ಪಾಯಸದಲ್ಲಿ ನೂರಾರು ಬಗೆ. ಹೇಗೆ ಮಾಡಿದರೂ ಚೆಂದವೇ! ಅದರಲ್ಲೂ ಹಬ್ಬ ಅಂದ ಮೇಲೆ ಪಾಯಸ ಇರಲೇ ಬೇಕು! ತಮಿಳುನಾಡಿನ ಸಾಂಪ್ರಾದಾಯಕ ಪಾಯಸ ಅಕ್ಕಿ ಬೂಂದಿ ಪಾಯಸ!

ಮಾಡುವ ವಿಧಾನ:-

1/2 ಲೋಟ ಅಕ್ಕಿ ನೆನೆಸಿ, 4 ಚಮಚ ಕಾಯಿ ತುರಿ, ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಡಿ.

1 ಲೋಟ ಬೆಲ್ಲ ತುರಿದಿಡಿ.

2 ಚಮಚ ಗಸಗಸೆ ಹುರಿದು, ಬಿಸಿಯಾಗಿದ್ದಾಗಲೇ ಪುಡಿ ಮಾಡಿ, 2 ಏಲಕ್ಕಿ, 4 ಚಮಚ ಕಾಯಿ ತುರಿ, ಸಿಪ್ಪೆ ತೆಗೆದ 8 ಬಾದಾಮಿ ಹಾಕಿ ನುಣ್ಣಗೆ ರುಬ್ಬಿಡಿ.

ದಪ್ಪ ತಳದ ಬಾಣಲೆಯಲ್ಲಿ ಬೆಲ್ಲ ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ. ಬೆಲ್ಲ ಕರಗಿದ ನಂತರ ರುಬ್ಬಿದ ಗಸಗಸೆ ಮಿಶ್ರಣ ಹಾಕಿ, ಬೇಕಾದರೆ ಸ್ವಲ್ಪ ಹಾಲು ಸೇರಿಸಿ ಕಲೆಸಿ. ಇದು ಸ್ವಲ್ಪ ತೆಳ್ಳಗೆ ಇರಬೇಕು.

ಬೂಂದಿ ಜಾಲರಿಯ ಸಹಾಯದಿಂದ ಅಕ್ಕಿ ಮಿಶ್ರಣವನ್ನು ಬಿಸಿ ಪಾಯಸದಲ್ಲಿ ನೇರವಾಗಿ ಬೀಳುವಂತೆ ಹಾಕಿ ಉರಿ ಪೂರ್ತಿಯಾಗಿ ಕಡಿಮೆ ಮಾಡಿ. ಸಣ್ಣ ಉರಿಯಲ್ಲಿ ಬೂಂದಿ ಕಾಳುಗಳು ಪೂರ್ತಿಯಾಗಿ ಬೇಯಲು ಬಿಡಿ.

ಆಗಾಗ ಎಚ್ಚರಿಕೆಯಿಂದ ಕಲೆಸಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಹಾಕಿದರೆ ರುಚಿಯಾದ, ಸಾಂಪ್ರಾದಾಯಕ ಅಕ್ಕಿ ಬೂಂದಿ ಪಾಯಸ ಸಿದ್ಧ!

ಧನ್ಯವಾದಗಳು.