+91 9611100374|admin@indiaforyou.in

MOLAKE KADALE KALINA SAARU ಮೆಾಳಕೆ ಕಡಲೇ ಕಾಳಿನ ಸಾರು

ದಿನಾ ಬೇಳೆ ಸಾರು ತಿಂದು ಬೇಸರ ಆಗಿದ್ದರೆ, ಒಮ್ಮೆ ಈ ಕಾಳಿನ ಸಾರು ಮಾಡಿ ನೋಡಿ. ಆರೋಗ್ಯಕರ, ರುಚಿಯಾದ ಸಾರು! ಮಾಡೋದು ಬಹಳ ಸುಲಭ ಕೂಡ. ಯಾವುದೇ ಮೊಳಕೆ ಬಂದ ಕಾಳು ಬೇಕಾದರೂ ಹಾಕಬಹುದು. ಮಾಡುವ ವಿಧಾನ:-     ಮೆಾಳಕೆ ಕಡಲೇ ಕಾಳನ್ನು 4 ಅಥವಾ 5 ವಿಷಲ್ ಕೂಗಿಸಿ ಬೇಯಿಸಿ ಇಡಿ. 2 ಹಸಿರು/ಕಪ್ಪು ಬದನೇ ಕಾಯಿ, 1 ಆಲೂ ಗೆಡ್ಡೆ ಹೆಚ್ಚಿ ಬೇರೆ ಬೇಯಿಸಿ ಇಡಿ. 1 ಈರುಳ್ಳಿ ಹೆಚ್ಚಿ, 1 ಚಮಚ [...]

By | 2017-12-04T19:05:01+00:00 November 30th, 2017|Kannada, Oota|0 Comments

BEET ROOT SIHI PALYA(HALVA) & BEET ROOT MOSARU BAJJI ಬೀಟ್ ರೂಟ್ ಸಿಹಿ ಪಲ್ಯ ಮತ್ತು ಬೀಟ್ ರೂಟ್ ಮೊಸರು ಬಜ್ಜಿ

ಬೀಟ್ ರೂಟ್ ಒಂದು ಅಧ್ಬುತ ತರಕಾರಿ!!! ಅದರಲ್ಲಿ ಸಾಕಷ್ಟು ಒಳ್ಳೆಯ ಗುಣಗಳಿದ್ದರೂ ಸಾಮಾನ್ಯವಾಗಿ ತುಂಬಾ ಜನ ಅದನ್ನು ತಿನ್ನುವುದಿಲ್ಲ! ಕೆಲವು ಮಹಿಳೆಯರಲ್ಲಿ ರಕ್ತದಲ್ಲಿ ಹೆಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತದೆ. ಅಂತಹವರು ದಯವಿಟ್ಟು ಯಾವುದೇ ಮಾತ್ರೆ ತೆಗೆದು ಕೊಳ್ಳದೆ, ದಿನಾ ಬೀಟ್ ರೂಟ್ ಅನ್ನು ನಿಮಗೆ ಇಷ್ಟ ವಾದ ರೀತಿಯಲ್ಲಿ ತಿನ್ನುತ್ತಾ ಇದ್ದರೆ, ಹೆಮೋಗ್ಲೋಬಿನ್ ಅಂಶ ಮೇಲೇರುತ್ತೆ!!! ಇಂತಹ ಬೀಟ್ ರೂಟ್ ಬಳಸಿ ಮಾಡುವ ಎರಡು ಸುಲಭ ರೆಸಿಪಿ ಇಲ್ಲಿದೆ. ಬೀಟ್ ರೂಟ್ ಸಿಹಿ ಪಲ್ಯ (ಹಲ್ವಾ)   [...]

By | 2017-12-04T19:05:20+00:00 November 30th, 2017|Kannada, Oota|0 Comments

BADANE HASI GOJJU MATTHU RAGI MUDDE ಬದನೇ ಕಾಯಿ ಹಸಿ ಗೊಜ್ಜು ಮತ್ತು ರಾಗಿ ಮುದ್ದೆ

ಪ್ರತಿ ದಿನ ಬೇಳೆ ಸಾರು ತಿಂದು ಬೇಸರ ಆಗಿದ್ದರೆ, ಒಮ್ಮೆ ಈ ಹಸಿ ಗೊಜ್ಜು ತಿಂದು ನೋಡಿ, ಇದು ಹೊಸ ರುಚಿ ಅಂತೂ ಖಂಡಿತಾ ಅಲ್ಲ, ಅಜ್ಜಿಯ ಕಾಲದ್ದು! 4 ಗುಂಡು ಬದನೇ ಕಾಯಿಯನ್ನು ತೊಳೆದು, ಎರಡು ಭಾಗ ಮಾಡಿ, 1 ಆಲೂಗೆಡ್ಡೆ (optional) ಜೊತೆ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿ, ಬದನೆ ಮತ್ತು ಆಲೂ ಸಿಪ್ಪೆ ತೆಗೆದು ಇಡಿ, (ಬದನೇ ಕಾಯಿಯನ್ನು ನಮ್ಮ ಅಮ್ಮ ಕೆಂಡದಲ್ಲಿ ಸುಡುತ್ತಿದ್ದರು, ಹಾಗೆ ಸುಟ್ಟರೆ ರುಚಿ ಇನ್ನೂ ಚೆಂದ, ಈಗಲೂ [...]

By | 2017-12-04T19:05:40+00:00 November 30th, 2017|Kannada, Oota|0 Comments

BELLULLI GOJJU ಬೆಳ್ಳುಳ್ಳಿ ಗೊಜ್ಜು

ಬೆಳ್ಳುಳ್ಳಿ ತನ್ನಲ್ಲಿ ಬೇಕಾದಷ್ಟು ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಜೀರ್ಣಕಾರಿ, gastric, cancer, ಹೃದಯ ಸಂಬಂಧಿ ತೊಂದರೆಗಳ ವಿರುದ್ಧ ಹೋರಾಡುವ ಶಕ್ತಿ ಈ ಪುಟ್ಟ ತರಕಾರಿಗಿದೆ. ಇಂತಹ ಬೆಳ್ಳುಳ್ಳಿ ಪ್ರಿಯರಿಗಾಗಿ ಒಂದು ಸಿಂಪಲ್, ರುಚಿಯಾದ ರೆಸಿಪಿ! ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನ:-     1/2 ಬಟ್ಟಲು ಸಿಪ್ಪೆ ತೆಗೆದ ಬೆಳ್ಳುಳ್ಳಿ ರೆಡಿ ಮಾಡಿಡಿ. ಬೇಕಾದರೆ ಜಜ್ಜಿ/ಚಿಕ್ಕದಾಗಿ ಹೆಚ್ಚಿ ಕೂಡ ಹಾಕಬಹುದು. ನಾನು ಹಾಗೇ ಹಾಕಿದ್ದೇನೆ. ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಲ್ಲಿ ನೆನೆಸಿ ರಸ ತೆಗೆದಿಡಿ. [...]

By | 2017-12-04T19:06:00+00:00 November 30th, 2017|Kannada, Oota|0 Comments

KADAMBAM SAADAM (RICE) ಕದಂಬಂ ಅನ್ನ

ಕದಂಬಂ ಅನ್ನ ತಮಿಳುನಾಡಿನ ಸಾಂಪ್ರಾದಾಯಿಕ ಅಡುಗೆ‌. ನವರಾತ್ರಿಯಲ್ಲಿ ತಾಯಿ ದುರ್ಗೆಯ ನೈವೇದ್ಯಕ್ಕೆ ಮಾಡುತ್ತಾರೆ. ಗಣೇಶನ ಹಬ್ಬದಲ್ಲಿ 5 ದಿನದ ನಂತರ ಗಣಪತಿಯನ್ನು ಬಿಡುವಾಗ, ಕೆಲವು ಐಯಂಗಾರ್ ಮನೆಗಳಲ್ಲಿ ಆನೆ ಹಬ್ಬದ ಸಮಯದಲ್ಲಿ ಸಹ ಮಾಡುತ್ತಾರೆ. ಮಾಡುವ ವಿಧಾನ ಮತ್ತು ರುಚಿ ಸ್ವಲ್ಪ ನಮ್ಮ ಕರ್ನಾಟಕದ ಬಿಸಿ ಬೇಳೆ ಬಾತಿನ ಹಾಗೇ ಇರುತ್ತೆ. ಬಿಸಿ ಬೇಳೆ ಬಾತಿನ ಸೋದರ ಸಂಬಂಧಿ ಎಂದೇ ಹೇಳಬಹುದು, ತರಕಾರಿ ಹೆಚ್ಚು ಹಾಕಿದಷ್ಟೂ ರುಚಿ ಹೆಚ್ಚು. ಕದಂಬಂ ಅನ್ನ ಮಾಡುವ ವಿಧಾನ:-     1 [...]

By | 2017-12-04T19:07:46+00:00 November 30th, 2017|Kannada, Oota, upahara|0 Comments

STUFFED KULCHA & BENDI MASALA ಸ್ಟಫ್ಡ್ ಕುಲ್ಚಾ ಮತ್ತು ಬೆಂಡಿ ಮಸಾಲ

ಮಾಡುವ ವಿಧಾನ:-        ಮೊದಲು ಕುಲ್ಚಾ ಹಿಟ್ಟನ್ನು ಸಿದ್ಧ ಮಾಡಿಕೊಳ್ಳಿ. 1 ಬಟ್ಟಲು ಮೈದಾ ಹಿಟ್ಟಿಗೆ ತಲಾ 1/2 ಚಮಚ ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಸಕ್ಕರೆ, 1 ಚಮಚ ಉಪ್ಪು, 1 ಚಮಚ ಎಣ್ಣೆ, 2 ಚಮಚ ಬಿಳಿ ಎಳ್ಳು, ಹೆಚ್ಚಿದ ಕೊತ್ತಂಬರಿ, 2 ಚಮಚ ಮೊಸರು ಹಾಕಿ, ಚೆನ್ನಾಗಿ ಕಲೆಸಿ, ಬೇಕಾದಲ್ಲಿ ಸ್ವಲ್ಪ ನೀರು ಹಾಕಿ, ಮೆತ್ತಗೆ ಕಲೆಸಿ, ಒದ್ದೆ ಬಟ್ಟೆ ಹಾಕಿ 2 ತಾಸು ನೆನೆಯಲು ಬಿಡಿ. 2 ಆಲೂಗೆಡ್ಡೆಯನ್ನು [...]

By | 2017-12-04T19:08:08+00:00 November 30th, 2017|Kannada, Oota|0 Comments

RICE PHIRNI ರೈಸ್ ಫಿರ್ನಿ

ಉತ್ತರ ಭಾರತದ ಬಹು ಜನಪ್ರಿಯ ಪಾಯಸ( ಖೀರ್)! ಮಾಡುವುದು ತುಂಬಾ ಸುಲಭ! ಅವರು ಹಬ್ಬಗಳಲ್ಲಿ ತಪ್ಪದೆ ಮಾಡುತ್ತಾರೆ! ಹಾಗಾದರೆ ಸಿಹಿ ಪಾಯಸದ ರೆಸಿಪಿ ನೋಡೋಣವೇ? ರೈಸ್ ಫಿರ್ನಿ ಮಾಡುವ ವಿಧಾನ:-     4 ಚಮಚ ಬಾಸುಮತಿ ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ. ನಂತರ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. 2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ.         ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿ ಹಾಲು [...]

By | 2017-12-04T19:08:49+00:00 November 30th, 2017|Kannada, Oota|0 Comments

KALLANGADI SIPPE PALYA ಕಲ್ಲಂಗಡಿ ಸಿಪ್ಪೆ ಪಲ್ಯ

ಬೇಸಿಗೆ ಬಂತೆಂದರೆ ಎಲ್ಲೆಡೆ ಕಲ್ಲಂಗಡಿ ಹಣ್ಣಿನ ರಾಶಿ ರಾಶಿ, ದೇಹವನ್ನು ತಂಪಾಗಿಡುವ ಈ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಹಣ್ಣನ್ನು ತಿಂದ ಮೇಲೆ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವ ಮುನ್ನ ಸ್ವಲ್ಪ ಆ ಸಿಪ್ಪೆಯ ಮಹತ್ವದ ಬಗ್ಗೆ ತಿಳಿಯೋಣವೇ? ಕೆಂಪಾದ ಹಣ್ಣಿಗಿಂತ ಬಿಳಿ ಭಾಗವೇ ಹೆಚ್ಚು ಆರೋಗ್ಯಕಾರಿ, ಈ ಸಿಪ್ಪೆಯನ್ನು ವಿದೇಶಗಲ್ಲಿ ಜ್ಯೂಸ್, ಜಾಮ್ ಬಳಕೆಯಲ್ಲಿ ಹೇರಳವಾಗಿ ಬಳಸುತ್ತಾರೆ, ಹಾಗಾದರೆ ನಾವು ಸಹ ಈ ಸಿಪ್ಪೆಯಿಂದ ಒಂದು ರುಚಿಯಾದ, ಆರೋಗ್ಯಕರವಾದ ಪಲ್ಯವನ್ನು ಮಾಡೋಣವೇ? ಕಲ್ಲಂಗಡಿ ಸಿಪ್ಪೆಯ ಪಲ್ಯ [...]

By | 2017-12-04T19:09:16+00:00 November 30th, 2017|Kannada, Oota|0 Comments

PALAK SOUP ಪಾಲಾಕ್ ಸೂಪ್

ಸೂಪ್ ಬಹಳ ಆರೋಗ್ಯಕರ ಆಹಾರ! ದೇಹಕ್ಕೆ ಚೈತನ್ಯ ಕೊಡುತ್ತದೆ! ಅದರಲ್ಲೂ ಪಾಲಾಕ್ ಸೂಪ್ ಇನ್ನೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ:-     2 ಕಟ್ಟು ಪಾಲಾಕ್ ಸೊಪ್ಪು ತೊಳೆದು, (ಕಡ್ಡಿ ಎಳೆಯದಾಗಿದ್ದರೆ ಅದನ್ನು ಸಹ ಹಾಕಿ)     2 ಹಸಿ ಮೆಣಸಿನಕಾಯಿ ಕಾಯಿ, 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 1/2 ಈರುಳ್ಳಿ, 1 ಟೊಮೇಟೊ ಜೊತೆ ಕುಕ್ಕರ್ ಅಥವಾ ಬಾಣಲೆಯಲ್ಲಿ ಮುಚ್ಚಳ ಹಾಕದೆ ಬೇಯಿಸಿ. ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.   [...]

By | 2017-12-04T19:12:08+00:00 November 29th, 2017|Kannada, Oota, Tindi Tinisu|0 Comments

MUGHLAI BIRIYANI (Veg) ಮುಘಲಾಯ್ ಬಿರಿಯಾನಿ (ವೆಜ್)

ಬಿರಿಯಾನಿಗಳ ರಾಜ ಎಂದೇ ಹೇಳಬಹುದು! ರುಚಿ ಅದ್ಭುತ! ಮಾಡುವ ವಿಧಾನ ನೋಡೋಣವೇ? 1/4 ಕೇಜಿ (1 ಲೋಟ) ಬಾಸುಮತಿ ಅಕ್ಕಿಯನ್ನು ತೊಳೆದಿಡಿ. ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಕುದಿಯಲು ಇಡಿ. 1 ಪಲಾವ್ ಎಲೆ, 1 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ, ಬಾಸುಮತಿ ಅಕ್ಕಿ ಹಾಕಿ ಬೇಯಲು ಬಿಡಿ. ಅಕ್ಕಿ 90% ಬೆಂದ ಮೇಲೆ ನೀರು ಸೋರಿ ಹಾಕಿಡಿ. 1/2 ಚಮಚ ತುಪ್ಪ, ಚಿಟಿಕೆ ಉಪ್ಪು ಹಾಕಿ ಕಲೆಸಿಡಿ.     [...]

By | 2017-12-04T19:12:20+00:00 November 29th, 2017|Kannada, Oota|0 Comments
Bitnami