BENDI CURRY ಬೆಂಡಿ ಕರ್ರಿ
ಮಾಡುವ ವಿಧಾನ:-
ಆದಷ್ಟೂ ಎಳೆಯದಾದ 1/4 ಕೇಜಿ ಬೆಂಡೆ ಕಾಯಿಗಳನ್ನು ಆಯ್ದು ಕೊಂಡು ತೊಳೆದು ಚೆನ್ನಾಗಿ ಒರೆಸಿ, 1 ಇಂಚು ಅಳತೆಯ ತುಂಡುಗಳನ್ನಾಗಿ ಹೆಚ್ಚಿ. ನಂತರ ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ಸ್ವಲ್ಪ ಗರಿ ಗರಿಯಾಗಿ ಆಗುವವರೆಗೆ ಕರಿದು ತೆಗೆದಿಡಿ. ತುಂಬಾ ಕೆಂಪಗೆ ಬೇಡ, ಬೆಂಡೆ ಕಾಯಿ ಬೆಂದರೆ ಸಾಕು! ಹುರಿದು ಹಾಕಿದರೆ ಅಂಟು ಅಂಟಾಗಿರುತ್ತದೆ ಹಾಗಾಗಿ ಎಣ್ಣೆಯಲ್ಲಿ ಕರಿಯುವುದು!
1 ಟೇಬಲ್ ಚಮಚ ಗಸಗಸೆ, 10 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ಕಾಲ ನೆನೆಸಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿ 2 ಚಮಚ ಎಣ್ಣೆ ಹಾಕಿ ಹುರಿದಿಡಿ. ಮೊದಲು ಗಸಗಸೆ, ಗೋಡಂಬಿ ನುಣ್ಣಗೆ ರುಬ್ಬಿ, ನಂತರ ಹುರಿದ ಈರುಳ್ಳಿ ಹಾಕಿ ಮತ್ತೊಮ್ಮೆ ರುಬ್ಬಿಡಿ.
1 ಟೊಮೇಟೋ ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಜೀರಿಗೆ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ, ಹೆಚ್ಚಿದ ಟೋಮೇಟೋ ಹಾಕಿ ಫ್ರೈ ಮಾಡಿ, ನಂತರ ರುಬ್ಬಿದ ಮಿಶ್ರಣವನ್ನು ಹಾಕಿ, 1 ಚಮಚ ಖಾರದ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು, 1/2 ಲೋಟ ಸಿಹಿಯಾದ, ಗಟ್ಟಿಯಾದ ತಾಜಾ ಮೊಸರು, ಚಿಟಿಕೆ ಸಕ್ಕರೆ ಸೇರಿಸಿ ಸ್ವಲ್ಪ ಕಡಿಮೆ ಉರಿಯಲ್ಲಿ ಕುದಿಸಿ.
ಕೊನೆಯಲ್ಲಿ ಕರಿದ ಬೆಂಡೆ ಕಾಯಿ ಹೋಳುಗಳನ್ನು ಸೇರಿಸಿ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಬೆಂಡಿ ಕರ್ರಿ ಸಿದ್ಧ!
ಧನ್ಯವಾದಗಳು.