COCONUT GARLIC RICE ಕೋಕೋನಟ್ ಗಾರ್ಲಿಕ್ ರೈಸ್
Indu Jayaram
SHARE
ಮಾಡುವ ವಿಧಾನ :-
1/2 ಕಾಯಿ ಹೋಳಿನ ಕಾಯಿ ತುರಿದಿಡಿ ( ದೊಡ್ಡ ಹೋಳು)
1 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ.
ಕಾಯಿ ತುರಿ, ಬೆಳ್ಳುಳ್ಳಿ, 5 ಹಸಿ ಮೆಣಸಿನ ಕಾಯಿ ನೀರು ಹಾಕಿ ಚಟ್ನಿ ಹದಕ್ಕೆ ರುಬ್ಬಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
1 ಲೋಟ ಸಾಧಾರಣ ಅಕ್ಕಿ ತೊಳೆದಿಡಿ.
ಕುಕ್ಕರಿಗೆ 4 ಚಮಚ ಎಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂ, ಮರಾಠಿ ಮೊಗ್ಗು ಹಾಕಿ ಸ್ವಲ್ಪ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಹುರಿದು, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ಅಕ್ಕಿ ರುಚಿಗೆ ಉಪ್ಪು ಹಾಕಿ ಕಲೆಸಿ, 2 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 1 ಅಥವಾ 2 ವಿಷಲ್ ಕೂಗಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಕೋಕೋನಟ್ ಗಾರ್ಲಿಕ್ ರೈಸ್ ಸಿದ್ಧ!
ಧನ್ಯವಾದಗಳು.