ONION BATH ಆನಿಯನ್ ಬಾತ್

ಹೆಸರೇ ಹೇಳುವಂತೆ ಈರುಳ್ಳಿ ಹೆಚ್ಚಿಗೆ ಹಾಕಿ ಮಾಡುವ ರೆಸಿಪಿ!

ಮಾಡುವ ವಿಧಾನ:-

4 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.

4 ಚಮಚ ಹುಣಿಸೆ ರಸ ತೆಗೆದು ಚೂರು ಬೆಲ್ಲ ಹಾಕಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಅರಿಷಿಣ, ಕರಿಬೇವು, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ 1 ಚಮಚ ಖಾರದ ಪುಡಿ, 1 ಚಮಚ ಸಾರಿನ ಪುಡಿ, ಉಪ್ಪು, ಹುಣಿಸೆ ರಸ, 1 ಲೋಟ ತೊಳೆದ ಅಕ್ಕಿ ಹಾಕಿ ಚೆನ್ನಾಗಿ ಕಲೆಸಿ2 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 1 ಅಥವಾ 2 ವಿಷಲ್ ಕೂಗಿಸಿ. ನಂತರ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಾಯಿ ತುರಿ ಹಾಕಿ ಕಲೆಸಿದರೆ ರುಚಿಯಾದ, ಬೇಗನೇ ಮಾಡಬಹುದಾದ ಆನಿಯನ್ ಬಾತ್ ಸಿದ್ಧ!

ಸರಳವಾಗಿ ಹೇಳುವುದಾದರೆ ಈರುಳ್ಳಿ ಗೊಜ್ಜು ಅನ್ನ ಒಟ್ಟಿಗೆ ಮಾಡಿದ ಹಾಗಿರುತ್ತೆ ರುಚಿ! ಹಾಗೆಂದು ಈರುಳ್ಳಿ ಗೊಜ್ಜನ್ನ ಹೆಸರು ಚೆನ್ನಾಗಿರೋದಿಲ್ಲ ಅಂತ ಆನಿಯನ್ ಬಾತ್ ಅಂತ ಹೆಸರಿಟ್ಟಿದ್ದೀನಿ!

ಧನ್ಯವಾದಗಳು.

Leave a Comment

%d bloggers like this: