GODHI ROTTI ಗೋಧಿ ರೊಟ್ಟಿ
ಮಾಡುವ ವಿಧಾನ:-
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ
ನಿಮಗೆ ಬೇಕಾಗುವಷ್ಟು ಸೊಪ್ಪು ಹೆಚ್ಚಿಡಿ. ನಾನು ಸಬ್ಬಾಕ್ಷಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿದ್ದೇನೆ.
2 ಚಮಚ ಕಾಯಿ ತುರಿದಿಡಿ.
ಅವರೆ ಕಾಳು ಹಾಕುವುದಾದರೆ ಕುಕ್ಕರಿನಲ್ಲಿ ಬೇಯಿಸಿಡಿ.
ಬಾಣಲೆಯಲ್ಲಿ 1 1/2 ಲೋಟದಷ್ಟು ನೀರು ಹಾಕಿ ಬಿಸಿಯಾಗಲು ಇಡಿ. ನೀರು ಬಿಸಿಯಾದಾಗ 1 ಲೋಟ ಗೋಧಿ ಹಿಟ್ಟು, ಈರುಳ್ಳಿ, ಸೊಪ್ಪು, ಕಾಯಿ ತುರಿ, ಉಪ್ಪು, 1/2 ಚಮಚ ಜೀರಿಗೆ ಹಾಕಿ ಚೆನ್ನಾಗಿ ಕಲೆಸಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ 3 ರಿಂದ 4 ನಿಮಿಷ ಬೇಯಿಸಿ.
ನಂತರ ಬೆಚ್ಚಗಾದ ಮೇಲೆ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿ ಎಣ್ಣೆ ಸವರಿದ ಕಾವಲಿಯ ಮೇಲೆ ತೆಳ್ಳಗೆ ತಟ್ಟಿ ಸ್ವಲ್ಪ ಎಣ್ಣೆ ಹಾಕಿ ತಟ್ಟೆ ಮುಚ್ಚಿ ಎರಡೂ ಕಡೆ ಬೇಯಿಸಿದರೆ ರುಚಿಯಾದ ಆರೋಗ್ಯಕರವಾದ ಗೋಧಿ ರೊಟ್ಟಿ ಸಿದ್ಧ!
ಕೊನೆಯಲ್ಲಿ ಒಂದು ಮಾತು. ದಯವಿಟ್ಟು ವಯಸ್ಸಾದ ಗೋವುಗಳನ್ನು ಕಸಾಯಿ ಖಾನೆಗೆ ಅಟ್ಟದೆ ಕೊನೆಯವರೆಗೂ ಹುಲ್ಲು, ನೀರು ಕೊಟ್ಟು ಪೋಷಿಸಬೇಕೆಂದು ಕೋರಿಕೆ!
ಧನ್ಯವಾದಗಳು.