Tindi Tinisu

The recipes that are prepared for evening snacks are commonly referred as tindi tinisu in Kannada language. The list includes both spicy and sweets recipes. India is known for it’s traditional touch in everything, food is one among them. There are more than fifty traditional dishes that are cooked all over country. All such food recipes can be found here. It helps people understand the recipes better, by adding images of the recipes with the description. Step by step procedures are one of the advantages you will find in these articles. There is also provision for comments exchange for a particular recipe.

UPMA CUTLET ಉಪ್ಮಾ ಕಟ್ಲೆಟ್

ಉಪ್ಮಾ / ಉಪ್ಪಿಟ್ಟು ಎಲ್ಲರ ಮನೆಯಲ್ಲೂ ಸಾಧಾರಣವಾಗಿ ಮಾಡುವ ತಿಂಡಿ! ಎಷ್ಟು ಲೆಕ್ಕ ಹಾಕಿ ಮಾಡಿದರೂ ಸ್ವಲ್ಪ ಉಳಿದು ಹೋಗತ್ತದೆ! ಮಿಕ್ಕ ಉಪ್ಪಿಟ್ಟಿನಿಂದ ರುಚಿಯಾದ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ! ಮಿಶ್ರಣ ವಿಧಾನ:- ಉಳಿದ ಉಪ್ಪಿಟ್ಟಿಗೆ ಸ್ವಲ್ಪಹೆಚ್ಚಿದ ಕೊತ್ತಂಬರಿ ಸೊಪ್ಪು, ಅದಕ್ಕೆ ಹಿಡಿಸುವಷ್ಟು ಕಡಲೇ ಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕಟ್ಲೆಟ್ ತಟ್ಟಿಡಿ.    2 ಚಮಚ ಕಾರ್ನ್ ಫ್ಲೋರ್ ಗೆ ಸ್ವಲ್ಪ ಉಪ್ಪು ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ [...]

By | 2018-03-29T22:37:33+00:00 March 29th, 2018|Kannada, Tindi Tinisu|0 Comments

WATERMELON MILK SHAKE ವಾಟರ್ ಮೆಲನ್ ಮಿಲ್ಕ್ ಷೇಕ್

ಬೇಸಿಗೆಯ ದಿನಗಳಲ್ಲಿ ಕುಡಿಯಲು ತುಂಬಾ ಚೆನ್ನಾಗಿರುವ ಪಾನೀಯಗಳಲ್ಲಿ ಒಂದು! ಮಾಡುವುದು ಸುಲಭ! ರುಚಿಕರ! ಆರೋಗ್ಯಕರ! ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು ಕಲ್ಲಂಗಡಿ ಹಣ್ಣು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಡ್ರೈ ಫ್ರೂಟ್ಸ್ ಹೆಚ್ಚಿಡಿ.    ಮೊದಲು ಡ್ರೈ ಫ್ರೂಟ್ಸ್ Mixie jar ನಲ್ಲಿ ಹಾಕಿ ಪುಡಿ ಮಾಡಿ. ನಂತರ ಕಲ್ಲಂಗಡಿ ಹಣ್ಣಿನ ತುಂಡುಗಳು, 1 ಲೋಟ ತಣ್ಣನೆಯ ಹಾಲು, 2 ಚಮಚ ಜೇನುತುಪ್ಪ ಸೇರಿಸಿ ಇನ್ನೊಂದು ಬಾರಿ ತಿರುವಿದರೆ ರುಚಿಯಾದ ವಾಟರ್ ಮೆಲನ್ ಮಿಲ್ಕ್ ಷೇಕ್ [...]

By | 2018-03-28T23:03:06+00:00 March 28th, 2018|Kannada, Tindi Tinisu|0 Comments

BABY CORN BAJJI ಬೇಬಿ ಕಾರ್ನ್ ಬಜ್ಜಿ

ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಬಜ್ಜಿ! ಮಾಡುವ ವಿಧಾನ:- ಬೇಬಿ ಕಾರ್ನ್ ಅನ್ನು ತೊಳೆದು ತೆಳ್ಳಗೆ ಸ್ಲೈಸ್ ಮಾಡಿಡಿ.    ಒಂದು ಬಟ್ಟಲಿನಲ್ಲಿ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, 1/2 ಚಮಚ ಚಾಟ್ ಮಸಾಲ, 1/2 ಚಮಚ ಜೀರಿಗೆ, ಉಪ್ಪು, ಸ್ವಲ್ಪ ಇಂಗು ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಬೇಬಿ ಕಾರ್ನ್ ಸ್ಲೈಸ್ ಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ [...]

By | 2018-03-26T20:11:08+00:00 March 26th, 2018|Kannada, Tindi Tinisu|0 Comments

ALU TAVA FRY ಆಲೂ ತವಾ ಫ್ರೈ

ಸಂಜೆ ವೇಳೆಗೆ ಅಥವಾ ಅನ್ನ ಸಾರಿನೊಂದಿಗೆ Side dish ಆಗಿ ತಿನ್ನಬಹುದು! ಮಾಡುವುದು ಸುಲಭ! ಮಾಡುವ ವಿಧಾನ:- ದಪ್ಪ ದಪ್ಪ ಆಲೂಗೆಡ್ಡೆ ಒಂದು ವಿಷಲ್ ಕೂಗಿಸಿ ಸಿಪ್ಪೆ ತೆಗೆದು ತೆಳ್ಳಗೆ ಸ್ಲೈಸ್ ಮಾಡಿಡಿ. 1 ಈರುಳ್ಳಿ, 1 ಟೋಮೇಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.    1/2 ಕ್ಯಾರೆಟ್ ತುರಿದಿಡಿ. ತಟ್ಟೆಯಲ್ಲಿ 2 ಚಮಚ ಚಿರೋಟಿ ರವೆ, 1 ಚಮಚ ಹುರಿಗಡಲೆ ಪುಡಿ, 1/2 ಚಮಚ ಖಾರದ ಪುಡಿ, ಚಿಟಿಕೆ ಅರಿಷಿಣ, ಉಪ್ಪು, 1/2 ಚಮಚ [...]

By | 2018-03-23T11:34:00+00:00 March 23rd, 2018|Kannada, Tindi Tinisu|0 Comments

BROCCOLI SOUP ಬ್ರೊಕ್ಲೀ ಸೂಪ್

ಬ್ರೊಕ್ಲೀ ಎಂದರೆ ಗೋಭಿಯ ಹಾಗಿರುವ ಹಸಿರು ಬಣ್ಣದ ತರಕಾರಿ! ಇದರಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶಗಳು ತುಂಬಿವೆ. ಆರೋಗ್ಯಕರವಾದ, ರುಚಿಕರವಾದ, ಸುಲಭವಾಗಿ ಮಾಡಬಹುದಾದ ಬ್ರೊಕ್ಲೀ ಸೂಪಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ಬ್ರೊಕ್ಲೀಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ ಬಿಸಿ ನೀರಿನಲ್ಲಿ ಹಾಕಿ 10 ನಿಮಿಷ ಬಿಟ್ಟು ತೆಗೆದಿಡಿ. 1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ.    4 ಬೆಳ್ಳುಳ್ಳಿ ಎಸಳು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ಬಾಣಲೆಯಲ್ಲಿ [...]

By | 2018-03-22T20:15:36+00:00 March 22nd, 2018|Kannada, Tindi Tinisu|0 Comments

OREO MILK SHAKE ಓರಿಯೋ ಮಿಲ್ಕ್ ಷೇಕ್

ಬೇಸಿಗೆಯ ದಿನಗಳಲ್ಲಿ ಕುಡಿಯಲು, ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ ಬಹಳ ಸುಲಭ:-    2 ಪ್ಯಾಕೇಟ್ ಓರಿಯೋ ಬಿಸ್ಕತ್, 1 ಲೋಟ ತಣ್ಣನೆ ಹಾಲು, 2 ಕಪ್ ಐಸ್ ಕ್ರೀಮ್, 2 ಚಮಚ ಚಾಕೊಲೇಟ್ ಸಾಸ್ ಹಾಕಿ Mixie jar ನಲ್ಲಿ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿದರೆ ಓರಿಯೋ ಮಿಲ್ಕ್ ಷೇಕ್ ಸಿದ್ಧ!    ಐಸ್ ಕ್ರೀಮ್, ಚಾಕೊಲೇಟ್ ಸಾಸ್, ಬಿಸ್ಕತ್ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು! ಧನ್ಯವಾದಗಳು

By | 2018-03-19T18:57:49+00:00 March 19th, 2018|Kannada, Tindi Tinisu|0 Comments

WATERMELON SMOOTHIE ವಾಟರ್ ಮೆಲನ್ ಸ್ಮೂದಿ

ಬೇಸಿಗೆಗೆ ಒಂದು ತಂಪಾದ ಪಾನೀಯ! ವಾಟರ್ ಮೆಲನ್ ಸ್ಮೂದಿ! ಬೇಸಿಗೆಗೆ ತಂಪು ಮಾಡುವ ಕಲ್ಲಂಗಡಿ ಹಣ್ಣಿನ ರುಚಿಯಾದ ಸ್ಮೂದಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಕಲ್ಲಂಗಡಿ ಹಣ್ಣು ಸಿಪ್ಪೆ, ಬೀಜ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.    4 ಪುದೀನಾ ಎಲೆ ತೊಳೆದಿಡಿ ( ಬೇಕಾದರೆ ) ಮಿಕ್ಸರ್ ಜಾರಿಗೆ ಹಣ್ಣಿನ ತುಂಡುಗಳು, ಶುಂಠಿ ತುರಿ, ಪುದೀನಾ ಎಲೆ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿ, ಕೊನೆಯಲ್ಲಿ ಐಸ್ ಕ್ಯೂಬ್ [...]

By | 2018-03-15T21:02:39+00:00 March 15th, 2018|Kannada, Tindi Tinisu|0 Comments

KOSAMBARI ಕೋಸಂಬರಿ

ಕೋಸಂಬರಿ ನಾವೂ ಮಾಡ್ತೀವಿ ಯಾವಾಗಲೂ ಅದರ ರೆಸಿಪಿ ಯಾಕೆ ಅಂದುಕೊಂಡಿರಾ!!! ಇದು ಸ್ವಲ್ಪ ವಿಶೇಷವಾದ ರೆಸಿಪಿ! ನಮ್ಮ ಚಿಕ್ಕ ಅತ್ತೆಯಿಂದ ಕಲಿತದ್ದು! ಮಾಡುವ ವಿಧಾನ:- 1 ಚಿಕ್ಕ ಲೋಟ ಹೆಸರು ಬೇಳೆ ತೊಳೆದು 2 ಗಂಟೆ ನೆನೆಸಿ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿ, ನೀರು ಸೋರಿ ಹಾಕಿಡಿ. ಹೆಸರು ಬೇಳೆ ಬೇಯಿಸಿದ ನೀರನ್ನು ಚೆಲ್ಲದೆ ರಸಂ, ಸಾಂಬಾರು ಮಾಡುವಾಗ ಉಪಯೋಗಿಸಿ. 1 ಸೌತೇ ಕಾಯಿ ಕಹಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ [...]

By | 2018-03-14T19:56:25+00:00 March 12th, 2018|Kannada, Tindi Tinisu|0 Comments

HURIGADALE UNDE ಹುರಿಗಡಲೆ ಉಂಡೆ

ಬೆಲ್ಲದಿಂದ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಲೋಟ ಬೆಲ್ಲ ಸಣ್ಣಗೆ ಹೆಚ್ಚಿಡಿ. 2 ಲೋಟ ಹುರಿಗಡಲೆ ( ಪುಟಾಣಿ ) ನುಣ್ಣಗೆ ಪುಡಿ ಮಾಡಿಡಿ.      1 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 1/2 ಲೋಟ ಒಣ ಕೊಬ್ಬರಿ ತುರಿದಿಡಿ. 1/2 ಲೋಟ ಬಿಳಿ ಎಳ್ಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ. 4 ಏಲಕ್ಕಿ ಪುಡಿ ಮಾಡಿಡಿ. ಬಾಣಲೆಯಲ್ಲಿ ಬೆಲ್ಲದ ಪುಡಿಗೆ 1/2 ಲೋಟ ನೀರು ಹಾಕಿ [...]

By | 2018-03-08T22:15:37+00:00 March 8th, 2018|Kannada, Tindi Tinisu|0 Comments

BELLA & DRY FRUITS LASSI ಬೆಲ್ಲ & ಡ್ರೈ ಫ್ರೂಟ್ಸ್ ಲಸ್ಸಿ

ಬೇಸಿಗೆ ಕಾಲದಲ್ಲಿ ಕುಡಿಯಲು ಬಯಸುವ ಪಾನೀಯಗಳಲ್ಲಿ ಲಸ್ಸಿ ಕೂಡ ಒಂದು! ದೇಹವನ್ನು ತಂಪಾಗಿಡುವುದರಲ್ಲಿ ಈ ಪಾನೀಯ ಸಹಕರಿಸುತ್ತದೆ! ಲಸ್ಸಿಯನ್ನು ಸಾಧಾರಣವಾಗಿ ಸಕ್ಕರೆ ಹಾಕಿ ಮಾಡುವುದು! ಆದರೆ ಆರೋಗ್ಯಕರವಾದ ಬೆಲ್ಲ ಹಾಕಿ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- ನಿಮಗೆ ಇಷ್ಟವಾದ ಡ್ರೈ ಫ್ರೂಟ್ಸ್ ಗಳನ್ನು ಏಲಕ್ಕಿಯೊಂದಿಗೆ ನುಣ್ಣಗೆ ಪುಡಿ ಮಾಡಿಡಿ.     2 ಚಮಚ ಬೆಲ್ಲ ಪುಡಿ ಮಾಡಿಡಿ. 1 ಲೋಟ ಗಟ್ಟಿಯಾದ ಸಿಹಿ ಮೊಸರು, ಡ್ರೈ ಫ್ರೂಟ್ಸ್ ಪುಡಿ, ಬೆಲ್ಲದ ಪುಡಿ, ಚಿಟಿಕೆ ಉಪ್ಪು [...]

By | 2018-03-08T22:09:57+00:00 March 8th, 2018|Kannada, Tindi Tinisu|0 Comments