SPECIAL BHEL PURI ಸ್ಪೆಷಲ್ ಭೇಲ್ ಪೂರಿ

Categories: Kannada, Tindi TinisuPublished On: November 20, 20170 Comments0.3 min read
Indu Jayaram
SHARE
ಎಲ್ಲರಿಗೂ ಇಷ್ಟವಾಗುವ ವಿಶೇಷ ರುಚಿಯ ಚಾಟ್! ದೊಡ್ಡ ದೊಡ್ಡ ಹೋಟೆಲ್ ಗಳಲ್ಲೂ, ರಸ್ತೆ ಬದಿಯ ತಳ್ಳುಗಾಡಿಯಲ್ಲೂ ಸಿಗುತ್ತದೆ! ಹಾಗಾದರೆ ತಡ ಏಕೆ ಅದರ ರೆಸಿಪಿ ನೋಡೋಣವೇ?

ಮಾಡುವ ವಿಧಾನ:-

1 ಲೀಟರ್ ಕಡಲೇ ಪುರಿ ( ಮಂಡಕ್ಕಿ ) ಯನ್ನು ಸ್ವಲ್ಪ ಆರಿಸಿಡಿ.

1 ಈರುಳ್ಳಿ, 2 ಟೋಮೋಟೋ, 1/2 ಸೌತೇ ಕಾಯಿ ಸಣ್ಣಗೆ ಹೆಚ್ಚಿಡಿ.

1 ಕ್ಯಾರೆಟ್, 1/2 ತೋತಾಪುರಿ ಮಾವಿನ ಕಾಯಿ ತುರಿದಿಡಿ. ಮಾವಿನ ಕಾಯಿ ಸಿಗದಿದ್ದರೆ ನಿಂಬೆ ರಸ ಹಾಕಿಕೊಳ್ಳಬಹುದು.

    

1 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿಸೊಪ್ಪು, 1 ಹಸಿ ಮೆಣಸಿನಕಾಯಿ, ಸ್ವಲ್ಪ ನಿಂಬೆ ರಸ, ಉಪ್ಪು ಹಾಕಿ ಹಸಿರು ಚಟ್ನಿ ಮಾಡಿಡಿ.

2 ಚಮಚ ಹುಣಿಸೆ ರಸ, ಚೂರು ಬೆಲ್ಲ ಕುದಿಸಿ ಸಿಹಿ ಚಟ್ನಿ ಮಾಡಿಡಿ.

    

ದೊಡ್ಡ ಪಾತ್ರೆಯಲ್ಲಿ ಹೆಚ್ಚಿದ ತರಕಾರಿಗಳು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಮುರಿದ ಪಾನಿ ಪೂರಿ 8 ರಿಂದ 10, ಸ್ವಲ್ಪ ಮುರಿದ ಆಲೂ ಚಿಪ್ಸ್, ಸಿಹಿ ಚಟ್ನಿ, ಹಸಿರು ಚಟ್ನಿ, ಸ್ವಲ್ಪ ಉಪ್ಪು, 1/2 ಚಮಚ ಖಾರದ ಪುಡಿ, ಕಡಲೇ ಪೂರಿ, ಸ್ವಲ್ಪ ಕಾಂಗ್ರೆಸ್ ಕಡಲೇ ಬೀಜ ಹಾಕಿ ಬೇಗ ಬೇಗ ಕಲೆಸಿ ಮೇಲೆ ಸ್ವಲ್ಪ ಸೇವ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ತಕ್ಷಣ ಸವಿಯಿರಿ!

ಧನ್ಯವಾದಗಳು

 

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment