ನಮಸ್ಕಾರ, ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಹಾಗೂ ತುಳಸಿ ಹಬ್ಬದ ಶುಭಾಷಯಗಳು.
ಹಾಲಿನ ಪುಡಿ ಮನೆಯಲ್ಲಿದ್ದರೆ ಕೇವಲ 10 ನಿಮಿಷದಲ್ಲಿ ಮಾಡಬಹುದಾದ, ಸುಲಭವಾದ, ರುಚಿಯಾದ ಸಿಹಿ ತಿಂಡಿ!
ಮಾಡುವ ವಿಧಾನ:-
1 ಅಳತೆ ಸಕ್ಕರೆಗೆ 1/2 ಅಳತೆ ನೀರು ಹಾಕಿ ಕುದಿಯಲು ಇಡಿ. ಒಂದೆಳೆ ಪಾಕ ಬಂದೊಡನೆ 2 ಅಳತೆ ಮಿಲ್ಕ್ ಪೌಡರ್, 2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಉರಿ ಮಧ್ಯಮ ಮಾಡಿ ಕೈ ಬಿಡದಂತೆ ಕಲೆಸುತ್ತಾ ಇರಿ.
ಮಿಶ್ರಣ ಗಟ್ಟಿಯಾಗಿ ಅಂಚನ್ನು ಬಿಡುತ್ತಾ, ನೊರೆ ನೊರೆಯಾಗಿ ಆಗುತ್ತದೆ. ತಕ್ಷಣ ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!
ಧನ್ಯವಾದಗಳು.
Leave A Comment