+91 9611100374|admin@indiaforyou.in

Tindi Tinisu

KATORI CHAT ಕಟೋರಿ ಚಾಟ್

ಉತ್ತರ ಭಾರತದ ಜನಪ್ರಿಯ ಚಾಟ್ ಕಟೋರಿ ಚಾಟ್. ಕಟೋರಿ ಎಂದರೆ ಹಿಂದಿಯಲ್ಲಿ ಬಟ್ಟಲು (BOWL) ಎಂದು ಅರ್ಥ! ಪೂರಿಯನ್ನು ಬಟ್ಟಲಿನಂತೆ ಮಾಡಿ ತಿನ್ನುವ ಚಾಟ್! ಸಾಧಾರಣವಾಗಿ ಕಟೋರಿಗಳನ್ನು ಹೋಟೆಲ್ ಗಳಲ್ಲಿ ಬೇಕ್ ಮಾಡುತ್ತಾರೆ, ನಾನು ಎಣ್ಣೆಯಲ್ಲಿ ಕರಿದು ಮಾಡಿದ್ದೇನೆ. ಮಾಡುವ ವಿಧಾನ:-         ಮೊಳಕೆ ಬಂದ ನಿಮ್ಮ ಇಷ್ಟವಾದ ಕಾಳುಗಳನ್ನು ಬೇಯಿಸಿ ಇಡಿ. ನಾನು ಹೆಸರು ಕಾಳು, ಕಾಬೂಲ್ ಕಡಲೆ ಹಾಕಿದ್ದೇನೆ. ನೀವು ಬೇರೆ ಬೇರೆ ಕಾಳು ಮಿಶ್ರಣ ಮಾಡಿ ಅಥವಾ ಯಾವುದೇ ಒಂದು [...]

By | 2017-12-04T19:07:56+00:00 November 30th, 2017|Kannada, Tindi Tinisu|0 Comments

STUFFED ONION RINGS & KADALE BELE CHITHRANNA ಸ್ಟಫ್ಡ್ ಆನಿಯನ್ ರಿಂಗ್ಸ್ ಮತ್ತು ಕಡಲೇ ಬೇಳೆ ಚಿತ್ರಾನ್ನ

ಸ್ಟಫ್ಡ್ ಆನಿಯನ್ ರಿಂಗ್ಸ್ ಮಾಡುವ ವಿಧಾನ:-     4 ಆಲೂ ಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿ, ಹಸಿ ಮೆಣಸಿನ ಕಾಯಿ ಪೇಸ್ಟ್,1/2 ಚಮಚ ಜೀರಿಗೆ ಪುಡಿ, ನಿಂಬೆ ರಸ, ಉಪ್ಪು ಹಾಕಿ ಕಲೆಸಿಡಿ. ಸಾಧಾರಣವಾಗಿ ಬಜ್ಜಿ ಹಿಟ್ಟಿನ ಹದಕ್ಕೆ ಬಜ್ಜಿ ಹಿಟ್ಟು ಕಲೆಸಿಡಿ. ಈರುಳ್ಳಿ ಸಿಪ್ಪೆ ತೆಗೆದು 1/2 ಇಂಚು ಅಳತೆಗೆ ರಿಂಗ್ಸ್ ತರಹ ಕತ್ತರಿಸಿ ರಿಂಗ್ಸ್ ಅನ್ನು ಬೇರೆ ಬೇರೆ ಮಾಡಿ, ಒಂದು ದೊಡ್ಡ ರಿಂಗ್ ಒಳಗೆ ಒಂದು ಚಿಕ್ಕ ರಿಂಗ್ [...]

By | 2017-12-04T19:11:27+00:00 November 30th, 2017|Kannada, Tindi Tinisu|0 Comments

MATODI KADUBU ಮಾಟೋಡಿ ಕಡುಬು

ಗಣಪತಿಗೆ ಅತ್ಯಂತ ಪ್ರಿಯವಾದದ್ದು ಕಡುಬು! ಅವನ ಭಕ್ತರಾದ ನಮಗೂ ಸಹ!!! ಅದರಲ್ಲೂ ಕರಿಗಡುಬು ಯಾರಿಗೆ ಇಷ್ಟ ಇಲ್ಲ ಹೇಳಿ? ಖಾರಾ ಕರಿಗಡುಬು ಯಾವಾಗಲಾದರೂ ತಿಂದಿದ್ದೀರಾ? ಇಲ್ಲದಿದ್ದರೆ ಈಗ ಮಾಡಿ ನೋಡಿ. ಒಂದು ಪುಸ್ತಕದಲ್ಲಿ ಈ ರೆಸಿಪಿ ನೋಡಿದೆ. ತುಂಬಾ ಚೆನ್ನಾಗಿತ್ತು, ನಿಮ್ಮ ಜೊತೆ ಹಂಚಿ ಕೊಳ್ಳೋಣ ಅಂತ ಈ ರೆಸಿಪಿ ಹಾಕಿದ್ದೇನೆ. ಮಾಡುವ ವಿಧಾನ:-         1 ಲೋಟ ಕಡಲೇ ಬೇಳೆಯನ್ನು ತೊಳೆದು 2 ಘಂಟೆ ನೆನೆಸಿ, ಸೋಸಿ ಕೊಂಡು, 1/2 ಲೋಟ ಕಾಯಿ [...]

By | 2017-12-04T19:11:40+00:00 November 30th, 2017|Kannada, Tindi Tinisu|0 Comments

MOSARU BELE ಮೊಸರು ಬೇಳೆ

ಸಾಮಾನ್ಯವಾಗಿ ಹುರಿಗಾಳು ಅಂಗಡಿಗಳಲ್ಲಿ ಹೆಚ್ಚು ಮಾರಾಟವಾಗುವ ಕರಿದ ತಿಂಡಿ! ಮೊಸರಲ್ಲಿ ನೆನೆಸಿ ಮಾಡುವ ಬೇಳೆ! ಅದರ ರೆಸೆಪಿ ನೋಡೋಣವೇ? ಮಾಡುವ ವಿಧಾನ:-        ತೊಗರಿ ಬೇಳೆಯನ್ನು ಹುಳಿ ಮಜ್ಜಿಗೆಯಲ್ಲಿ 4 ಗಂಟೆ ನೆನೆಸಿಡಿ. ನಂತರ ಮಜ್ಜಿಗೆಯಿಂದ ತೆಗೆದು ಸೋರಿಹಾಕಿ. ಮಜ್ಜಿಗೆ ಪೂರ್ತಿ ಹೋದ ಮೇಲೆ, ಒಗೆದ ಒಣಬಟ್ಟೆ ಮೇಲೆ ಹರಡಿ ನೆರಳಲ್ಲಿ 1 ಗಂಟೆ ಒಣಗಿಸಿ.        ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಒಂದು ಜಾಲರ ಬಾಣಲೆಯಲ್ಲಿ ಇಡುವ ಹಾಗೆ [...]

By | 2017-12-04T19:11:56+00:00 November 29th, 2017|Kannada, Tindi Tinisu|0 Comments

PALAK SOUP ಪಾಲಾಕ್ ಸೂಪ್

ಸೂಪ್ ಬಹಳ ಆರೋಗ್ಯಕರ ಆಹಾರ! ದೇಹಕ್ಕೆ ಚೈತನ್ಯ ಕೊಡುತ್ತದೆ! ಅದರಲ್ಲೂ ಪಾಲಾಕ್ ಸೂಪ್ ಇನ್ನೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ:-     2 ಕಟ್ಟು ಪಾಲಾಕ್ ಸೊಪ್ಪು ತೊಳೆದು, (ಕಡ್ಡಿ ಎಳೆಯದಾಗಿದ್ದರೆ ಅದನ್ನು ಸಹ ಹಾಕಿ)     2 ಹಸಿ ಮೆಣಸಿನಕಾಯಿ ಕಾಯಿ, 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 1/2 ಈರುಳ್ಳಿ, 1 ಟೊಮೇಟೊ ಜೊತೆ ಕುಕ್ಕರ್ ಅಥವಾ ಬಾಣಲೆಯಲ್ಲಿ ಮುಚ್ಚಳ ಹಾಕದೆ ಬೇಯಿಸಿ. ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.   [...]

By | 2017-12-04T19:12:08+00:00 November 29th, 2017|Kannada, Oota, Tindi Tinisu|0 Comments

GARLIC MANCHOORI ಗಾರ್ಲಿಕ್ ಮಂಚೂರಿ

ಬೆಳ್ಳುಳ್ಳಿ ಒಂದು ಅದ್ಭುತವಾದ ತರಕಾರಿ! "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ಗಾದೆಯಂತೆ ಅದರ ಮಹತ್ವದ ಬಗ್ಗೆ ಎಷ್ಟು ಹೇಳಿದರುಾ ಕಡಿಮೆಯೇ! ಅದರಿಂದ ರುಚಿಯಾದ ಮಂಚೂರಿ ಮಾಡುವ ರೆಸಿಪಿ ಬೆಳ್ಳುಳ್ಳಿ ಪ್ರಿಯರಿಗಾಗಿ!!! ಮಾಡುವ ವಿಧಾನ :-     3 ಬೆಳ್ಳುಳ್ಳಿ ಸಿಪ್ಪೆ ತೆಗೆದು, ಚಿಕ್ಕಗಾಗಿ ಹೆಚ್ಚಿ, ಸ್ವಲ್ಪ ಜಜ್ಜಿ ಇಡಿ. 4 ಚಮಚ ಕಾರ್ನ್ ಫ್ಲೋರ್, 4 ಚಮಚ ಮೈದಾ, ಉಪ್ಪು, 1/2 ಚಮಚ ಖಾರಾ ಪುಡಿ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸಿ [...]

By | 2017-12-04T19:13:56+00:00 November 29th, 2017|Kannada, Tindi Tinisu|0 Comments

VEG PUFF ವೆಜ್ ಪಫ್

ಬೇಕರಿಗಳಲ್ಲಿ ಹೆಚ್ಚು ಮಾರಾಟವಾಗುವ ತಿಂಡಿ! ಸಂಜೆ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ವೆಜ್ ಪಫ್ ಬಹಳ ಜನ ಇಷ್ಟ ಪಟ್ಟು ತಿನ್ನುತ್ತಾರೆ! ಬೇಕರಿಗಳಲ್ಲಿ ಸಾಮಾನ್ಯವಾಗಿ ಇದನ್ನು ಬೇಕ್ ಮಾಡುತ್ತಾರೆ. ಮನೆಯಲ್ಲಿ ಬೇಕ್ ಮಾಡಲು ಎಲ್ಲರಿಗೂ ಆಗುವುದಿಲ್ಲ. ಎಣ್ಣೆಯಲ್ಲಿ ಕರಿದು ಸಹ ರುಚಿಯಾದ ವೆಜ್ ಪಫ್ ಮಾಡುವ ವಿಧಾನ ಇಲ್ಲಿದೆ! ಹೆಚ್ಚು ಎಣ್ಣೆ ಹೀರುವುದಿಲ್ಲ! ಸಮಯ ಕೂಡಾ ಹೆಚ್ಚು ಬೇಕಿಲ್ಲ! ಮಾಡುವ ವಿಧಾನ:- 1 ಅಳತೆ ಚಿರೋಟಿ ರವೆ, 1/2 ಅಳತೆ ಮೈದಾ, ಉಪ್ಪು ಸೇರಿಸಿ [...]

By | 2017-12-04T19:14:24+00:00 November 29th, 2017|Kannada, Tindi Tinisu|0 Comments

SIHI KUMBALA HALVA ಸಿಹಿ ಕುಂಬಳ ಹಲ್ವಾ

ಸಿಹಿ ಕುಂಬಳವನ್ನು ಸಾಮಾನ್ಯವಾಗಿ ಪಲ್ಯ, ಸಾಂಬಾರ್ ಮಾಡಲು ಬಳಸುತ್ತಾರೆ. ಸಿಹಿ ಕುಂಬಳವನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಹಲವಾರು! ಕಣ್ಣಿನ ದೃಷ್ಟಿ ಉತ್ತಮಗೊಳಿಸುತ್ತದೆ, ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ, ಹೃದಯದ ಆರೋಗ್ಯ ಉತ್ತಮಗೊಳಿಸುತ್ತದೆ. ಇಂತಹ ಆರೋಗ್ಯಕರ ತರಕಾರಿಯಿಂದ ಒಂದು ಸಿಹಿ ರೆಸಿಪಿ ನಿಮಗಾಗಿ! ಸಿಹಿ ಕುಂಬಳಕಾಯಿ ಹಲ್ವಾ ಮಾಡುವ ವಿಧಾನ:- ಸಿಹಿ ಕುಂಬಳ ತೊಳೆದು, ಸಿಪ್ಪೆ ತೆಗೆದು ತುರಿದಿಡಿ. 2 ಅಳತೆ ತುರಿದ ಕುಂಬಳ ಕಾಯಿಗೆ, 1 ಲೋಟ ಸಕ್ಕರೆ ಅಥವಾ ಬೆಲ್ಲ ಬೇಕಾಗುತ್ತದೆ. ನಾನು ಜೋನಿ [...]

By | 2017-12-04T19:16:55+00:00 November 29th, 2017|Kannada, Tindi Tinisu|0 Comments

TIRUPATHI VADE ತಿರುಪತಿ ವಡೆ

ತಿರುಪತಿ ಹಿಂದೂಗಳ ಪ್ರಸಿದ್ಧ ಪುಣ್ಯ ಕ್ಷೇತ್ರ, ಅದು ಕಲಿ ಯುಗ ದೈವ ಶ್ರೀನಿವಾಸ ನೆಲೆ ನಿಂತ ಕ್ಷೇತ್ರ, ಶ್ರೀನಿವಾಸನಿಗೆ ಬಹಳ ಪ್ರಿಯವಾದದ್ದು ತಿರುಪತಿ ಲಡ್ಡು ಮತ್ತು ತಿರುಪತಿ ವಡೆ. ತಿರುಪತಿ ವಡೆ ಮಾಡುವ ವಿಧಾನ: -     1ಬಟ್ಟಲು ಉದ್ದಿನ ಕಾಳನ್ನು (ಸಿಪ್ಪೆ ಸಹಿತ) ತೊಳೆದು 4 ಘಂಟೆ ನೆನೆಸಿ, ಆದಷ್ಟು ನೀರು ಸೇರಿಸದೆ ಗಟ್ಟಿಯಾಗಿ (ಕಡಲೇ ಬೇಳೆ ವಡೆಯಂತೆ), ರುಬ್ಬಿ ಇಟ್ಟು ಕೊಳ್ಳಿ, 2 ಚಮಚ ಜೀರಿಗೆ, 2 ಚಮಚ ಮೆಣಸು ಹಸಿಯಾಗಿಯೇ ತರಿ ತರಿಯಾಗಿ [...]

By | 2017-12-04T19:18:47+00:00 November 29th, 2017|Kannada, Tindi Tinisu|0 Comments

FLOWER SAMOSA ಫ್ಲವರ್ ಸಮೋಸ

ಸಮೋಸ ಸಾಮಾನ್ಯವಾಗಿ ಎಲ್ಲರೂ ಕೋನ್ ಆಕಾರದಲ್ಲಿ ಮಾಡುತ್ತಾರೆ. ಅದನ್ನು ಹೂವಿನ ಆಕಾರದಲ್ಲಿ ಮಾಡುವುದೇ ಈ ರೆಸಿಪಿ ವಿಶೇಷ! ಮಾಡುವ ವಿಧಾನ:-     4 ಆಲೂಗಡ್ಡೆ ಬೇಯಿಸಿ ಸಿಪ್ಪೆಯನ್ನು ತೆಗೆದು ತುರಿದಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, 1/2 ಇಂಚು ತುರಿದ ಶುಂಠಿ, 1/2 ಚಮಚ ಹಸಿ ಮೆಣಸಿನಕಾಯಿ ತುರಿ, 1/2 ಚಮಚ ಗರಂ ಮಸಾಲಾ, 1/2 ಚಮಚ ಆಮ್ ಚೂರ್ ಪುಡಿ, 1/4 ಚಮಚ ಧನಿಯಾ ಪುಡಿ, ಉಪ್ಪು, ಆಲೂಗಡ್ಡೆ ತುರಿ ಹಾಕಿ [...]

By | 2017-12-04T19:21:18+00:00 November 29th, 2017|Kannada, Tindi Tinisu|0 Comments
Bitnami