Tindi Tinisu

CORN FLAKES CHAT ಕಾರ್ನ್ ಫ್ಲೇಕ್ಸ್ ಚಾಟ್

ಸಂಜೆ ಕಾಫಿ, ಟೀ ಜೊತೆಗೆ ತಿನ್ನಲು ಸೊಗಸಾಗಿರುತ್ತದೆ! ಮಾಡುವ ವಿಧಾನ:- ಕಾರ್ನ್ ಫ್ಲೇಕ್ಸ್ ಅನ್ನು ಬಿಸಿ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು, ಬಿಸಿ ಇದ್ದಾಗಲೇ ಖಾರದ ಪುಡಿ, ಉಪ್ಪು, ಇಂಗಿನ ಪುಡಿ ಹಾಕಿ ಚೆನ್ನಾಗಿ ಕಲೆಸಿಡಿ. 1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1 ಕ್ಯಾರೆಟ್ ಸಿಪ್ಪೆ ತೆಗೆದು ತುರಿದಿಡಿ. 1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 2 ಹಸಿ ಮೆಣಸಿನಕಾಯಿ, 1/2 ನಿಂಬೆ ರಸ, ಉಪ್ಪು ಸೇರಿಸಿ [...]

By | 2018-03-02T19:02:07+00:00 March 2nd, 2018|Kannada, Tindi Tinisu|0 Comments

VADA PAV ವಡಾ ಪಾವ್

ಮುಂಬಯಿಯ ಇನ್ನೊಂದು ಜನಪ್ರಿಯ Street food! ರುಚಿಕರ, ಮಾಡುವುದು ಸುಲಭ ಕೂಡ! ಮಾಡುವ ವಿಧಾನ:- 2 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ 1 ಇಂಚು ಸಿಪ್ಪೆ ತೆಗೆದು ತುರಿದ ಶುಂಠಿ, ಹಸಿ ಮೆಣಸಿನಕಾಯಿ ಪೇಸ್ಟ್, ಉಪ್ಪು, ಪುಡಿ ಮಾಡಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಕಲೆಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ ಚಪ್ಪಟೆಯಾಗಿ ವಡಾ ತಟ್ಟಿಡಿ.   ಬೋಂಡಾ ಹಿಟ್ಟು [...]

By | 2018-02-26T22:15:59+00:00 February 26th, 2018|Kannada, Tindi Tinisu|0 Comments

DAHI BATATA PURI ದಹಿ ಬಟಾಟ ಪುರಿ

ಎಲ್ಲರ ಮೆಚ್ಚಿನ ಚಾಟ್! ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ ಪುರಿ ಮಾಡಲು:- 1/2 ಕಪ್ ಮೈದಾ, 1/2 ಕಪ್ ಚಿರೋಟಿ ರವೆ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ.    10 ನಿಮಿಷದ ನಂತರ ಮತ್ತೊಮ್ಮೆ ಚೆನ್ನಾಗಿ ನಾದಿ ದೊಡ್ಡ ದೊಡ್ಡ ಚಪಾತಿಯಂತೆ ತೆಳ್ಳಗೆ ಲಟ್ಟಿಸಿ, ಯಾವುದಾದರೂ ಚಿಕ್ಕ ಡಬ್ಬದ ಮುಚ್ಚಳದಿಂದ ಕಟ್ ಮಾಡಿ ಪುಟ್ಟ ಪುಟ್ಟ [...]

By | 2018-02-23T22:19:27+00:00 February 23rd, 2018|Kannada, Tindi Tinisu|1 Comment

SABBAKKI SANDIGE ಸಬ್ಬಕ್ಕಿ ಸಂಡಿಗೆ

ಬೇಸಿಗೆ ಕಾಲ ಬಂದೊಡನೆ ಗೃಹಿಣಿಯರಿಗೆ ವರ್ಷಕ್ಕೆ ಬೇಕಾಗುವಷ್ಟು ಹಪ್ಪಳ, ಸಂಡಿಗೆ ಮಾಡಿಡುವ ಕೆಲಸ! ಸುಲಭವಾಗಿ ಮಾಡಬಹುದಾದ ಸಬ್ಬಕ್ಕಿಯ ಸಂಡಿಗೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಕೇಜಿ ಸಬ್ಬಕ್ಕಿಯನ್ನು ತೊಳೆದು ( ಸಾಧಾರಣ ಸಬ್ಬಕ್ಕಿ, ಬೆಳ್ಳಗೆ, ಗುಂಡಗೆ ಇರುವುದು. ನೈಲಾನ್ ಸಾಬೂದಾನ ಅಲ್ಲ) ರಾತ್ರಿ ಪೂರ ನೆನೆಸಿಡಿ. ಸಬ್ಬಕ್ಕಿಯ ಮೇಲೆ ಎರಡು ಇಂಚು ನೀರು ಇರುವಷ್ಟು ಹಾಕಿಡಿ.     ಬೆಳಿಗ್ಗೆ 100 ಗ್ರಾಂ ಹಸಿ ಮೆಣಸಿನಕಾಯಿ ತೊಳೆದು ಮಿಕ್ಸಿಯಲ್ಲಿ ಪುಡಿ ಮಾಡಿಡಿ. ನೆಂದ ಸಬ್ಬಕ್ಕಿಗೆ ಮೆಣಸಿನಕಾಯಿ ಪೇಸ್ಟ್, [...]

By | 2018-02-21T21:54:58+00:00 February 21st, 2018|Kannada, Tindi Tinisu|0 Comments

MANGALORE BONDA ( GODHI HITTU ) ಮಂಗಳೂರು ಬೋಂಡಾ ( ಗೋಧಿ ಹಿಟ್ಟು )

ಮಂಗಳೂರು ಬೋಂಡಾ/ಮಂಗಳೂರು ಬಜ್ಜಿ/ ಗೋಲಿ ಬಜೆ ಹೀಗೆ ಕಲೆಸಿಕೊಳ್ಳುವ ರುಚಿಯಾದ, ಸುಲಭವಾಗಿ ಮಾಡಬಹುದಾದ ತಿಂಡಿಯ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಎಲ್ಲರೂ ಮಂಗಳೂರು ಬೋಂಡಾ ಮೈದಾ ಹಿಟ್ಟಿನಲ್ಲಿ ಮಾಡುತ್ತಾರೆ. ನಾನು ಗೋಧಿ ಹಿಟ್ಟಿನ ಮಂಗಳೂರು ಬೋಂಡಾ ಮಾಡಿದ್ದೇನೆ. ಮೈದಾ ಹಿಟ್ಟನ್ನು ಹಾಕಿ ಮಾಡುವ ಬೋಂಡಾದಷ್ಟೇ ಚೆನ್ನಾಗಿ, ಗರಿ ಗರಿಯಾಗಿ ಇರುತ್ತದೆ! ಮಾಡುವ ವಿಧಾನ:- 1 ಅಳತೆ ಗೋಧಿ ಹಿಟ್ಟು, 1/4 ಅಕ್ಕಿ ಹಿಟ್ಟು, 1 ಚಮಚ ಚಿರೋಟಿ ರವೆ, ಉಪ್ಪು, 1 ಟೀ ಚಮಚ ಸಕ್ಕರೆ ಹಾಕಿ ಚೆನ್ನಾಗಿ [...]

By | 2018-02-19T21:43:49+00:00 February 19th, 2018|Kannada, Tindi Tinisu|0 Comments

DRY FRUITS BURFI ಡ್ರೈ ಫ್ರೂಟ್ಸ್ ಬರ್ಫಿ

ಡ್ರೈ ಫ್ರೂಟ್ಸ್ ಉಪಯೋಗಿಸಿ ನಾನು ಮಾಡಿರುವ ಸುಲಭವಾದ, ರುಚಿಯಾದ, ಆರೋಗ್ಯಕರವಾದ ಸಿಹಿಯ ರೆಸಿಪಿ ಇಲ್ಲಿದೆ! ಡ್ರೈ ಫ್ರೂಟ್ಸ್ ಬರ್ಫಿ ಮಾಡುವ ವಿಧಾನ:- 1 ಅಳತೆ ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್ ನಟ್ ಅನ್ನು ( ಎಲ್ಲಾ ಸೇರಿ ಒಂದು ಅಳತೆ ) ನುಣ್ಣಗೆ ಪುಡಿ ಮಾಡಿಡಿ. ಹುರಿಯುವ ಅಗತ್ಯವಿಲ್ಲ! ಫ್ರಿಡ್ಜ್ ನಿಂದ ನೇರವಾಗಿ ತೆಗೆದು ಪುಡಿ ಮಾಡಿ.    ಬಾಣಲೆಯಲ್ಲಿ 1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಕರಗಿ ಒಂದೆಳೆ [...]

By | 2018-02-14T23:04:29+00:00 February 14th, 2018|Kannada, Tindi Tinisu|0 Comments

HANNUGALA KOSAMBARI ಹಣ್ಣುಗಳ ಕೋಸಂಬರಿ

ಹಣ್ಣುಗಳಲ್ಲಿ ಸಾಧಾರಣವಾಗಿ ಫ್ರೂಟ್ಸ್ ಸಲಾಡ್, ರಸಾಯನ ಮಾಡುತ್ತಾರೆ. ರುಚಿಯಾದ ಮಾಡುವ ವಿಧಾನ ಇಲ್ಲಿದೆ! ಹಣ್ಣುಗಳ ಕೋಸಂಬರಿ ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು , ಇಷ್ಟವಾಗುವ ಹಣ್ಣುಗಳನ್ನು ಸಣ್ಣಗೆ ಹೆಚ್ಚಿಡಿ.     4 ಚಮಚ ಕಾಯಿ ತುರಿದಿಡಿ. 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.      ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಚಿಕ್ಕ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಸಾಸಿವೆ, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿಡಿ. ಹೆಚ್ಚಿದ ಹಣ್ಣುಗಳಿಗೆ ಕಾಯಿ ತುರಿ, ಕೊತ್ತಂಬರಿ ಸೊಪ್ಪು, [...]

By | 2018-02-14T23:01:38+00:00 February 14th, 2018|Kannada, Tindi Tinisu|0 Comments

DABELI ದಬೇಲಿ

ಗುಜರಾತ್ ಮೂಲದ ಮುಂಬಯಿಯ Steet Food ನಲ್ಲಿ ಹೆಚ್ಚು ಜನಪ್ರಿಯವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 2 ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿಡಿ. 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ದಾಳಿಂಬೆ ಬೀಜ ಬಿಡಿಸಿಡಿ. 2 ಚಮಚ ಕಾಯಿ ತುರಿದಿಡಿ.      ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ 1 ಚಮಚ ಪಾವ್ ಭಾಜಿ ಮಸಾಲ, [...]

By | 2018-02-12T21:44:30+00:00 February 12th, 2018|Kannada, Tindi Tinisu|0 Comments

PEANUT CHAT ಪೀನಟ್ ಚಾಟ್

ಸಂಜೆ ಮಕ್ಕಳು ಶಾಲೆಯಿಂದ ಬಂದ ಮೇಲೆ, ಪತಿ ಆಫೀಸ್ ನಿಂದ ಬಂದ ಮೇಲೆ ಸ್ವಲ್ಪ ಖಾರಾ, ರುಚಿಯಾಗಿ ತಿನ್ನಬೇಕು ಅನ್ನಿಸಿದಾಗ ಸುಲಭವಾಗಿ ಮಾಡಬಹುದಾದ ರೆಸಿಪಿ! ಪೀನಟ್ ಚಾಟ್ ಮಾಡುವ ವಿಧಾನ:- 1/4 ಕೇಜಿ ಕಡಲೇ ಬೀಜ 4 ಗಂಟೆ ನೆನೆಸಿ, ಚಿಟಿಕೆ ಉಪ್ಪು ಸೇರಿಸಿ ಮೂರ್ನಾಲ್ಕು ವಿಷಲ್ ಕೂಗಿಸಿಡಿ. ಕಡಲೇ ಬೀಜ ನೆನೆದಷ್ಟೂ ಚೆನ್ನಾಗಿ ಬೇಯುತ್ತದೆ! ರಾತ್ರಿ ಪೂರ ನೆನೆಸಿ ಬೆಳಿಗ್ಗೆ ಬೇಕಾದರೂ ಮಾಡಬಹುದು! 1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.    [...]

By | 2018-02-08T22:39:01+00:00 February 8th, 2018|Kannada, Tindi Tinisu|0 Comments

CARROT SHANKARA POLI ಕ್ಯಾರೆಟ್ ಶಂಕರ ಪೋಳಿ

ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ನಮ್ಮ ಮುದ್ದು ಮಕ್ಕಳು ಕ್ಯಾರೆಟ್ ಕೊಟ್ಟರೆ ತಿನ್ನುವುದಿಲ್ಲ. ಹೀಗೆ ಮಾಡಿ ಕೊಡಿ! ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- 2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು, ನೀರು ಹಾಕದೆ ನುಣ್ಣಗೆ ರುಬ್ಬಿಡಿ. ತೀರಾ ಬೇಕೆನಿಸಿದರೆ 1 ಅಥವಾ 2 ಚಮಚ ನೀರು ಹಾಕಿ.      1/2 ಹಿಡಿ ಗೋಡಂಬಿ, 1/2 ಹಿಡಿ ಬಾದಾಮಿ ಹಸಿಯಾಗೆ ಪುಡಿ ಮಾಡಿಡಿ. Dry fruits optional! ಬೇಕಾದರೆ ಹಾಕಿಕೊಳ್ಳಬಹುದು. ನಿಮ್ಮ ರುಚಿಗೆ ತಕ್ಕ ಹಾಗೆ ಹೆಚ್ಚು [...]

By | 2018-02-05T18:44:50+00:00 February 5th, 2018|Kannada, Tindi Tinisu|0 Comments