Oota, foods prepared for Lunch / Dinner in South India are commonly referred as Oota. This is a segment where in you get to find over fifty such food item recipes that are cooked for lunch. Since people living in the South Indian region prefer having food cooked with rice, there are plenty of varieties of rice can be seen in the articles. Popular foods such as Bisibele Bath, Tomato Rice, Veg. Pulao, Veg. Biryani are the most searched recipes. Other than these, Akki Rotti, Jolada Rotti, Ragi Rotti, Ragi Mudde, Poori are also popular. Almost every vegetarian item (as of now) recipes are available with us.

JEERA RICE & DAL FRY ಜೀರಾ ರೈಸ್ & ದಾಲ್ ಫ್ರೈ

ಉತ್ತರ ಭಾರತದ ಜನಪ್ರಿಯ ಆಹಾರ! ಎರಡೂ ಒಳ್ಳೆಯ ಕಾಂಬಿನೇಶನ್! ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಜೀರಾ ರೈಸ್ ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಹೆಚ್ಚಾಗಿ ಹಾಕಿ ತೆರೆದ ಬಾಣಲೆಯಲ್ಲಿ/ ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ 1 ದೊಡ್ಡ ಚಮಚ ಜೀರಿಗೆ, [...]

By | 2018-02-16T20:55:27+00:00 February 16th, 2018|Kannada, Oota|0 Comments

SEEME BADANE KOOTU ಸೀಮೆ ಬದನೆ ಕೂಟು

ಸೀಮೆ ಬದನೆ ಕಾಯಿಯ ಒಂದು ರುಚಿಯಾದ ರೆಸಿಪಿ ಇಲ್ಲಿದೆ! ಸೀಮೆ ಬದನೆ ಕೂಟು ಮಾಡುವ ವಿಧಾನ:- 4 ಚಮಚ ಕಡಲೇ ಬೇಳೆಯನ್ನು 2 ಗಂಟೆ ನೆನೆಸಿಡಿ. 1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1 ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ. 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ ಹುರಿದು ಪುಡಿ ಮಾಡಿಡಿ. 4 ಚಮಚ ಕಾಯಿ ತುರಿದಿಡಿ. ಕಡಲೇ ಬೇಳೆ, ಉದ್ದಿನ ಬೇಳೆ, ಧನಿಯಾ ಪುಡಿ, ಮೆಣಸಿನಕಾಯಿ ಪುಡಿ, [...]

By | 2018-02-16T20:50:32+00:00 February 16th, 2018|Kannada, Oota|0 Comments

GREEN PEAS PALAV ( Easy n Tasty ) ಗ್ರೀನ್ ಪೀಸ್ ಪಲಾವ್ ( ಈಝಿ & ಟೇಸ್ಟಿ )

ವರ್ಷ ಪೂರ ಎಲ್ಲಾ ಕಡೆ ಸಿಗುವ ಬಟಾಣಿಯ ರುಚಿಯಾದ ಪಲಾವ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ 30 ನಿಮಿಷ ನೆನೆಸಿಡಿ. 1 ಲೋಟ ಹಸಿ ಬಟಾಣಿ ಬಿಡಿಸಿ ತೊಳೆದಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.    1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಚಮಚ ಸೋಂಪು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.    ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ, ಬಟಾಣಿ, ಹಸಿ [...]

By | 2018-02-09T20:14:25+00:00 February 9th, 2018|Kannada, Oota|0 Comments

KUMBALA KAYI, BANNADA SOUTHE SAMBAR ಕುಂಬಳ ಕಾಯಿ, ಬಣ್ಣದ ಸೌತೇ ಸಾಂಬಾರ್

ಸಾಧಾರಣವಾಗಿ ಎಲ್ಲಾ ಕಡೆ ಸಿಗುವ ತರಕಾರಿಗಳಾದ ಸಿಹಿ ಕುಂಬಳ ಮತ್ತು ಬಣ್ಣದ ಸೌತೇ ಕಾಯಿಯ ರುಚಿಯಾದ ಸಾಂಬಾರ್ ಮಾಡುವ ರೆಸಿಪಿ ಇಲ್ಲಿದೆ! ಕುಂಬಳ ಕಾಯಿ, ಬಣ್ಣದ ಸೌತೇ ಕಾಯಿ ಸಾಂಬಾರ್ ಮಾಡುವ ವಿಧಾನ:- 1/4 ತೊಗರಿ ಬೇಳೆ ತೊಳೆದು ಒಂದು ಚಮಚ ಎಣ್ಣೆ ಹಾಕಿ ಬೇಯಿಸಿಡಿ. 1/4 ಕೇಜಿ ಸಿಹಿ ಕುಂಬಳ, ಒಂದು ಬಣ್ಣದ ಸೌತೇ ಕಾಯಿ (ಮಂಗಳೂರು ಸೌತೇ ಕಾಯಿ) ಬೀಜ ತೆಗೆದು ಸಿಪ್ಪೆ ಸಮೇತ ದೊಡ್ಡ ದೊಡ್ಡದಾಗಿ ಹೆಚ್ಚಿ ಬೇರೆ ಬೇಯಿಸಿಡಿ. ಬಣ್ಣದ ಸೌತೇ [...]

By | 2018-02-08T20:39:59+00:00 February 8th, 2018|Kannada, Oota|0 Comments

MAVINA KAYI GOJJU ಮಾವಿನ ಕಾಯಿ ಗೊಜ್ಜು

ಬೇಸಿಗೆ ಬಂತೆಂದರೆ ಎಲ್ಲಾ ಕಡೆ ಮಾವಿನ ಕಾಯಿ, ಹಣ್ಣಿನ ಸುವಾಸನೆ ತುಂಬಿ ಹೋಗುತ್ತದೆ! ಮಾವಿನ ಕಾಯಿಯಿಂದ ಮಾಡುವ ಸುಲಭವಾದ, ರುಚಿಯಾದ, ತಿಂಗಳಾದರೂ ಕೆಡದ ಗೊಜ್ಜಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಗಟ್ಟಿಯಾದ ತೋತಾಪುರಿ ಮಾವಿನ ಕಾಯಿ ಆಯ್ಕೆ ಮಾಡಿ ಕೊಳ್ಳಿ. ಗುಂಡು ಮಾವಿನಲ್ಲೂ ಮಾಡಬಹುದು. ಸ್ವಲ್ಪ ಹುಳಿ ಹೆಚ್ಚು ಇರುತ್ತದೆ! ತೋತಾಪುರಿ ಮಾವು ಹುಳಿ ಕಡಿಮೆ! 2 ಮಾವಿನ ಕಾಯಿ ತೊಳೆದು, ಒರೆಸಿ ತುರಿದಿಡಿ. ನೀರಿನಂಶ ಸ್ವಲ್ಪವೂ ಇರಬಾರದು ಈ ಗೊಜ್ಜು ಮಾಡುವಾಗ!    1 ಟೀ [...]

By | 2018-02-05T22:34:14+00:00 February 5th, 2018|Kannada, Oota, upahara|0 Comments

UPPU SAARU ಉಪ್ಪು ಸಾರು

ನಮ್ಮ ಬಸ್ಸಾರಿನ ತಮ್ಮ ಅಂತ ಹೇಳಬಹುದು. ರುಚಿಯಾಗಿ, ಸುಲಭವಾಗಿ ಮಾಡಬಹುದಾದ ಸಾರು! ಮಾಡುವ ವಿಧಾನ:- ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ, ಕಾಳು, ಸೊಪ್ಪು ಬೇಳೆ ಜೊತೆಗೆ ಬೇಯಿಸಿ ನೀರು ಸೋರಿ ಹಾಕಿ, ಕಟ್ಟು ತೆಗೆದಿಡಿ. ಕಟ್ಟನ್ನು ಸಾರು ಭಾಡಲು ಉಪಯೋಗಿಸಿ. ಬೇಯಿಸಿದ್ದನ್ನು ಒಗ್ಗರಣೆ ಹಾಕಿ ಪಲ್ಯ ಮಾಡಿ. ಖಾರಾ ಮಸಾಲೆ ರುಬ್ಬಲು:- 6 ರಿಂದ 8 ಒಣ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. 2 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ.    ಹುರಿದ ಮೆಣಸಿನಕಾಯಿ, 1 ಚಿಕ್ಕ [...]

By | 2018-02-03T23:00:05+00:00 February 3rd, 2018|Kannada, Oota|0 Comments

ERULLI MAJJIGE HULI ಈರುಳ್ಳಿ ಮಜ್ಜಿಗೆ ಹುಳಿ

ಸಾಮಾನ್ಯವಾಗಿ ಎಲ್ಲರೂ ಬೂದುಗುಂಬಳದ ಮಜ್ಜಿಗೆ ಹುಳಿ ಮಾಡುತ್ತಾರೆ. ಈರುಳ್ಳಿ ಮಜ್ಜಿಗೆ ಹುಳಿ ಕೂಡ ತುಂಬಾ ಚೆನ್ನಾಗಿರುತ್ತದೆ! ಆಂಧ್ರ ಸ್ಟೈಲ್ ಹೋಟೆಲ್ ಗಳಲ್ಲಿ ಮಾಡುವ ವಿಧಾನ ಇಲ್ಲಿದೆ! ರುಚಿಯಾಗಿ, ವಿಭಿನ್ನವಾಗಿರುತ್ತದೆ! ಮಾಡುವ ವಿಧಾನ:- 2 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 1 ಚಮಚ ಹುರಿಗಡಲೆ, 2 ಚಮಚ ಕಾಯಿ ತುರಿ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಚಟ್ನಿಯ ಹದಕ್ಕೆ ರುಬ್ಬಿಡಿ.    ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹೆಚ್ಚಿದ ಈರುಳ್ಳಿ, ಕರಿಬೇವು, [...]

By | 2018-01-31T20:48:17+00:00 January 31st, 2018|Kannada, Oota|0 Comments

INSTANT PULIOGARE GOJJU ಇನ್ಸ್ಟೆಂಟ್ ಪುಳಿಯೋಗರೆ ಗೊಜ್ಜು

ಪುಳಿಯೋಗರೆ ಎಲ್ಲರ ಮೆಚ್ಚಿನ ತಿಂಡಿ! ಅದರ ಗೊಜ್ಜು ಮಾಡಿಟ್ಟರೆ ಯಾವಾಗ ಬೇಕಾದರೂ ಅನ್ನ ಮಾಡಿ ಕಲೆಸಿ ಕೊಳ್ಳಬಹುದು! ಆದರೆ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ ಸ್ವಲ್ಪ ಕಷ್ಟದ, ನಿಧಾನವಾದ ಕೆಲಸವೇ! ಹೀಗೆ ಮಾಡಿ ನೋಡಿ! ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ, ಕಿವುಚಿ ರಸ ತೆಗೆದಿಡಿ. ಕಡಲೇ ಬೇಳೆ - 1 ಟೇಬಲ್ ಚಮಚ ಧನಿಯಾ - 1 ಟೇಬಲ್ ಚಮಚ ಬಿಳಿ [...]

By | 2018-01-30T20:04:42+00:00 January 30th, 2018|Kannada, Oota|0 Comments

JOLADA ROTTI ಜೋಳದ ರೊಟ್ಟಿ

ಉತ್ತರ ಕರ್ನಾಟಕದ ಜನಪ್ರಿಯ ಆಹಾರ! ಅಲ್ಲಿನ ಜನ ಆ ರೊಟ್ಟಿಯನ್ನು ಬಡಿಯುವುದು ನೋಡಲೇ ಬಲು ಚೆಂದ! ಆದರೆ ಹಾಗೆ ಬಡಿಯಲು ಸಾಕಷ್ಟು ಅಭ್ಯಾಸ ಬೇಕು! ಬಡಿಯಲು ಬರುವುದಿಲ್ಲವೆಂದು ಜೋಳದ ರೊಟ್ಟಿಯನ್ನು ತಿನ್ನದಿರಲು ಆಗುವುದೇ!? ಈ ರೊಟ್ಟಿಯನ್ನು ಬಡಿಯದೇ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬಾಣಲೆಯಲ್ಲಿ 1 1/2 ಲೋಟ ನೀರು ಬಿಸಿಯಾಗಲು ಇಡಿ. ನೀರು ಕುದಿಯುವಾಗ 1 ಲೋಟ ಜೋಳದ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. [...]

By | 2018-01-29T19:35:29+00:00 January 29th, 2018|Kannada, Oota, upahara|0 Comments

TRIRANGI POORI / CHAPATHI ತ್ರಿರಂಗಿ ಪೂರಿ / ಚಪಾತಿ

ಎಲ್ಲರಿಗೂ ಗಣ ರಾಜ್ಯೋತ್ಸವದ ಶುಭಾಷಯಗಳು! ಜನವರಿ 26 ನಮ್ಮ ಭಾರತ ಗಣ ರಾಜ್ಯೋತ್ಸವದ ದಿನ! ನಮ್ಮ ಭಾರತದ ಹೆಮ್ಮೆಯ ತ್ರಿರಂಗದ ಧ್ವಜದ, ಮೂರು ಬಣ್ಣಗಳನ್ನು ಒಂದೇ ತಿಂಡಿಯಲ್ಲಿ ತರುವ ಸಣ್ಣ ಪ್ರಯತ್ನ ನಾನಿಲ್ಲಿ ಮಾಡಿದ್ದೇನೆ. ಈ ಪ್ರಯತ್ನ ನಾನು ನಮ್ಮ ದೇಶದ ಮೇಲಿಟ್ಟಿರುವ ದೇಶಾಭಿಮಾನದಿಂದ! ಬೇರೆ ಯಾವುದೇ ದುರುದ್ದೇಶ ಇಲ್ಲ! ತ್ರಿರಂಗಿ ಪೂರಿ ಮಾಡುವ ವಿಧಾನ:- ಕೇಸರಿ ಬಣ್ಣದ ಹಿಟ್ಟಿಗಾಗಿ:- 2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು ನುಣ್ಣಗೆ ರುಬ್ಬಿ. ಸ್ವಲ್ಪ ಗೋಧಿ ಹಿಟ್ಟು, ಸ್ವಲ್ಪ ಚಿರೋಟಿ ರವೆ, [...]

By | 2018-01-27T23:08:38+00:00 January 25th, 2018|Kannada, Oota, upahara|0 Comments