ಬೀಟ್ ರೂಟ್ ಒಂದು ಆರೋಗ್ಯಕರ ತರಕಾರಿ, ಅದರಲ್ಲಿ fibre, iron, manganese, potassium ಬೇಕಾದಷ್ಟು ತುಂಬಿದೆ, ಅಲ್ಲದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಈ ಬೀಟ್ ರೂಟಿಗಿದೆ, ಆದರೆ ನಮ್ಮ ಮುದ್ದು ಮಕ್ಕಳು ಇದನ್ನು ತಿನ್ನುವುದಿಲ್ಲ, ಮಕ್ಕಳೇ ಏನು ದೊಡ್ಡವರೇ ತಿನ್ನುವುದಿಲ್ಲ, ಹಾಗಾದರೆ ಅಂಥವರಿಗಾಗಿ ಬೀಟ್ ರೂಟಿನ ಪೂರಿ ಮಾಡಿ ಕೊಡಿ, ಬಾಯಿ ಚಪ್ಪರಿಸಿ ತಿನ್ನುತ್ತಾರೆ.

ಬೀಟ್ ರೂಟ್ ಪೂರಿ ಮಾಡುವ ವಿಧಾನ:- 

ಸಿಪ್ಪೆ ತೆಗೆದು ಬೀಟ್ ರೂಟನ್ನು ತುರಿದು ರುಬ್ಬಿ ಕೊಳ್ಳಿ, 1 ಬಟ್ಟಲು ಗೋಧಿ ಹಿಟ್ಟು, 1/2 ಬಟ್ಟಲು ಚಿರೋಟಿ ರವೆ, ಉಪ್ಪು, ಖಾರದ ಪುಡಿ 1 ಚಮಚ, ಕಾದ ಎಣ್ಣೆ 2 ಚಮಚ, ರುಬ್ಬಿದ ಮಿಶ್ರಣ ಹಾಕಿ ಕಲೆಸಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ.

    

30 ನಿಮಿಷದ ನಂತರ ಕಾದ ಎಣ್ಣೆಯಲ್ಲಿ ಪೂರಿ ಮಾಡಿ ಕರಿಯಿರಿ, ನಾನು ಮಕ್ಕಳಿಗೆ ಇಷ್ಟ ಆಗುವ design cutlet cutterನಿಂದ ಮಾಡಿದ್ದೇನೆ, ಯಾವುದೇ side dish ಜೊತೆ ಚೆನ್ನಾಗಿರುತ್ತದೆ.

        

ಇದೇ ರೀತಿ ಬೇಕಾದರೆ ಬೆಲ್ಲ/ ಸಕ್ಕರೆ, ಪುಡಿ ಮಾಡಿದ dry fruits ಸೇರಿಸಿ sweet poori ಮಾಡಬಹುದು.

ಧನ್ಯವಾದಗಳು.