+91 9611100374|admin@indiaforyou.in

PEAS PALAK CURRY ಪೀಸ್ ಪಾಲಕ್ ಕರ್ರಿ

/, Oota, upahara/PEAS PALAK CURRY ಪೀಸ್ ಪಾಲಕ್ ಕರ್ರಿ

PEAS PALAK CURRY ಪೀಸ್ ಪಾಲಕ್ ಕರ್ರಿ

ಚಪಾತಿ, ಪೂರಿ,ರೋಟಿ ಎಲ್ಲದರ ಜೊತೆಗೆ ಚೆನ್ನಾಗಿರುವ Sude dish!ಮಾಡುವ ವಿಧಾನ:-

2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.

1 ಲೋಟದಷ್ಟು ಬಟಾಣಿ ಬಿಡಿಸಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಪಾಲಾಕ್ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ, ಬಟಾಣಿ ಹಾಕಿ ಸ್ವಲ್ಪ ಹುರಿದು ನೀರು ಚಿಮುಕಿಸಿ ಬಟಾಣಿ ಪೂರ್ತಿಯಾಗಿ ಬೇಯಿಸಿಡಿ.

2 ಟೋಮೋಟೋ ಸಣ್ಣಗೆ ಹೆಚ್ಚಿಡಿ.1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ, 1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ರಿಂದ 6 ಹಸಿ ಮೆಣಸಿನಕಾಯಿ ತೊಳೆದಿಡಿ.

ಮೇಲೆ ಹೇಳಿರುವ 4 ಸಾಮಗ್ರಿಗಳನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು, 8 ಗೋಡಂಬಿ ಜೊತೆಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ 2 ಚಮಚ ಬೆಣ್ಣೆ/ ಎಣ್ಣೆ ಹಾಕಿ ಜೀರಿಗೆ, ಸಣ್ಣಗೆ ಹೆಚ್ಚಿದ 1/2 ಈರುಳ್ಳಿ, ಚಿಟಿಕೆ ಅರಿಷಿಣ ಹಾಕಿ ಹುರಿದು, ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಬಾಡಿಸಿ, ನಂತರ 1/2 ಚಮಚ ಗರಂ ಮಸಾಲ, ಉಪ್ಪು, ಬೆಂದ ಬಟಾಣಿ, ಪಾಲಾಕ್ ಸೊಪ್ಪು ಹಾಕಿ. ಬೇಕಾದರೆ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.

ಕೊನೆಯಲ್ಲಿ 2 ಚಮಚ ಫ್ರೆಶ್ ಕ್ರೀಮ್ ಹಾಕಿ ಕಲೆಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಪೀಸ್ ಪಾಲಾಕ್ ಕರ್ರಿ ಸಿದ್ಧ!

   

ಈ ಗ್ರೇವಿ Rich in taste! Little high in calories!

ಬದಲಾವಣೆಗಾಗಿ ಬೇಕಾದರೆ ಪಾಲಾಕ್ ಬದಲು ಮೆಂತ್ಯ ಸೊಪ್ಪು ಹಾಕಬಹುದು. ಹಸಿ ಮೆಣಸಿನಕಾಯಿ ಬದಲಾಗಿ ಬ್ಯಾಡಗಿ ಮೆಣಸಿನಕಾಯಿ ಹಾಕಿ ಮಾಡಬಹುದು!

ಧನ್ಯವಾದಗಳು

By | 2017-12-04T18:43:48+00:00 December 4th, 2017|Kannada, Oota, upahara|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment

Bitnami