Day: November 20, 2017

MILK POWDER BURFI ಮಿಲ್ಕ್ ಪೌಡರ್ ಬರ್ಫಿ

ನಮಸ್ಕಾರ, ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಹಾಗೂ ತುಳಸಿ ಹಬ್ಬದ ಶುಭಾಷಯಗಳು. ಹಾಲಿನ ಪುಡಿ ಮನೆಯಲ್ಲಿದ್ದರೆ ಕೇವಲ 10 ನಿಮಿಷದಲ್ಲಿ ಮಾಡಬಹುದಾದ, ಸುಲಭವಾದ, ರುಚಿಯಾದ ಸಿಹಿ ತಿಂಡಿ! ಮಾಡುವ ವಿಧಾನ:- 1 ಅಳತೆ ಸಕ್ಕರೆಗೆ 1/2 ಅಳತೆ ನೀರು ಹಾಕಿ ಕುದಿಯಲು ಇಡಿ. ಒಂದೆಳೆ ಪಾಕ ಬಂದೊಡನೆ 2 ಅಳತೆ ಮಿಲ್ಕ್ ಪೌಡರ್, 2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಉರಿ ಮಧ್ಯಮ ಮಾಡಿ ಕೈ ಬಿಡದಂತೆ ಕಲೆಸುತ್ತಾ ಇರಿ.     ಮಿಶ್ರಣ ಗಟ್ಟಿಯಾಗಿ ಅಂಚನ್ನು …

MILK POWDER BURFI ಮಿಲ್ಕ್ ಪೌಡರ್ ಬರ್ಫಿ Read More »

ONION BATH ಆನಿಯನ್ ಬಾತ್

ಹೆಸರೇ ಹೇಳುವಂತೆ ಈರುಳ್ಳಿ ಹೆಚ್ಚಿಗೆ ಹಾಕಿ ಮಾಡುವ ರೆಸಿಪಿ! ಮಾಡುವ ವಿಧಾನ:- 4 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 4 ಚಮಚ ಹುಣಿಸೆ ರಸ ತೆಗೆದು ಚೂರು ಬೆಲ್ಲ ಹಾಕಿಡಿ. ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಅರಿಷಿಣ, ಕರಿಬೇವು, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ 1 ಚಮಚ ಖಾರದ ಪುಡಿ, 1 ಚಮಚ ಸಾರಿನ ಪುಡಿ, ಉಪ್ಪು, ಹುಣಿಸೆ ರಸ, 1 ಲೋಟ ತೊಳೆದ …

ONION BATH ಆನಿಯನ್ ಬಾತ್ Read More »

MASALA MANDAKKI & MASALA TEA ಮಸಾಲ ಮಂಡಕ್ಕಿ ಮತ್ತು ಮಸಾಲ ಟೀ

ಸಂಜೆ ಹೊತ್ತಿನಲ್ಲಿ ಏನಾದರೂ ಸ್ವಲ್ಪ ಕುರುಕಲು ತಿಂಡಿ ಇದ್ದರೆ ಎಷ್ಟು ಚೆನ್ನ ಅಲ್ಲವೇ?! ಸರಿ ಹಾಗಾದರೆ ಸುಲಭವಾಗಿ ಮಾಡುವ, ವಾರವಾದರೂ ಗರಿ ಗರಿಯಾಗಿರುವ ಮಸಾಲ ಮಂಡಕ್ಕಿ ಮಾಡಿಡಿ. ಬೇಕಾದಾಗ ಸ್ವಲ್ಪ ಹಾಕಿ ಕೊಂಡು ತಿನ್ನಬಹುದು! ಹೇಗೆ ಮಾಡೋದು ಅಂತ ನೋಡೋಣವಾ? ಮಸಾಲ ಮಂಡಕ್ಕಿ ಮಾಡುವ ವಿಧಾನ:- 1/2 ಬಟ್ಟಲು ಒಣ ಕೊಬ್ಬರಿ ತೆಳ್ಳಗೆ ಹೆಚ್ಚಿ, ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. 1 ಲೀಟರ್ ಕಡಲೇ ಪುರಿ (ಮಂಡಕ್ಕಿ) ಸ್ವಲ್ಪ ಕ್ಲೀನ್ ಮಾಡಿಡಿ. 2 ಹಸಿ ಮೆಣಸಿನಕಾಯಿ, 4 ಚಮಚ ಹೆಚ್ಚಿದ …

MASALA MANDAKKI & MASALA TEA ಮಸಾಲ ಮಂಡಕ್ಕಿ ಮತ್ತು ಮಸಾಲ ಟೀ Read More »

MAVINA KAYI SARU ಮಾವಿನ ಕಾಯಿ ಸಾರು

ಮಾವಿನ ಕಾಯಿ ಹಣ್ಣಿನ ಸುವಾಸನೆಗೆ ಮನ ಸೋಲದವರು ಯಾರಿದ್ದಾರೆ ಹೇಳಿ!!! ಮಾವಿನ ಕಾಯಿಯಿಂದ ಏನೂ ಮಾಡಿದರೂ ಚೆಂದವೇ! ಹಾಗಾದರೆ ಮಾವಿನ ಕಾಯಿಯ ಸಾರಿನ ರೆಸಿಪಿ ನೋಡೋಣವೇ?? ಎಲ್ಲಾ ಸರಿ ಈಗ ಮಾವಿನ ಕಾಯಿ ಎಲ್ಲಿ ಸಿಗುತ್ತದೆ ಅಂತ ಆಶ್ಚರ್ಯ ಆಯ್ತಾ?! ನಾವು ಇರೋದು ಬೆಂಗಳೂರಲ್ಲಿ ರೀ!!! ಯಾವ ಹಣ್ಣು ಯಾವ ತರಕಾರಿ ಬೇಕಾದರೂ ಸಿಗುತ್ತದೆ! ಮಾಡುವ ವಿಧಾನ:- ತೋತಾಪುರಿ ಮಾವಿನ ಕಾಯಿ ಆದರೆ ಚೆನ್ನಾಗಿರುತ್ತದೆ. ಹುಳಿ ಮಾವಿನ ಕಾಯಿ ಹಾಕಿ ಮಾಡಿದರೆ ಸ್ವಲ್ಪ ಹುಳಿ ಹೆಚ್ಚಾಗಿರುತ್ತೆ! 1 ತೋತಾಪುರಿ ಮಾವಿನ ಕಾಯಿಯನ್ನು …

MAVINA KAYI SARU ಮಾವಿನ ಕಾಯಿ ಸಾರು Read More »

NAVARATHAN PALAV ನವರತನ್ ಪಲಾವ್

ಹೆಸರು ಕೇಳಿ ಯಾವುದೋ ಒಡವೆ ಅಂದು ಕೊಂಡಿರಾ!. ಅಯ್ಯೋ ರಾಮ ಇದು ಅಡುಗೆ ಅರಮನೆ ರೀ! ಇಲ್ಲಿ ಕೇವಲ ಅಡುಗೆ ಬಗ್ಗೆ ಮಾತ್ರ ಪೋಸ್ಟ್ ಹಾಕಬೇಕು. ಇದು ಒಂದಾನೊಂದು ಕಾಲದಲ್ಲಿ ಒಬ್ಬರು ಗುಜರಾತಿ ಮಹಿಳೆಯಿಂದ, 1,500 ಸಾವಿರ ಕೊಟ್ಟು ಕಲಿತ 10 ರೆಸಿಪಿಗಳಲ್ಲಿ ಇದೂ ಒಂದು! ಮಾಡುವ ವಿಧಾನ:- ಹುರುಳಿ ಕಾಯಿ, ಕ್ಯಾರೆಟ್, ಆಲೂಗೆಡ್ಡೆ, ಬಟಾಣಿ, ಗೋಭಿ ಇಷ್ಟು ತರಕಾರಿಗಳನ್ನು ಕುಕ್ಕರಿನಲ್ಲಿ ನೀರು ಹಾಕಿಮುಚ್ಚಳ ಹಾಕದೆ ಸ್ವಲ್ಪ ಬೇಯಿಸಿಡಿ. ( Half boiled) 1 ಲೋಟ ಬಾಸುಮತಿ …

NAVARATHAN PALAV ನವರತನ್ ಪಲಾವ್ Read More »

PUDINA PALAV ಪುದೀನಾ ಪಲಾವ್

ಸಿಂಪಲ್ ಅಂಡ್ ಟೇಸ್ಟಿ ಪಲಾವ್! ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ರೆಸಿಪಿ! ಆದರೂ ಹೊಸಬರು ಕಲಿತುಕೊಳ್ಳಲಿ ಅಲ್ಲವೇ? ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಕುಕ್ಕರಿನಲ್ಲಿ ಹೆಚ್ಚು ನೀರು ಹಾಕಿ ಅನ್ನ ಮಾಡಿ ನೀರು ಸೋರಿ ಹಾಕಿಡಿ. 1 ಈರುಳ್ಳಿ, 1 ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ. 1 ಕಟ್ಟು ಪುದೀನಾ, 4 ಕಡ್ಡಿ ಕೊತ್ತಂಬರಿ ಸೊಪ್ಪು, 1 ಇಂಚು ಶುಂಠಿ, 1 ಚಿಕ್ಕ ಬೆಳ್ಳುಳ್ಳಿ, 4 ಹಸಿ ಮೆಣಸಿನಕಾಯಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. ಬಾಣಲೆಯಲ್ಲಿ …

PUDINA PALAV ಪುದೀನಾ ಪಲಾವ್ Read More »

HURIDAKKI THAMBITTU ಹುರಿದಕ್ಕಿ ತಂಬಿಟ್ಟು

ಕಾರ್ತಿಕ ಮಾಸದಲ್ಲಿ ಎಲ್ಲಾ ದೇವಾಲಯಗಳಲ್ಲೂ ಲಕ್ಷ ದೀಪೋತ್ಸವ ನಡೆಯುತ್ತದೆ! ಅದರಲ್ಲೂ ಕಾರ್ತಿಕ ಸೋಮವಾರ ಎಂದರೆ ಶಿವನಿಗೆ ಬಹಳ ಪ್ರಿಯವಾದದ್ದು! ಎಲ್ಲಾ ಶಿವನ ದೇವಾಲಯಗಳಲ್ಲಿ ಸೋಮವಾರ ಸಂಜೆ ದೀಪೋತ್ಸವ ನೋಡಲು ಕಣ್ಣೆರಡು ಸಾಲದು! ಕೆಲವರಲ್ಲಿ ಶಿವನಿಗೆ ತಂಬಿಟ್ಟಿನ ಆರತಿ ಮಾಡುವ ಸಂಪ್ರದಾಯವಿದೆ! ಆ ತಂಬಿಟ್ಟಿನ ಸುಲಭವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಲೋಟ ಅಕ್ಕಿಯನ್ನು ತೊಳೆಯದೆ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. ನಂತರ 1/2 ಲೋಟ ಹುರಿಗಡಲೆ ಜೊತೆಗೆ …

HURIDAKKI THAMBITTU ಹುರಿದಕ್ಕಿ ತಂಬಿಟ್ಟು Read More »

BONDA SOUP & BONDA RASAM ಬೋಂಡಾ ಸೂಪ್ ಮತ್ತು ಬೋಂಡಾ ರಸಂ

ಮಳೆ ಬರುವಾಗ, ಛಳಿ ಇರುವಾಗ ಬಿಸಿ ಬಿಸಿಯಾದ ಬೋಂಡಾ ಸೂಪ್ ಅಥವಾ ಬೋಂಡಾ ರಸಂ ಇದ್ದರೆ ಎಷ್ಟು ಚೆನ್ನ ಅಲ್ಲವೇ?!  ಹಾಗಾದರೆ ತಡ ಏಕೆ ಈಗಲೇ ರೆಸಿಪಿ ನೋಡಿ ಸಂಜೆ ಮಕ್ಕಳಿಗೆ, ಪತಿ ದೇವರಿಗೆ ಮಾಡಿ ಕೊಡಿ! ಖುಷಿಯಾಗಿ ತಿಂತಾರೆ!!! ರಸಂ ಮಾಡುವ ವಿಧಾನ :- 1 ಚಿಕ್ಕ ಲೋಟ ತೊಗರಿ ಬೇಳೆ, 2 ಟೋಮೋಟೋ ಬೇಯಿಸಿ ಇಡಿ. ತಣ್ಣಗಾದ ನಂತರ ಟೋಮೇಟೋ ಸಿಪ್ಪೆ ತೆಗೆದು ಸ್ವಲ್ಪ Smash ಮಾಡಿಡಿ. 2 ಚಮಚ ರಸಂ ಪುಡಿ, 1 ಚಮಚ …

BONDA SOUP & BONDA RASAM ಬೋಂಡಾ ಸೂಪ್ ಮತ್ತು ಬೋಂಡಾ ರಸಂ Read More »

HYDERABADI VEG BIRIYANI ಹೈದರಾಬಾದಿ ವೆಜ್ ಬಿರಿಯಾನಿ

ಈ ಪಲಾವ್ ಮತ್ತು ವೆಜ್ ಬಿರಿಯಾನಿ ಎಷ್ಟು ತರಹ ಮಾಡಿದರೂ ಚೆಂದವೇ! ಊಟಕ್ಕೆ, ಲಂಚ್ ಬಾಕ್ಸ್ ಗೆ ಚೆನ್ನಾಗಿರುತ್ತದೆ. ನಾನು ಮಾಡುವ ಸುಲಭವಾದ ವಿಧಾನದ ರೆಸಿಪಿ ಇಲ್ಲಿದೆ ನೋಡಿ! ಹೈದರಾಬಾದಿ ವೆಜ್ ಬಿರಿಯಾನಿ ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿರುವ ಕುದಿಯುತ್ತಿರುವ ನೀರಿಗೆ ಹಾಕಿ 90% ಬೇಯಿಸಿ, ನೀರು ಸೋರಿ ಹಾಕಿ 1 ಚಮಚ ತುಪ್ಪ, 1/4 ಚಮಚ ಪೆಪ್ಪರ್ ಪುಡಿ, ಸ್ವಲ್ಪ ಉಪ್ಪು ಹಾಕಿ ಕಲೆಸಿಡಿ. ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತೊಳೆದು ಸಣ್ಣಗೆ …

HYDERABADI VEG BIRIYANI ಹೈದರಾಬಾದಿ ವೆಜ್ ಬಿರಿಯಾನಿ Read More »

SPECIAL BHEL PURI ಸ್ಪೆಷಲ್ ಭೇಲ್ ಪೂರಿ

ಎಲ್ಲರಿಗೂ ಇಷ್ಟವಾಗುವ ವಿಶೇಷ ರುಚಿಯ ಚಾಟ್! ದೊಡ್ಡ ದೊಡ್ಡ ಹೋಟೆಲ್ ಗಳಲ್ಲೂ, ರಸ್ತೆ ಬದಿಯ ತಳ್ಳುಗಾಡಿಯಲ್ಲೂ ಸಿಗುತ್ತದೆ! ಹಾಗಾದರೆ ತಡ ಏಕೆ ಅದರ ರೆಸಿಪಿ ನೋಡೋಣವೇ? ಮಾಡುವ ವಿಧಾನ:- 1 ಲೀಟರ್ ಕಡಲೇ ಪುರಿ ( ಮಂಡಕ್ಕಿ ) ಯನ್ನು ಸ್ವಲ್ಪ ಆರಿಸಿಡಿ. 1 ಈರುಳ್ಳಿ, 2 ಟೋಮೋಟೋ, 1/2 ಸೌತೇ ಕಾಯಿ ಸಣ್ಣಗೆ ಹೆಚ್ಚಿಡಿ. 1 ಕ್ಯಾರೆಟ್, 1/2 ತೋತಾಪುರಿ ಮಾವಿನ ಕಾಯಿ ತುರಿದಿಡಿ. ಮಾವಿನ ಕಾಯಿ ಸಿಗದಿದ್ದರೆ ನಿಂಬೆ ರಸ ಹಾಕಿಕೊಳ್ಳಬಹುದು.      …

SPECIAL BHEL PURI ಸ್ಪೆಷಲ್ ಭೇಲ್ ಪೂರಿ Read More »