ನು ಬೇರೆ ಬೇರೆ ಮಾಡಿ. ನೋಡಿ ನಿಮ್ಮ ಮನೆಯಲ್ಲಿರುವ Microwave ಎಷ್ಟು ಬೇಗ ಬಿಸಿಯಾಗುವುದೋ ನೋಡಿಕೊಂಡು ಸಮಯ ನೀವೇ ನಿರ್ಧರಿಸಿ. ಈ ರೀತಿ ಮಾಡಿದ ಕಡಲೇ ಬೀಜ ಸಂಪೂರ್ಣವಾಗಿ ತಣ್ಣಗಾದ ಮೇಲೆ ಗರಿ ಗರಿಯಾಗಿರುತ್ತದೆ!

      

ನಿಂಬುಪ್ಪು ಅಂದರೆ Lemonsalt! ಫೋಟೋ ಹಾಕಿದ್ದೇನೆ ನೋಡಿ. ಸ್ವಲ್ಪ ಹಾಕಿದರೆ ಸಾಕು! ತುಂಬಾ ಹುಳಿ ಇದರ ರುಚಿ! ಹೆಚ್ಚು ಹಾಕಿದರೆ ತಿನ್ನಲು ಆಗುವುದಿಲ್ಲ. ಎಚ್ಚರಿಕೆಯಿಂದ ಸ್ವಲ್ಪ ಹಾಕಿದಲೆ ಸಾಕು.

ಸಣ್ಣ ಬಟ್ಟಲಿನಲ್ಲಿರುವ ಕಡಲೇ ಬೀಜ ಮತ್ತು ಗೋಡಂಬಿ Microwave ನಲ್ಲಿ ಮಾಡಿರುವುದು! Oil less!

   

ದೊಡ್ಡ ಬಟ್ಟಲಿನಲ್ಲಿರುವ ಕಡಲೇ ಬೀಜ ಎಣ್ಣೆಯಲ್ಲಿ ಕರಿದಿರುವುದು! ನಿಮ್ಮ ಆಯ್ಕೆ ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಿ!

ಧನ್ಯವಾದಗಳು.