Kannada

There are hundreds of recipes with step by step procedure in Kannada is available here. The main advantage of this article is, the recipes are given in regional language Kannada. The recipe include all types of foods cooked in India, especially in South India. The list contains all items that are prepared for breakfast, lunch, brunch, dinner, snacks, chats, sweets, cuisines, cold drinks, hot beverages and many other items. it also includes traditional food recipes that are prepared in other parts of India. The recipes is described with images so that those who refer the article will have no confusion.

HEEREKAI METHI KICHADI ಹೀರೇ ಕಾಯಿ ಮೇಥಿ ಕಿಚಡಿ

ಆರೋಗ್ಯಕ್ಕೆ ಹೀರೆಕಾಯಿ ಮತ್ತು ಮೆಂತ್ಯ ಸೊಪ್ಪು ಎರಡೂ ಬಹಳ ಒಳ್ಳೆಯದು! ಈ ಆರೋಗ್ಯಕರವಾದ ತರಕಾರಿಗಳನ್ನು ಹಾಕಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಹೀರೇಕಾಯಿ, 1 ಕಟ್ಟು ಮೆಂತ್ಯ ಸೊಪ್ಪು, 1 ಈರುಳ್ಳಿ, 2 ಟೋಮೋಟೋ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.    1 ಲೋಟ ಅಕ್ಕಿ/ಗೋಧಿ ನುಚ್ಚು, 1/2 ಲೋಟ ಹೆಸರು ಬೇಳೆ ಸ್ವಲ್ಪ ಹುರಿದು ತೊಳೆದಿಡಿ. ನಾನು ಹಾಕಿರುವುದು ಗೋಧಿ ನುಚ್ಚು ! ( Broken wheat ) ಕುಕ್ಕರಿನಲ್ಲಿ [...]

By | 2018-03-30T23:20:13+00:00 March 30th, 2018|Kannada, upahara|0 Comments

UPMA CUTLET ಉಪ್ಮಾ ಕಟ್ಲೆಟ್

ಉಪ್ಮಾ / ಉಪ್ಪಿಟ್ಟು ಎಲ್ಲರ ಮನೆಯಲ್ಲೂ ಸಾಧಾರಣವಾಗಿ ಮಾಡುವ ತಿಂಡಿ! ಎಷ್ಟು ಲೆಕ್ಕ ಹಾಕಿ ಮಾಡಿದರೂ ಸ್ವಲ್ಪ ಉಳಿದು ಹೋಗತ್ತದೆ! ಮಿಕ್ಕ ಉಪ್ಪಿಟ್ಟಿನಿಂದ ರುಚಿಯಾದ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ! ಮಿಶ್ರಣ ವಿಧಾನ:- ಉಳಿದ ಉಪ್ಪಿಟ್ಟಿಗೆ ಸ್ವಲ್ಪಹೆಚ್ಚಿದ ಕೊತ್ತಂಬರಿ ಸೊಪ್ಪು, ಅದಕ್ಕೆ ಹಿಡಿಸುವಷ್ಟು ಕಡಲೇ ಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕಟ್ಲೆಟ್ ತಟ್ಟಿಡಿ.    2 ಚಮಚ ಕಾರ್ನ್ ಫ್ಲೋರ್ ಗೆ ಸ್ವಲ್ಪ ಉಪ್ಪು ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ [...]

By | 2018-03-29T22:37:33+00:00 March 29th, 2018|Kannada, Tindi Tinisu|0 Comments

WATERMELON MILK SHAKE ವಾಟರ್ ಮೆಲನ್ ಮಿಲ್ಕ್ ಷೇಕ್

ಬೇಸಿಗೆಯ ದಿನಗಳಲ್ಲಿ ಕುಡಿಯಲು ತುಂಬಾ ಚೆನ್ನಾಗಿರುವ ಪಾನೀಯಗಳಲ್ಲಿ ಒಂದು! ಮಾಡುವುದು ಸುಲಭ! ರುಚಿಕರ! ಆರೋಗ್ಯಕರ! ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು ಕಲ್ಲಂಗಡಿ ಹಣ್ಣು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಡ್ರೈ ಫ್ರೂಟ್ಸ್ ಹೆಚ್ಚಿಡಿ.    ಮೊದಲು ಡ್ರೈ ಫ್ರೂಟ್ಸ್ Mixie jar ನಲ್ಲಿ ಹಾಕಿ ಪುಡಿ ಮಾಡಿ. ನಂತರ ಕಲ್ಲಂಗಡಿ ಹಣ್ಣಿನ ತುಂಡುಗಳು, 1 ಲೋಟ ತಣ್ಣನೆಯ ಹಾಲು, 2 ಚಮಚ ಜೇನುತುಪ್ಪ ಸೇರಿಸಿ ಇನ್ನೊಂದು ಬಾರಿ ತಿರುವಿದರೆ ರುಚಿಯಾದ ವಾಟರ್ ಮೆಲನ್ ಮಿಲ್ಕ್ ಷೇಕ್ [...]

By | 2018-03-28T23:03:06+00:00 March 28th, 2018|Kannada, Tindi Tinisu|0 Comments

ALU MATTAR ಆಲೂ ಮಟರ್

ಆಲೂಗೆಡ್ಡೆ ಮತ್ತು ಬಟಾಣಿಯ ಸೂಪರ್ ಕಾಂಬಿನೇಶನ್! ಚಪಾತಿ, ಪುಲ್ಕಾ, ರೋಟಿ ಎಲ್ಲದರೊಂದಿಗೂ ಒಳ್ಳೆಯ ಕಾಂಬಿನೇಶನ್! ಮಾಡುವ ವಿಧಾನ:- 1 ದೊಡ್ಡ ಆಲೂಗೆಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ, ಹಸಿ ಬಟಾಣಿಯೊಂದಿಗೆ ಬೇಯಿಸಿಡಿ.    1 ಈರುಳ್ಳಿ, 2 ಟೋಮೋಟೋ, 4 ಎಸಳುಬೆಳ್ಳುಳ್ಳಿ, 1/2 ಶುಂಠಿ ಸಣ್ಣಗೆ ಹೆಚ್ಚಿ, 2 ಚಮಚ ಎಣ್ಣೆ, ಸ್ವಲ್ಪ ಗೋಡಂಬಿ ಹಾಕಿ ಹುರಿದು, ನುಣ್ಣಗೆ ರುಬ್ಬಿಡಿ.    ಬಾಣಲೆಯಲ್ಲಿ 4 ಚಮಚ ತುಪ್ಪ/ ಎಣ್ಣೆ ಹಾಕಿ ಜೀರಿಗೆ, ಅರಿಷಿಣ ಪುಡಿ ಹಾಕಿ ಹುರಿದು [...]

By | 2018-03-27T22:50:28+00:00 March 27th, 2018|Kannada, Oota|0 Comments

BABY CORN BAJJI ಬೇಬಿ ಕಾರ್ನ್ ಬಜ್ಜಿ

ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಬಜ್ಜಿ! ಮಾಡುವ ವಿಧಾನ:- ಬೇಬಿ ಕಾರ್ನ್ ಅನ್ನು ತೊಳೆದು ತೆಳ್ಳಗೆ ಸ್ಲೈಸ್ ಮಾಡಿಡಿ.    ಒಂದು ಬಟ್ಟಲಿನಲ್ಲಿ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, 1/2 ಚಮಚ ಚಾಟ್ ಮಸಾಲ, 1/2 ಚಮಚ ಜೀರಿಗೆ, ಉಪ್ಪು, ಸ್ವಲ್ಪ ಇಂಗು ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಬೇಬಿ ಕಾರ್ನ್ ಸ್ಲೈಸ್ ಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ [...]

By | 2018-03-26T20:11:08+00:00 March 26th, 2018|Kannada, Tindi Tinisu|0 Comments

DRY FRUITS GOJJU ಡ್ರೈ ಫ್ರೂಟ್ಸ್ ಗೊಜ್ಜು

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ಇದರ ರುಚಿಯಾದ ಗೊಜ್ಜು ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ನಿಮಗೆ ಇಷ್ಟವಾಗುವ ಯಾವುದಾದರೂ ಡ್ರೈ ಫ್ರೂಟ್ಸ್ ಗಳನ್ನು ಸಣ್ಣಗೆ ಹೆಚ್ಚಿಡಿ. ಕಡಲೇ ಬೇಳೆ - 1 ಟೇಬಲ್ ಚಮಚ ಉದ್ದಿನ ಬೇಳೆ - 1/2 ಟೇಬಲ್ ಚಮಚ ಮೆಣಸು - 1/4 ಟೀ ಚಮಚ ಬಿಳಿ ಎಳ್ಳು - 1 ಟೇಬಲ್ ಚಮಚ ಬ್ಯಾಡಗಿ ಮೆಣಸಿನಕಾಯಿ - 6 ರಿಂದ 8 ( ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ [...]

By | 2018-03-26T20:32:41+00:00 March 24th, 2018|Kannada, Oota|0 Comments

ALU TAVA FRY ಆಲೂ ತವಾ ಫ್ರೈ

ಸಂಜೆ ವೇಳೆಗೆ ಅಥವಾ ಅನ್ನ ಸಾರಿನೊಂದಿಗೆ Side dish ಆಗಿ ತಿನ್ನಬಹುದು! ಮಾಡುವುದು ಸುಲಭ! ಮಾಡುವ ವಿಧಾನ:- ದಪ್ಪ ದಪ್ಪ ಆಲೂಗೆಡ್ಡೆ ಒಂದು ವಿಷಲ್ ಕೂಗಿಸಿ ಸಿಪ್ಪೆ ತೆಗೆದು ತೆಳ್ಳಗೆ ಸ್ಲೈಸ್ ಮಾಡಿಡಿ. 1 ಈರುಳ್ಳಿ, 1 ಟೋಮೇಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.    1/2 ಕ್ಯಾರೆಟ್ ತುರಿದಿಡಿ. ತಟ್ಟೆಯಲ್ಲಿ 2 ಚಮಚ ಚಿರೋಟಿ ರವೆ, 1 ಚಮಚ ಹುರಿಗಡಲೆ ಪುಡಿ, 1/2 ಚಮಚ ಖಾರದ ಪುಡಿ, ಚಿಟಿಕೆ ಅರಿಷಿಣ, ಉಪ್ಪು, 1/2 ಚಮಚ [...]

By | 2018-03-23T11:34:00+00:00 March 23rd, 2018|Kannada, Tindi Tinisu|0 Comments

BROCCOLI SOUP ಬ್ರೊಕ್ಲೀ ಸೂಪ್

ಬ್ರೊಕ್ಲೀ ಎಂದರೆ ಗೋಭಿಯ ಹಾಗಿರುವ ಹಸಿರು ಬಣ್ಣದ ತರಕಾರಿ! ಇದರಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶಗಳು ತುಂಬಿವೆ. ಆರೋಗ್ಯಕರವಾದ, ರುಚಿಕರವಾದ, ಸುಲಭವಾಗಿ ಮಾಡಬಹುದಾದ ಬ್ರೊಕ್ಲೀ ಸೂಪಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ಬ್ರೊಕ್ಲೀಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ ಬಿಸಿ ನೀರಿನಲ್ಲಿ ಹಾಕಿ 10 ನಿಮಿಷ ಬಿಟ್ಟು ತೆಗೆದಿಡಿ. 1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ.    4 ಬೆಳ್ಳುಳ್ಳಿ ಎಸಳು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ಬಾಣಲೆಯಲ್ಲಿ [...]

By | 2018-03-22T20:15:36+00:00 March 22nd, 2018|Kannada, Tindi Tinisu|0 Comments

GOJJANNA ಗೊಜ್ಜನ್ನ

ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- ನಿಂಬೆ ಹಣ್ಣು ಗಾತ್ರದ ಹುಣಿಸೆ ರಸ ತೆಗೆದಿಡಿ. 4 ಚಮಚ ಕಾಯಿ ತುರಿದಿಡಿ.     ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ. 1 ಲೋಟ ಅಕ್ಕಿ ತೊಳೆದು ಹುಣಿಸೆ ರಸ, 2 ಚಮಚ ರಸಂ ಪುಡಿ ( ಸಾರಿನ ಪುಡಿ ), ಉಪ್ಪು, ಚಿಟಿಕೆ ಅರಿಷಿಣ, ಚೂರು ಬೆಲ್ಲ 2 ಲೋಟ ನೀರು [...]

By | 2018-03-20T23:39:54+00:00 March 20th, 2018|Kannada, Oota, upahara|0 Comments

OREO MILK SHAKE ಓರಿಯೋ ಮಿಲ್ಕ್ ಷೇಕ್

ಬೇಸಿಗೆಯ ದಿನಗಳಲ್ಲಿ ಕುಡಿಯಲು, ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ ಬಹಳ ಸುಲಭ:-    2 ಪ್ಯಾಕೇಟ್ ಓರಿಯೋ ಬಿಸ್ಕತ್, 1 ಲೋಟ ತಣ್ಣನೆ ಹಾಲು, 2 ಕಪ್ ಐಸ್ ಕ್ರೀಮ್, 2 ಚಮಚ ಚಾಕೊಲೇಟ್ ಸಾಸ್ ಹಾಕಿ Mixie jar ನಲ್ಲಿ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿದರೆ ಓರಿಯೋ ಮಿಲ್ಕ್ ಷೇಕ್ ಸಿದ್ಧ!    ಐಸ್ ಕ್ರೀಮ್, ಚಾಕೊಲೇಟ್ ಸಾಸ್, ಬಿಸ್ಕತ್ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು! ಧನ್ಯವಾದಗಳು

By | 2018-03-19T18:57:49+00:00 March 19th, 2018|Kannada, Tindi Tinisu|0 Comments