RAVA DOSE ರವಾ ದೋಸೆ

////RAVA DOSE ರವಾ ದೋಸೆ

RAVA DOSE ರವಾ ದೋಸೆ

ಬೆಳಿಗ್ಗೆಯ ತಿಂಡಿಗೆ ಮಾಡಬಹುದಾದ ರುಚಿಯಾದ ರೆಸಿಪಿ! ತಯಾರಿಗೆ ಕೆಲವೇ ನಿಮಿಷ ಸಾಕು!

ಮಾಡುವ ವಿಧಾನ :-

1 ಲೋಟ ಚಿರೋಟಿ ರವೆ ಒಂದು ಬಟ್ಟಲಿನಲ್ಲಿ ಹಾಕಿಡಿ, ಅದಕ್ಕೆ 1/2 ಲೋಟ ಅಕ್ಕಿ ಹಿಟ್ಟು, 1/4 ಲೋಟ ಮೈದಾ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ತುರಿದ 1/2 ಇಂಚು ಶುಂಠಿ, ಹುರಿದು ತರಿ ತರಿಯಾಗಿ ಕುಟ್ಟಿದ ಮೆಣಸು, ಜೀರಿಗೆ 1 ಚಮಚ, ಚಿಟಿಕೆ ಸಕ್ಕರೆ, 2 ಚಮಚ ಮೊಸರು ಹಾಕಿ ಚೆನ್ನಾಗಿ ಕಲೆಸಿ.

  

ನಂತರ ಸ್ವಲ್ಪ ನೀರು ಸೇರಿಸಿ 10 ನಿಮಿಷ ಮುಚ್ಚಿಡಿ.

ಕಾವಲಿ ಬಿಸಿಯಾಗಲು ಇಡಿ. ದೋಸೆ ಮಿಶ್ರಣಕ್ಕೆ ಇನ್ನೂ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲೆಸಿ. ಮಿಶ್ರಣ ತುಂಬಾ ನೀರಾಗಿರಬೇಕು! ನೆಂದ ನಂತರ ಚಿರೋಟಿ ರವೆ ಕೆಳಗಡೆ ಗಟ್ಟಿಯಾಗಿ ನಿಂತು ಬಿಡುತ್ತದೆ. ಪ್ರತಿ ಬಾರಿ ದೋಸೆ ಹಾಕುವಾಗ ಹಿಟ್ಟನ್ನು ಕೆಳಗಡೆಯಿಂದ ಚೆನ್ನಾಗಿ ಕಲೆಸಿ ಹಾಕಿ.

ಕಾವಲಿಯ ಮೇಲೆ ಸೌಟಿನಷ್ಟು ಹಿಟ್ಟು ತೆಗೆದು ಕೊಂಡು ಸುತ್ತಲೂ ಗುಂಡಾಗಿ ಸುರಿಯಿರಿ. ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.

ನಂತರ ತಿರುವಿ ಹಾಕಿ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ, ರುಚಿಯಾದ ರವಾ ದೋಸೆ ಸವಿಯಲು ಸಿದ್ಧ!

ರವ ದೋಸೆ ಒಬ್ಬೊಬ್ಬರದು ಒಂದೊಂದು ವಿಧಾನ! ಇದು ನಮ್ಮ ಮನೆಯಲ್ಲಿ ಮಾಡುವ ವಿಧಾನ!

ಕೆಲವರು ರವ ದೋಸೆ ಒಂದು ಕಡೆ ಮಾತ್ರ ಬೇಯಿಸುವುದು! ನನಗೇನೂ ಎರಡೂ ಕಡೆ ಬೇಯಿಸಿದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯ!

 

ಈರುಳ್ಳಿ ಚಟ್ನಿ ಮಾಡುವ ವಿಧಾನ:-

2 ಈರುಳ್ಳಿ ಹೆಚ್ಚಿ, ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.

  

4 ರಿಂದ 6 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.

1 ಚಮಚ ಹುಣಿಸೆ ರಸ ತೆಗೆದಿಡಿ.

ಈರುಳ್ಳಿ ತಣ್ಣಗಾದ ಮೇಲೆ, ಈರುಳ್ಳಿ, ಹುಣಿಸೆ ರಸ, ಉಪ್ಪು, ಕಡಲೇ ಬೀಜದ ಗಾತ್ರ ಬೆಲ್ಲ, ಬ್ಯಾಡಗಿ ಮೆಣಸಿನಕಾಯಿ ಪುಡಿ, ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ ರುಬ್ಬಿದರೆ ರುಚಿಯಾದ ಈರುಳ್ಳಿ ಚಟ್ನಿ ರೆಡಿ!

ಧನ್ಯವಾದಗಳು!

By | 2017-12-13T12:33:26+00:00 December 9th, 2017|Kannada, upahara|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/
%d bloggers like this: