ಹಾಲಿನಿಂದ ಮಾಡುವ ರುಚಿಯಾದ, ಪೌಷ್ಟಿಕವಾದ ಸಿಹಿ ತಿಂಡಿ!

ಮಾಡುವ ವಿಧಾನ:-

ದಪ್ಪ ತಳದ ಬಾಣಲೆಯಲ್ಲಿ/ ಪಾತ್ರೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಹಾಕಿ ಕುದಿಯಲು ಇಡಿ. ಹಾಲು ಚೆನ್ನಾಗಿ ಬಿಸಿಯಾದ ಮೇಲೆ 2 ಚಮಚ ಗಟ್ಟಿಯಾದ ಹುಳಿ ಮೊಸರು ಹಾಕಿ ಚೆನ್ನಾಗಿ ಕಲೆಸಿ ಹಾಲು ಒಡೆಯುವಂತೆ ಮಾಡಿ.

ಒಡೆದ ಹಾಲು ಕುದಿದು 1/2 ಭಾಗದಷ್ಟು ಆದಾಗ, 100 ಗ್ರಾಂ ಸಪ್ಪೆ ಖೋವಾ ಪುಡಿ ಮಾಡಿ ಹಾಕಿ. 1/2 ಕಪ್ ಸಕ್ಕರೆ ( ಸುಮಾರು 75 ರಿಂದ 100 ಗ್ರಾಂ), 4 ಚಮಚ ತುಪ್ಪ, ಚಿಟಿಕೆ ಕೇಸರಿ ದಳ (ಬೇಕಾದರೆ) ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ಹಾಲಿನ ನೀರಿನಂಶ ಹೋಗುವವರೆಗೆ, ಆಗಾಗ ಕಲೆಸುತ್ತಾ ಕುದಿಸಿ.

   

ಹಲ್ವಾ ಹದಕ್ಕೆ ಬಂದಾಗ ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿ, ಚಿಟಿಕೆ ಏಲಕ್ಕಿ ಪುಡಿ ಹಾಕಿದರೆ, ಬಾಯಲ್ಲಿ ನೀರೂರಿಸುವ, ರುಚಿಯಾದ, ಪೌಷ್ಟಿಕವಾದ ಮಿಲ್ಕ್ ಹಲ್ವಾ ಸಿದ್ಧ!

ಇದನ್ನು ಹಾಗೇ ಬೇಕಾದರೂ ತಿನ್ನಬಹುದು! ಆಥವಾ Fridge ನಲ್ಲಿಟ್ಟು ತಣ್ಣಗಾದ ಮೇಲೆ ಬೇಕಾದರೂ ತಿನ್ನಬಹುದು!

ಒಮ್ಮೆ ಮಾಡಿ ತಿಂದು ರುಚಿ ನೋಡಿದರೆ ಖಂಡಿತಾ ಆಗಾಗ ಮಾಡಿ ತಿನ್ನುತ್ತೀರಾ ಎನ್ನುವ ನಂಬಿಕೆ ನನ್ನದು!

ಧನ್ಯವಾದಗಳು.