+91 9611100374|admin@indiaforyou.in

Indian Food Recipe

/Indian Food Recipe

MYSORE RASAM ಮೈಸೂರು ರಸಂ

ಮೈಸೂರು ಅಂದದ ಊರು! ಮೈಸೂರಿನ KRS, ಅರಮನೆ, ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ! ಹೀಗೆ ಬೆಳೆಯುತ್ತಾ ಹೋಗುವ ಪಟ್ಟಿಗೆ ಸೇರಿಸಲು ಇನ್ನೊಂದು ಹೆಸರು ಮೈಸೂರು ರಸಂ! ರುಚಿಯಾದ, ಸುಲಭವಾಗಿ ಮಾಡಬಹುದಾದ ರಸಂ ಪುಡಿ, ರಸಂ ಎರಡರ ರೆಸಿಪಿ ಇಲ್ಲಿದೆ! ರಸಂ ಪುಡಿ ಬೇಕಾಗುವ ಸಾಮಗ್ರಿಗಳು ಬ್ಯಾಡಗಿ ಮೆಣಸಿನಕಾಯಿ - 200 ಗ್ರಾಂ ಧನಿಯ - 4 ಟೇಬಲ್ ಚಮಚ ಕರಿ ಮೆಣಸು - 2 ಟೇಬಲ್ ಚಮಚ ಸಾಸಿವೆ - 2 ಟೇಬಲ್ ಚಮಚ ಜೀರಿಗೆ [...]

By | 2017-12-06T22:59:44+00:00 December 6th, 2017|Kannada, Oota|0 Comments

NACHOS & CHEESE DIP ನ್ಯಾಚೋಸ್ & ಚೀಸ್ ಡಿಪ್

ಮಕ್ಕಳಿಗೆ ಬಹಳ ಇಷ್ಟವಾದ ಕುರುಕಲು ತಿಂಡಿ! ಮಕ್ಕಳಿಗೆ ಏನೂ ದೊಡ್ಡವರಿಗೂ ಇಷ್ಟವಾದದ್ದು! ಮನೆಯಲ್ಲಿ ಮಾಡುವ ಸುಲಭವಾದ ವಿಧಾನ ಇಲ್ಲಿದೆ!ನ್ಯಾಚೋಸ್ 1 ಅಳತೆ ಜೋಳದ ಹಿಟ್ಟು ( Maize flour, ಅಂಗಡಿಗಳಲ್ಲಿ ಸಿಗುತ್ತದೆ, ಹಳದಿ ಬಣ್ಣದಲ್ಲಿರುತ್ತೆ! ಕಡಲೇ ಹಿಟ್ಟಿನ ಹಾಗಿರುತ್ತೆ )1/2 ಅಳತೆ ಮೈದಾ ಹಿಟ್ಟು, 1 ಚಮಚ ಆರಿಗ್ಯಾನೋ,1/4 ಚಮಚ ಓಂ ಕಾಳು ( ಅಜವಾನ), ಉಪ್ಪು, 1 ಚಮಚ ಎಣ್ಣೆ ಇಷ್ಟನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. [...]

By | 2017-12-06T22:38:46+00:00 December 6th, 2017|Kannada, Tindi Tinisu|0 Comments

RAGI MASALA DOSE ರಾಗಿ ಮಸಾಲ ದೋಸೆ

ರಾಗಿ ದಕ್ಷಿಣ ಭಾರತದ ಪ್ರಮುಖ ಬೆಳೆ! ಆರೋಗ್ಯಕರ, ದೇಹಕ್ಕೆ ತಂಪು ನೀಡುವ ಧಾನ್ಯ! ಅದರಿಂದ ಮಾಡುವ ರುಚಿಯಾದ ಮಸಾಲ ದೋಸೆಯ ರೆಸಿಪಿ ಇಲ್ಲಿದೆ!ಮಾಡುವ ವಿಧಾನ:- 3 ಲೋಟ ರಾಗಿ ಕಾಳನ್ನು ಸುಮಾರು 6 ಗಂಟೆ ಕಾಲ ನೆನೆಸಿಡಿ. ರಾಗಿ ಕಾಳು ಸಿಪ್ಪೆ ಇರುವುದರಿಂದ ಸ್ವಲ್ಪ ಸಮಯ ಬೇಕು. 1 ಲೋಟ 1 ಉದ್ದಿನ ಬೇಳೆ, 2 ಚಮಚ ಗಟ್ಟಿ ಅವಲಕ್ಕಿ, 1/2 ಚಮಚ ಮೆಂತ್ಯ 2 ಗಂಟೆ ನೆನೆಸಿಡಿ.        ಉದ್ದಿನ ಬೇಳೆ, ಅವಲಕ್ಕಿಯನ್ನು [...]

By | 2017-12-04T18:34:25+00:00 December 4th, 2017|Kannada, upahara|0 Comments

BELLULLI KHARADA PUDI ಬೆಳ್ಳುಳ್ಳಿ ಖಾರದ ಪುಡಿ

ಬೆಳ್ಳುಳ್ಳಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ ಇಲ್ಲಿದೆ! ನೀವು ಈ ಖಾರದ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 2 ವಾರವಾದರೂ ತುಂಬಾ ಚೆನ್ನಾಗಿರುತ್ತದೆ! ಬೇಕಾದಾಗ ಪಲ್ಯ, ಗೊಜ್ಜು, ಎಣ್ಣೆಗಾಯಿ ಮಾಡಿದಾಗ ಹಾಕಿಕೊಳ್ಳಬಹುದು!ಆದರೆ ಒಟ್ಟಿಗೆ ಹೆಚ್ಚು ಮಾಡಬೇಡಿ. ಬೇಕಾದಾಗ ಸ್ವಲ್ಪ ಸ್ವಲ್ಪವೇ ಮಾಡಿಕೊಂಡರೆ ತಾಜಾತನ ಇರುತ್ತದೆ! ಮಾಡುವ ವಿಧಾನ:- 2 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. 1/4 ಬಟ್ಟಲು ಒಣ ಕೊಬ್ಬರಿ ತೆಳ್ಳಗೆ ಹೆಚ್ಚಿಡಿ/ ಹುರಿದಿಡಿ.     50 ಗ್ರಾಂ ನಷ್ಟು ಬ್ಯಾಡಗಿ ಮೆಣಸಿನಕಾಯಿ ಕಾಯಿ [...]

By | 2017-12-04T18:37:57+00:00 December 4th, 2017|Kannada, Oota|0 Comments

BELLADA MYSORE PAK ಬೆಲ್ಲದ ಮೈಸೂರು ಪಾಕ್

ಮೈಸೂರು ಪಾಕ್ ನಮ್ಮ ಕರ್ನಾಟಕದ ಹೆಮ್ಮೆಯ ಸಿಹಿ ತಿಂಡಿ! ಅದರ ರುಚಿಗೆ ಮರುಳಾಗದವರೇ ಇಲ್ಲ! ಈ ಸಿಹಿ ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಹಾಕಿ ಮಾಡುವುದು. ನಾನು ಬೆಲ್ಲ ಹಾಕಿ ಮಾಡಿದ್ದೇನೆ. ರುಚಿ ಅದ್ಭುತವಾಗಿದೆ. ನಮ್ಮ ಚಿಕ್ಕ ಅತ್ತೆಯಿಂದ ಕಲಿತದ್ದು ಈ ರೆಸಿಪಿ! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಕೂಡ!ಮಾಡುವ ವಿಧಾನ:-     1 3/4 ಲೋಟ ಬೆಲ್ಲ ಪುಡಿ ಮಾಡಿಡಿ/ ತುರಿದಿಡಿ. 1 ಲೋಟ ಕಡಲೇ ಹಿಟ್ಟು ಜರಡಿ ಹಿಡಿದು ಸ್ವಲ್ಪ ಹಸಿ ವಾಸನೆ ಹೋಗಿ ಘಂ [...]

By | 2017-12-04T18:38:17+00:00 December 4th, 2017|Kannada, Tindi Tinisu|0 Comments

PAPER DOSE & BELEGALA CHUTNEY ಪೇಪರ್ ದೋಸೆ & ಬೇಳೆಗಳ ಚಟ್ನಿ

ಬೆಳಿಗ್ಗಿನ ತಿಂಡಿಗೆ ಹೇಳಿ ಮಾಡಿಸಿದ ರೆಸಿಪಿ! ಹೋಟೆಲ್ ಗಳಲ್ಲಿ ಹೆಚ್ಚು ತಿನ್ನುವ ತಿಂಡಿ!ಮಾಡುವ ವಿಧಾನ:- ದೋಸೆ ಹಿಟ್ಟಿಗೆ ದೋಸೆ ಅಕ್ಕಿ - 3 ಲೋಟ ಉದ್ದಿನ ಬೇಳೆ - 1 ಲೋಟ ಗಟ್ಟಿ ಅವಲಕ್ಕಿ - 1/4 ಲೋಟ ಕಡಲೇ ಬೇಳೆ - 1 ಚಮಚ        ಮೇಲಿನ ಸಾಮಗ್ರಿಗಳನ್ನು 2 ಗಂಟೆ ಕಾಲ ನೆನೆಸಿಡಿ. ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ. ಬೆಳಿಗ್ಗೆ 1 ಚಮಚ ಅಕ್ಕಿ [...]

By | 2017-12-04T18:38:32+00:00 December 4th, 2017|Kannada, upahara|0 Comments

PEAS PALAK CURRY ಪೀಸ್ ಪಾಲಕ್ ಕರ್ರಿ

ಚಪಾತಿ, ಪೂರಿ,ರೋಟಿ ಎಲ್ಲದರ ಜೊತೆಗೆ ಚೆನ್ನಾಗಿರುವ Sude dish!ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. 1 ಲೋಟದಷ್ಟು ಬಟಾಣಿ ಬಿಡಿಸಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಪಾಲಾಕ್ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ, ಬಟಾಣಿ ಹಾಕಿ ಸ್ವಲ್ಪ ಹುರಿದು ನೀರು ಚಿಮುಕಿಸಿ ಬಟಾಣಿ ಪೂರ್ತಿಯಾಗಿ ಬೇಯಿಸಿಡಿ. 2 ಟೋಮೋಟೋ ಸಣ್ಣಗೆ ಹೆಚ್ಚಿಡಿ.1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ, 1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 [...]

By | 2017-12-04T18:43:48+00:00 December 4th, 2017|Kannada, Oota, upahara|0 Comments

KOBBARI MITAYI ಕೊಬ್ಬರಿ ಮಿಠಾಯಿ

ನಮಸ್ಕಾರ, ಇದು ನನ್ನ ಮೊದಲ ಪೋಸ್ಟ್! ಹಾಗಾಗಿ ಸಿಹಿ ರೆಸಿಪಿ ಹಾಕಿದ್ದೇನೆ! ಹಾಗಾದರೆ ನಮ್ಮ ಸಿಹಿ ರೆಸಿಪಿ ನೋಡೋಣವೇ? ಇದು ತುಂಬಾ ಹಳೆಯ ರೆಸಿಪಿ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಗೋಕುಲಾಷ್ಟಮಿಯಲ್ಲಿ ತಪ್ಪದೆ ಮಾಡುವ ಸಿಹಿ ತಿಂಡಿ. ತುಂಬಾ ಸುಲಭವಾಗಿ ಮಾಡಬಹುದು. ಕೊಬ್ಬರಿ ಮಿಠಾಯಿ ಮಾಡುವ ವಿಧಾನ:-     1 ದಪ್ಪನೆಯ, ಕಪ್ಪಾದ, ಬಲಿತ ತೆಂಗಿನ ಕಾಯಿ ಆಯ್ಕೆ ಮಾಡಿಕೊಳ್ಳಿ. ಅಡುಗೆ ಕಾಯಿ ಎಂದು ಕೇಳಿದರೆ ಕೊಡುತ್ತಾರೆ. ನಾರು ತೆಗೆದು ಒಡೆದು, ಕೇವಲ ಬಿಳಿ ಭಾಗ ಮಾತ್ರ [...]

By | 2017-12-04T18:44:00+00:00 December 1st, 2017|Kannada, Tindi Tinisu|0 Comments

PULIYOGARE GOJJU (Iyengars’ style) ಪುಳಿಯೋಗರೆ ಗೊಜ್ಜು (ಅಯ್ಯಂಗಾರ್ಸ್ ಶೈಲಿ)

ಪುಳಿಯೋಗರೆ ಬಹು ಜನಪ್ರಿಯ ಆಹಾರ. ಗೊಜ್ಜು ಮಾಡಲು ಸ್ವಲ್ಪ ಸಮಯ ಬೇಕಾದರೂ, ಒಮ್ಮೆ ಮಾಡಿಟ್ಟರೆ 5 ಅಥವಾ 6 ತಿಂಗಳು, fridge ನಲ್ಲಿ ಇಟ್ಟು, ಬೇಕಾದಾಗ ಉಪಯೋಗಿಸಬಹುದು. ಮಾಡುವ ವಿಧಾನ:- ಖಾರಾ ಪುಡಿಗೆ ಬೇಕಾಗುವ ಸಾಮಾನು:- ಧನಿಯ - 250 ಗ್ರಾಂ ಮೆಣಸು - 100 ಗ್ರಾಂ ಜೀರಾ - 100 ಗ್ರಾಂ ಮೆಂತ್ಯ - 50 ಗ್ರಾಂ ಸಾಸಿವೆ - 50 ಗ್ರಾಂ ಒಣ ಮೆಣಸಿನ ಕಾಯಿ - ಕೆಂಪು 400 ಗ್ರಾಂ + ಬ್ಯಾಡಗಿ 100 [...]

By | 2017-12-04T18:44:29+00:00 December 1st, 2017|Kannada, Oota, upahara|0 Comments

MALAGOGARE (Pepper rice) ಮಳಗೋಗರೆ (ಮೆಣಸಿನ ಅನ್ನ)

ಮಳೆಗಾಲ ಪ್ರಾರಂಭವಾಗುವಾಗಲೇ ಮನೆಯಲ್ಲಿ ನೆಗಡಿ, ಕೆಮ್ಮು ಆರಂಭವಾಗುತ್ತೆ. ಆಷಾಡ ಮಾಸದಲ್ಲಿ, ಗಾಳಿ ಮತ್ತು ಮಳೆ ಎರಡೂ ಇರುವುದರಿಂದ ನಾವು ಹೆಚ್ಚು ಮೆಣಸನ್ನು ಉಪಯೋಗಿಸುವುದು ಒಳ್ಳೆಯದು! ನೆಗಡಿ ಕೆಮ್ಮಿನೊಂದಿಗೆ ಹೋರಾಡುವ ಶಕ್ತಿ ಈ ಪುಟ್ಟ ಕಾಳಿಗಿದೆ! "ಮಳಗೋಗರೆ" ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ.     3 ಚಮಚ ಉದ್ದಿನ ಬೇಳೆ, 1 ಚಮಚ ಕರಿ ಮೆಣಸು, 2 ಬ್ಯಾಡಗಿ ಮೆಣಸಿನ [...]

By | 2017-12-04T18:44:48+00:00 December 1st, 2017|Kannada, Oota, upahara|0 Comments
Bitnami