JEERA RICE & DAL FRY ಜೀರಾ ರೈಸ್ & ದಾಲ್ ಫ್ರೈ
ಉತ್ತರ ಭಾರತದ ಜನಪ್ರಿಯ ಆಹಾರ! ಎರಡೂ ಒಳ್ಳೆಯ ಕಾಂಬಿನೇಶನ್! ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಜೀರಾ ರೈಸ್ ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಹೆಚ್ಚಾಗಿ ಹಾಕಿ ತೆರೆದ ಬಾಣಲೆಯಲ್ಲಿ/ ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ 1 ದೊಡ್ಡ ಚಮಚ ಜೀರಿಗೆ, [...]