ಸಾಮಾನ್ಯವಾಗಿ ಇಡ್ಲಿ ಮಾಡಿದ ಮೇಲೆ ಸ್ವಲ್ಪ ಹಿಟ್ಟು ಉಳಿದು ಬಿಡುತ್ತದೆ. ಅದನ್ನು ಚೆಲ್ಲುವ ಹಾಗಿಲ್ಲ! ಮತ್ತೆ ಇಡ್ಲಿ ಮಾಡಿದರೆ ಯಾರಿಗೂ ಇಷ್ಟ ಆಗುವುದಿಲ್ಲ! ಹಾಗಾದರೆ ಉಳಿದ ಹಿಟ್ಟನ್ನು ಏನು ಮಾಡುವುದು ಎಂದು ಯೋಚಿಸಬೇಡಿ! ಇಲ್ಲಿದೆ ಉಳಿದ ಹಿಟ್ಟು ಬಳಸಿ ಮಾಡುವ ಒಂದು ಒಳ್ಳೆಯ, ರುಚಿಯಾದ ರೆಸಿಪಿ!

ಇಡ್ಲಿ ಹಿಟ್ಟಿನ ಬೋಂಡಾ ಮಾಡುವ ವಿಧಾನ:-

ಇಡ್ಲಿ ಹಿಟ್ಟಿಗೆ 4 ಚಮಚ ಸಾಬೂದಾನ (ಸಬ್ಬಕ್ಕಿ) ಯನ್ನು ತೊಳೆದು ನೀರು ಸೋರಿ ಹಾಕಿ ಸೇರಿಸಿ 4 ಗಂಟೆ ನೆನೆಯಲು ಇಡಿ! ತುಂಬಾ ಹುಳಿ ಬೇಡವಾದರೆ ಸಾಬೂದಾನ ಹಾಕಿ ಹಿಟ್ಟನ್ನು Fridge ನಲ್ಲಿ ಇಡಿ.

ನಂತರ 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು, ಹೆಚ್ಚಿದ ಹಸಿ ಮೆಣಸಿನಕಾಯಿ ( ಹಸಿ ಮೆಣಸಿನಕಾಯಿ ಸ್ವಲ್ಪ ಹೆಚ್ಚು ಬೇಕಾಗುತ್ತದೆ), ಚಿಟಿಕೆ ಸೋಡಾ ಹಾಕಿ ಚೆನ್ನಾಗಿ ಕಲೆಸಿ. ಹಿಟ್ಟು ನೀರಾಗಿದ್ದರೆ ಸ್ವಲ್ಪ ಅಕ್ಕಿ ಹಿಟ್ಟು ಅಥವಾ ಚಿರೋಟಿ ರವೆ ಸೇರಿಸಿ.

    

ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಮೇಲೆ, ಚಿಕ್ಕ ಚಿಕ್ಕ ಉಂಡೆಗಳನ್ನು ಗುಂಡಾಗಿ ಮಾಡಿ ಹಾಕಿ, ಮಧ್ಯಮ ಉರಿಯಲ್ಲಿ ಕೆಂಪಗೆ ಗರಿ ಗರಿಯಾಗಿ ಕರಿದು ಸವಿಯಿರಿ. ಗರಿ ಗರಿಯಾಗಿ ರುಚಿಯಾಗಿರುತ್ತದೆ ಈ ಬೋಂಡಾ!

ಇದೇ ರೀತಿ ದೋಸೆ ಹಿಟ್ಟಿನಲ್ಲೂ ಬೇಕಾದರೂ ಮಾಡಬಹುದು! ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಬೇಕು ಅಷ್ಟೇ!

ಧನ್ಯವಾದಗಳು.