PALAK PANNER ಪಾಲಾಕ್ ಪನ್ನೀರ್

/, Oota, upahara/PALAK PANNER ಪಾಲಾಕ್ ಪನ್ನೀರ್

PALAK PANNER ಪಾಲಾಕ್ ಪನ್ನೀರ್

ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ! ಪಾಲಾಕ್ ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು!

ಮಾಡುವ ವಿಧಾನ:-

2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಬಾಣಲೆಯಲ್ಲಿ ಹಾಕಿ ತಟ್ಟೆ ಮುಚ್ಚದೆ 3 ನಿಮಿಷ ಬೇಯಿಸಿ. ಜೊತೆಗೆ 3 ಅಥವಾ 4 ಹಸಿ ಮೆಣಸಿನಕಾಯಿ ಕೂಡ ಹಾಕಿ. ಚಿಟಿಕೆ ಸಕ್ಕರೆ ಹಾಕಿದರೆ ಸೊಪ್ಪಿನ ಬಣ್ಣ ಹಾಗೆ ಉಳಿಯುತ್ತದೆ!

  

ಬೆಂದ ಪಾಲಾಕನ್ನು ಬಿಸಿ ನೀರಿನಿಂದ ತೆಗೆದು ತಣ್ಣನೆ ನೀರಿನಲ್ಲಿ ಅದ್ದಿ ನೀರು ಸೋರಿ ಹಾಕಿಡಿ.

ನಂತರ Mixie ಯಲ್ಲಿ ಹಾಕಿ ರುಬ್ಬಿಡಿ.

1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ

  

100 ಗ್ರಾಂ ಪನ್ನೀರ್ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, 1/2 ಚಮಚ ಜೀರಿಗೆ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಉಪ್ಪು, 1/2 ಚಮಚ ಗರಂ ಮಸಾಲ, 1/2 ಚಮಚ ಧನಿಯ ಪುಡಿ, ರುಬ್ಬಿದ ಪಾಲಾಕ್ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು. ಸ್ವಲ್ಪ ಪಾಲಾಕ್ ಬೇಯಿಸಿದ ನೀರು ಬೇಕಾದರೆ ಹಾಕಿ.

  

ಕೊನೆಯಲ್ಲಿ ಹೆಚ್ಚಿದ ಪನ್ನೀರ್, 4 ಚಮಚ ಫ್ರೆಶ್ ಕ್ರೀಮ್ ಹಾಕಿ ಕಲೆಸಿದರೆ, ಬಾಯಲ್ಲಿ ನೀರೂರಿಸುವ ಪಾಲಾಕ್ಪನ್ನೀರ್ ಸಿದ್ಧ!

ಪಾಲಾಕ್ ಬೇಯಿಸಿದ ನೀರು ಚೆಲ್ಲದೆ ಗ್ರೇವಿಗೆ ಹಾಕಲು ಇಡಿ.

ಧನ್ಯವಾದಗಳು

By | 2018-01-23T22:04:01+00:00 January 23rd, 2018|Kannada, Oota, upahara|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment

%d bloggers like this: