MALAI DAL ಮಲೈ ದಾಲ್
ಮಾಡುವ ವಿಧಾನ:-
1 ಚಿಕ್ಕ ಲೋಟ ಉದ್ದಿನ ಕಾಳು ರಾತ್ರಿ ನೆನೆಸಿಡಿ. ಕಾಳಿನ ಫೋಟೋ ಹಾಕಿದ್ದೇನೆ ನೋಡಿ. ಸ್ವಲ್ಪ ಹೆಸರು ಕಾಳಿನ ಹಾಗೆ ಇರುತ್ತದೆ. ಬಣ್ಣ ಮಾತ್ರ ಕಪ್ಪು!
1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.
2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
ನೆಂದ ಉದ್ದಿನ ಕಾಳನ್ನು 2 ಅಥವಾ 3 ವಿಷಲ್ ಕೂಗಿಸಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ, ಚಿಟಿಕೆ ಅರಿಶಿಣ, 1/2 ಚಮಚ ಖಾರಾ ಪುಡಿ, ಬೆಂದ ಕಾಳು, ಉಪ್ಪು ಹಾಕಿ ಕಲೆಸಿ, ಬೇಕಾದರೆ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 4 ಚಮಚ ಫ್ರೆಶ್ ಕ್ರೀಮ್ ಹಾಕಿ ಕಲೆಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಮಲೈ ದಾಲ್ ರೆಡಿ!
ಚಪಾತಿ, ಪುಲ್ಕಾ, ರೋಟಿ, ಅನ್ನದ ಜೊತೆಗೆ ತುಂಬಾ ಚೆನ್ನಾಗಿರುವ Side dish! ಮಾಡಿ ನೋಡಿ.
ಧನ್ಯವಾದಗಳು.