AVALAKKI ROTTI ಅವಲಕ್ಕಿ ರೊಟ್ಟಿ
ಮಾಡುವ ವಿಧಾನ:-
1 ಲೋಟ ಗಟ್ಟಿ ಅವಲಕ್ಕಿಯನ್ನು ಕಾಟನ್ ಬಟ್ಟೆ ಅಥವಾ Kitchen towel ನಿಂದ ಚೆನ್ನಾಗಿ ಒರೆಸಿ, ನುಣ್ಣಗೆ ಪುಡಿ ಮಾಡಿಡಿ.
4 ಚಮಚ ಕಾಯಿ ತುರಿದಿಡಿ.
ಈರುಳ್ಳಿ ಹಾಕುವ ಹಾಗಿದ್ದರೆ ಸಣ್ಣಗೆ ಹೆಚ್ಚಿಡಿ.
ಕೊತ್ತಂಬರಿ ಸೊಪ್ಪು, ಮೆಂತ್ಯ, ಸಬ್ಬಾಕ್ಷಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಕಡಲೇ ಬೇಳೆ ಹಾಕುವುದಾದಲೆ 2 ಚಮಚ ಕಡಲೇ ಬೇಳೆ ರಾತ್ರಿ ನೆನೆಸಿಡಿ. ಕಡಲೇಬೇಳೆ ಹಾಕುವುದರಿಂದ ರೊಟ್ಟಿ ಗರಿ ಗರಿಯಾಗಿರುತ್ತದೆ. ಬೇಕಾದರೆ ಹಾಕಿ.
ಅವಲಕ್ಕಿ ಪುಡಿಗೆ, 1 ಚಮಚ ಎಣ್ಣೆ, ಜೀರಿಗೆ, ಈರುಳ್ಳಿ, ಸೊಪ್ಪು, ಕಾಯಿ ತುರಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ಬಿಸಿ ನೀರು ಹಾಕಿ ಅಕ್ಕಿ ರೊಟ್ಟಿಯ ಹದಕ್ಕೆ ಕಲೆಸಿಡಿ.
ನಂತರ ಸಾಧಾರಣ ಅಕ್ಕಿ ರೊಟ್ಟಿಯ ಹಾಗೆ ತೆಳ್ಳಗೆ ತಟ್ಟಿ ತಟ್ಟೆ ಮುಚ್ಚಿ, ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ ಅವಲಕ್ಕಿ ರೊಟ್ಟಿ ಸಿದ್ಧ! ಚಟ್ನಿಯೊಂದಿಗೆ ತುಂಬಾ ಚೆನ್ನಾಗಿರುತ್ತದೆ!
ಧನ್ಯವಾದಗಳು.