DIDHEER CHAKKULI ದಿಢೀರ್ ಚಕ್ಕುಲಿ
ಆದರೆ ಬೇಕಾದಾಗ ಚಕ್ಕುಲಿ ತಿನ್ನಬೇಕೆನೆಸಿದಾಗ ತಕ್ಷಣ ಮಾಡುವ ದಿಢೀರ್ ಚಕ್ಕುಲಿಯ ರೆಸಿಪಿ ಇಲ್ಲಿದೆ!
1 ಅಳತೆ ಅಕ್ಕಿ ಹಿಟ್ಟನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿಡಿ.
1/2 ಅಳತೆ ಹುರಿಗಡಲೆ ನುಣ್ಣಗೆ ಪುಡಿ ಮಾಡಿಡಿ.
1 ಟೇಬಲ್ ಚಮಚ ಬೆಣ್ಣೆ ಅಥವಾ ಎಣ್ಣೆ ಸ್ವಲ್ಪ ಬಿಸಿ ಮಾಡಿಡಿ.
ಅಕ್ಕಿ ಹಿಟ್ಟಿಗೆ ಹುರಿ ಗಡಲೆ ಪುಡಿ, 1 ಚಮಚ ಜೀರಿಗೆ, 2 ಚಮಚ ಬಿಳಿ ಎಳ್ಳು, 1 ಚಮಚ ಖಾರಾ ಪುಡಿ ( ನಾನು ಕಾಶ್ಮೀರಿ ಚಿಲ್ಲಿ ಪುಡಿ ಮತ್ತು ಬ್ಯಾಡಗಿ ಮೆಣಸಿನಕಾಯಿ ಪುಡಿ ಎರಡೂ ಸೇರಿಸಿ ಹಾಕಿದ್ದೇನೆ) , ಉಪ್ಪು, ಸ್ವಲ್ಪ ಇಂಗು, ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಈಗ ಬೇಕಾದರೆ ನೀವು ರುಚಿ ನೋಡಬಹುದು.
ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾಗಿ ಚಕ್ಕುಲಿ ಹಿಟ್ಟು ಕಲೆಸಿ ಒಂದು ತಟ್ಟೆ ಮುಚ್ಚಿಡಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಕಾದ ನಂತರ ಸಣ್ಣ ಉರಿ ಮಾಡಿ.
ಚಕ್ಕುಲಿ ಒರಳಿಗೆ ಸ್ವಲ್ಪ ಎಣ್ಣೆ ಸವರಿ, ಚಕ್ಕುಲಿ ಬಿಲ್ಲೆ ಹಾಕಿ, ಚಕ್ಕುಲಿ ಮಿಶ್ರಣ ತುಂಬಿಸಿ.
ಬಟರ್ ಪೇಪರ್, ಅಥವಾ ಚಿಕ್ಕ ಚಿಕ್ಕ ತಟ್ಟೆಗಳ ಮೇಲೆ ಚಕ್ಕುಲಿ ಒತ್ತಿ.
ಕಾದ ಎಣ್ಣೆಯಲ್ಲಿ ಒತ್ತಿದ ಚಕ್ಕುಲಿ ಮೂರು ನಾಲ್ಕು ಒಟ್ಟಿಗೆ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಆಗುವವರೆಗೆ ಕರಿದು ತೆಗೆದಿಡಿ. ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ!
ಧನ್ಯವಾದಗಳು.