ದಕ್ಷಿಣ ಭಾರತದ ಜನಪ್ರಿಯ ತಿಂಡಿ! ಹೋಟೆಲ್ ಗಳಲ್ಲಿ ಆನಿಯನ್ ಊತಪ್ಪಂ ಜನ ಇಷ್ಟ ಪಟ್ಟು ತಿನ್ನುತ್ತಾರೆ!

ದೋಸೆ ಹಿಟ್ಟಿನಿಂದ ಊತಪ್ಪಂ ಮಾಡುವ ವಿಧಾನ ತುಂಬಾ ಜನರಿಗೆ ಗೊತ್ತಿರಬಹುದು! ಇದು ರವಾ ಊತಪ್ಪಂ! Instant Uthappam! ಹೀಗೆ ಕಲೆಸಿ ಹಾಗೆ ತಕ್ಷಣ ಮಾಡುವುದು!

ಮಾಡುವ ವಿಧಾನ:

1 ಅಳತೆ ಚಿರೋಟಿ ರವೆ 1/2 ಲೋಟ ಹುಳಿಯಾದ ಮೊಸರು, ಉಪ್ಪು ಹಾಕಿ ಕಲೆಸಿ 1/2 ಗಂಟೆ ನೆನೆಸಿಡಿ. ರವೆ ಹುರಿಯುವುದು ಬೇಡ! ಹಸಿಯಾಗಿ ಹಾಕಬೇಕು.

1 ಈರುಳ್ಳಿ, 1 ಕ್ಯಾಪ್ಸಿಕಮ್, 1 ಟೋಮೇಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಆದಷ್ಟೂ ಸಣ್ಣಗೆ ಹೆಚ್ಚಿಡಿ.

1 ಕ್ಯಾರೆಟ್ ತುರಿದಿಡಿ.

ಎಲ್ಲಾ ತರಕಾರಿಗಳನ್ನು ಸೇರಿಸಿ ಸ್ವಲ್ಪ ಉಪ್ಪು ಸೇರಿಸಿ ಕಲೆಸಿಡಿ.

ಚಿರೋಟಿ ರವೆ ಮಿಶ್ರಣ ದೋಸೆ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಇರಬೇಕು. ಬೇಕಾದರೆ ಸ್ವಲ್ಪ ನೀರು ಸೇರಿಸಿ.

ಕಾವಲಿ ಕಾಯಲು ಇಟ್ಟು ರವಾ ಮಿಶ್ರಣದಿಂದ ಸ್ವಲ್ಪ ದಪ್ಪಗೆ ದೋಸೆ ಮಾಡಿ ಮೇಲೆ ಹೆಚ್ಚಿದ ತರಕಾರಿಗಳನ್ನು ಉದುರಿಸಿ ಸ್ವಲ್ಪ ಒತ್ತಿ, ಸುತ್ತಲೂ ಎಣ್ಣೆ ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಎಚ್ಚರಿಕೆಯಿಂದ ತಿರುವಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ತರಕಾರಿಗಳು ಪೂರ್ತಿಯಾಗಿ ಬೇಯುವವರೆಗೆ ಸುಮಾರು ಎರಡು ನಿಮಿಷ ಬೇಯಿಸಿ ತೆಗೆದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ರವಾ ಊತಪ್ಪಂ ಸಿದ್ಧ!

ತರಕಾರಿಗಳು ಬೇಡವಾದರೆ ಕೇವಲ ಈರುಳ್ಳಿ ಒಂದನ್ನು ಮಾತ್ರ ಹಾಕಿ ಮಾಡಬಹುದು.

ನಾನು ಮಾಡಿರುವುದು Prestige mini Uthappam pan ನಲ್ಲಿ. ನೀವು ಸಾಧಾರಣವಾಗಿ ಮಾಡುವ ಹಾಗೆ ಕಾವಲಿಯಲ್ಲಿ ಮಾಡಬಹುದು!

     

 

ಬಾದಾಮಿ ಚಟ್ನಿ ಮಾಡುವ ವಿಧಾನ:-

ಸಾಧಾರಣವಾಗಿ ಮಾಡುವ ಕಾಯಿ ಚಟ್ನಿಗೆ ಹುರಿಗಡಲೆ ಬದಲಾಗಿ 12 ಬಾದಾಮಿ ಹಾಕಿ ಮಾಡಿರುವುದು! ನಿಮಗೆ ಸಮಯವಿದ್ದಲೆ ಬಾದಾಮಿ ನೆನೆಸಿ ಸಿಪ್ಪೆ ತೆಗೆದು ಚಟ್ಟಿ ಮಾಡಿ. ಇಲ್ಲವಾದರೆ ಸಿಪ್ಪೆ ಸಮೇತ ಹಾಕಿ ಮಾಡಿ. ನಾನು ಸಿಪ್ಪೆ ಸಮೇತ ಹಾಕಿರುವುದು. ಸೂಪರ್ ಟೇಸ್ಟ್ ಈ ಚಟ್ನಿಯದು!

ನನ್ನ ಅಳಿಯನಿಂದ ಕಲಿತ ರೆಸಿಪಿ ಇದು! ಅವರು CHEF! ಅವರದು ಹೋಟೆಲ್ Business! ಕೆಲವು ರೆಸಿಪಿಗಳನ್ನು ನಾನು ಅವರಿಂದ ಕಲಿತು ಇಲ್ಲಿ ಹಾಕಿರುವುದು!

ಧನ್ಯವಾದಗಳು.