ಮಾವಿನ ಕಾಯಿ ಹಣ್ಣಿನ ಸುವಾಸನೆಗೆ ಮನ ಸೋಲದವರು ಯಾರಿದ್ದಾರೆ ಹೇಳಿ!!!
ಮಾವಿನ ಕಾಯಿಯಿಂದ ಏನೂ ಮಾಡಿದರೂ ಚೆಂದವೇ!
ಹಾಗಾದರೆ ಮಾವಿನ ಕಾಯಿಯ ಸಾರಿನ ರೆಸಿಪಿ ನೋಡೋಣವೇ?? ಎಲ್ಲಾ ಸರಿ ಈಗ ಮಾವಿನ ಕಾಯಿ ಎಲ್ಲಿ ಸಿಗುತ್ತದೆ ಅಂತ ಆಶ್ಚರ್ಯ ಆಯ್ತಾ?!
ನಾವು ಇರೋದು ಬೆಂಗಳೂರಲ್ಲಿ ರೀ!!! ಯಾವ ಹಣ್ಣು ಯಾವ ತರಕಾರಿ ಬೇಕಾದರೂ ಸಿಗುತ್ತದೆ!







ಮಾಡುವ ವಿಧಾನ:-
ತೋತಾಪುರಿ ಮಾವಿನ ಕಾಯಿ ಆದರೆ ಚೆನ್ನಾಗಿರುತ್ತದೆ. ಹುಳಿ ಮಾವಿನ ಕಾಯಿ ಹಾಕಿ ಮಾಡಿದರೆ ಸ್ವಲ್ಪ ಹುಳಿ ಹೆಚ್ಚಾಗಿರುತ್ತೆ!
1 ತೋತಾಪುರಿ ಮಾವಿನ ಕಾಯಿಯನ್ನು ತೊಳೆದು ಸಿಪ್ಪೆ ಸಮೇತ ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಹಾಕಿ ಬೇಯಿಸಿಡಿ.
1 ಚಮಚ ಜೀರಿಗೆ , 1 ಚಮಚ ಕರಿ ಮೆಣಸು ಹುರಿದು ತರಿ ತರಿಯಾಗಿ ಕುಟ್ಟಿಡಿ.
ಬೆಂದ ಮಾವಿನ ಕಾಯಿ ಮತ್ತು ಹಸಿ ಮೆಣಸಿನಕಾಯಿ ಚೆನ್ನಾಗಿ ಕಿವುಚಿ ಸಿಪ್ಪೆ ತೆಗೆದು ಹಾಕಿ. Mixie ಗೆ ಹಾಕಬೇಡಿ ಕಹಿ ಆಗುತ್ತದೆ. ಕೈಯಿಂದ ಕಿವುಚಿದರೆ ಸಾಕು. ಇನ್ನು ಸ್ವಲ್ಪ ನೀರು ಹಾಕಿ, ಮೆಣಸು ಜೀರಿಗೆ ಪುಡಿ, ಚೂರು ಬೆಲ್ಲ (ಬೇಕಾದರೆ) ಉಪ್ಪು ಸೇರಿಸಿ ಕುದಿಯಲು ಇಡಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಾಸಿವೆ, ಇಂಗು, ಕರಿಬೇವುಹಾಕಿ ಒಗ್ಗರಣೆ ಹಾಕಿ.
ಈ ಸಾರು ಅನ್ನದ ಜೊತೆಗೂ ಸೈ!!! ಹಾಗೇ ಕುಡಿಯಲು ಸೈ!!!
ಹಾಗಾದರೆ ನೀವು ಮಾಡಿ ನೋಡ್ತೀರಲ್ಲಾ?!
ಧನ್ಯವಾದಗಳು
Leave A Comment