GOBHI RICE ಗೋಭಿ ರೈಸ್

ಮಕ್ಕಳಿಗೆ ತುಂಬಾ ಇಷ್ಟವಾಗುವ ಪಲವ್! ಮಾಡುವುದೂ ಕೂಡ ತುಂಬಾ ಸುಲಭ!

ಮಾಡುವ ವಿಧಾನ:-

1 ಲೋಟ ಬಾಸುಮತಿ ಅಕ್ಕಿ ತೊಳೆದು 20 ನಿಮಿಷ ನೆನೆಸಿ ಸೋರಿ ಹಾಕಿಡಿ.

1 ಚಿಕ್ಕ ಗೋಭಿಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ Clean ಮಾಡಿಡಿ. 1 ಲೀಟರ್ ನಷ್ಟು ಬಿಸಿ ನೀರು ಹಾಕಿ 5 ನಿಮಿಷ ನೆನೆಯಲು ಬಿಡಿ. ಕೇವಲ ಗೋಭಿ ತುಂಡುಗಳನ್ನು ಮಾತ್ರ ಕೈಯಿಂದ ತೆಗೆದು ಮತ್ತೊಂದು ಬಾರಿ ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು, ಅರಿಷಿಣ ಹಾಕಿ ಗೋಭಿ ಹಾಕಿ ಮುಚ್ಚಿಡಿ. 5 ನಿಮಿಷದ ನಂತರ ಗೋಭಿಯನ್ನು ಸೋರಿ ಹಾಕಿಡಿ.

1/2 ಚಕ್ಕೆ, 3 ಲವಂಗ, 2 ಏಲಕ್ಕಿ, 1/2 ಇಂಚು ಶುಂಠಿ, 8 ಎಸಳು ಬೆಳ್ಳುಳ್ಳಿ, 1 ಮರಾಠಿ ಮೊಗ್ಗು, 1 ಹಸಿ ಮೆಣಸಿನಕಾಯಿ, 4 ಚಮಚ ಕಾಯಿ ತುರಿ, 1 ಚಮಚ ಖಾರಾ ಪುಡಿ ಹಾಕಿ ನುಣ್ಣಗೆ ರುಬ್ಬಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, 1 ಪಲಾವ್ ಎಲೆ, ಜೀರಿಗೆ, ಹೆಚ್ಚಿದ ಈರುಳ್ಳಿ, ಗೋಭಿ , ರುಬ್ಬಿದ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ಅಕ್ಕಿ, ಉಪ್ಪು ಹಾಕಿ ಸ್ವಲ್ಪ ಹುರಿದು, ನಂತರ 1 3/4 ಲೋಟ ನೀರು ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಬೇಯಿಸಿ.

ಇಲ್ಲದಿದ್ದರೆ ಕುಕ್ಕರಿನ ಮುಚ್ಚಳ ಮುಚ್ಚಿ 1 ವಿಷಲ್ ಕೂಗಿಸಿಡಿ.

   

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಗೋಭಿ ರೈಸ್ ರೆಡಿ!

ಮೊಸರು ಬಜ್ಜಿಯೊಂದಿಗೆ ತುಂಬಾ ರುಚಿಯಾಗಿರುತ್ತದೆ!

   

ಧನ್ಯವಾದಗಳು.

Leave a Comment

%d bloggers like this: