+91 9611100374|admin@indiaforyou.in

SAMBAR POWDER ಸಾಂಬಾರ್ ಪುಡಿ

////SAMBAR POWDER ಸಾಂಬಾರ್ ಪುಡಿ

SAMBAR POWDER ಸಾಂಬಾರ್ ಪುಡಿ

ಸಾಂಬಾರ್ ಪುಡಿ ಒಬ್ಬೊಬ್ಬರು ಒಂದೊಂದು ರೀತಿ ಮಾಡುತ್ತಾರೆ. ಅವರವರ ಮನೆಯ ಅಭಿರುಚಿಗೆ ತಕ್ಕ ಹಾಗೆ ಮಾಡುತ್ತಾರೆ. ನಮ್ಮ ಮನೆಯ ಸಾಂಬಾರ್ ಪುಡಿ ರೆಸಿಪಿ ಹೀಗಿದೆ.

ಬೇಕಾಗುವ ಸಾಮಾನು:-
ಧನಿಯ – 1 ಪಾವು
ಕಡಲೇ ಬೇಳೆ – 1/2 ಪಾವು
ಉದ್ದಿನ ಬೇಳೆ – 1/4 ಪಾವು
ಒಣ ಮೆಣಸಿನ ಕಾಯಿ – ಕೆಂಪು ಮತ್ತು ಬ್ಯಾಡಗಿ ಮೆಣಸಿನ ಕಾಯಿ ಎರಡು ಸೇರಿಸಿ 1/4 ಕೇಜಿ
(ಖಾರಾ ಜಾಸ್ತಿ ಬೇಕಾದರೆ ಕೆಂಪು ಮೆಣಸಿನ ಕಾಯಿ ಹೆಚ್ಚು ಹಾಕಿ, ಬಣ್ಣ ಬೇಕಾದರೆ ಬ್ಯಾಡಗಿ ಮೆಣಸಿನ ಕಾಯಿ ಹೆಚ್ಚು ಹಾಕಿ)
ಚಕ್ಕೆ – 2 ಇಂಚು
ಕೊಬ್ಬರಿ ಗಿಟುಕು – 2

ಮಾಡುವ ವಿಧಾನ:-

ಮೆಣಸಿನ ಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿ, ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪ ಮೆಣಸಿನ ಕಾಯಿ ಹಾಕಿ ಹುರಿದು ತರಿ ತರಿಯಾಗಿ ಪುಡಿ ಮಾಡಿಡಿ.
(ಮೆಣಸಿನ ಕಾಯಿಯನ್ನು ಕೊನೆಯಲ್ಲಿ ಹುರಿದು ಕೊಳ್ಳಿ, ಮೊದಲೇ ಹುರಿದರೆ ಘಾಟು ಹೆಚ್ಚು )

     

ಕೊಬ್ಬರಿಯನ್ನು ತೆಳ್ಳಗೆ ಹೆಚ್ಚಿ/ತುರಿದು ಬಾಣಲೆಯಲ್ಲಿ ಎಣ್ಣೆ ಹಾಕದೆ ಸ್ವಲ್ಪ ಹುರಿದು ತರಿ ತರಿಯಾಗಿ ಪುಡಿ ಮಾಡಿಡಿ.

ಧನಿಯಾ, ಕಡಲೇ ಬೇಳೆ, ಉದ್ದಿನ ಬೇಳೆ, ಚಕ್ಕೆ ಎಣ್ಣೆ ಹಾಕದೆ ಕೆಂಪಗೆ ಹುರಿದಿಡಿ.

ಒಂದು ದೊಡ್ಡ ತಟ್ಟೆ ಅಥವಾ ಪಾತ್ರೆಯಲ್ಲಿ, ಹುರಿದ ಬೇಳೆ, ಧನಿಯಾ, ಚಕ್ಕೆ (ಪುಡಿ ಮಾಡಿದ್ದು), ಕೊಬ್ಬರಿ ಪುಡಿ, ಮೆಣಸಿನ ಕಾಯಿ ಪುಡಿ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ಸ್ವಲ್ಪವೇ mixie jar ನಲ್ಲಿ ಹಾಕಿ ಪುಡಿ ಮಾಡಿ,(ತುಂಬಾ ನುಣ್ಣಗೆ ಮಾಡಬೇಡಿ) ಮತ್ತೊಮ್ಮೆ ಎಲ್ಲವನ್ನೂ ಚೆನ್ನಾಗಿ ಕಲೆಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ. ಎಷ್ಟು ಬೇಕೋ ಅಷ್ಟು ಚಿಕ್ಕ ಡಬ್ಬದಲ್ಲಿ ಹಾಕಿ ಮಿಕ್ಕದ್ದನ್ನು freezer/fridge ನಲ್ಲಿ ಇಡಿ. ಕೊಬ್ಬರಿ ಹುರಿದು ಹಾಕುವುದರಿಂದ ಸಾಂಬಾರ್ ಪುಡಿ ಹಾಳಾಗುವುದಿಲ್ಲ. ನಾವು ಸಾಧಾರಣವಾಗಿ ಸಾಂಬಾರ್ ಮಾಡುವಾಗ ಸಾಂಬಾರ್ ಪುಡಿ ಮತ್ತು ರಸಂ ಪುಡಿ ಸೇರಿಸಿ ಮಾಡುತ್ತೇವೆ. ನಿಮಗೆ ರಸಂ ಪುಡಿ ಹಾಕುವುದು ಬೇಡವಾಗಿಗ್ದರೆ, ಈ ಪುಡಿ ಜೊತೆ 2 ಚಮಚ ಮೆಣಸು (pepper) 2 ಚಮಚ ಜೀರಿಗೆ, 2 ಚಮಚ ಮೆಂತ್ಯ ಹುರಿದು ಪುಡಿ ಮಾಡಿ ಬೆರೆಸಿಡಿ.

ಧನ್ಯವಾದಗಳು.

By | 2017-12-04T18:50:32+00:00 December 1st, 2017|Kannada, Oota|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment

Bitnami