+91 9611100374|admin@indiaforyou.in

PAANI POORI ಪಾನಿ ಪೂರಿ

////PAANI POORI ಪಾನಿ ಪೂರಿ

PAANI POORI ಪಾನಿ ಪೂರಿ

ಪಾನಿ ಪೂರಿ ಮತ್ತೊಂದು ಜನಪ್ರಿಯ ಚಾಟ್!!! ಮಕ್ಕಳಂತೂ ಊಟ ಬಿಟ್ಟು ಇದ್ದಾರು! ಆದರೆ ಪಾನಿ ಪೂರಿ ಬಿಟ್ಟು ಇರಲಾರರು! ಹಾಗಾದರೆ ಅವರ ಇಷ್ಟವಾದ ಚಾಟ್ ಅನ್ನು ನೀವು ಮನೆಯಲ್ಲಿ ಏಕೆ ಮಾಡಿ ಕೊಡಬಾರದು? ಮಾಡೋದು ತುಂಬಾ ಸುಲಭ!

ಪಾನಿ ಪೂರಿ ಮಾಡುವ ವಿಧಾನ:-

ಮೊದಲು ಪೂರಿ ಮಾಡೋಣ. 1 ಅಳತೆ ಚಿರೋಟಿ ರವೆ, 1/2 ಲೋಟ ಮೈದಾ, 2 ಚಮಚ ಉದ್ದಿನ ಬೇಳೆ ಸ್ವಲ್ಪ ಹುರಿದು ಪುಡಿ ಮಾಡಿದ್ದು, 1 ಚಮಚ ಬೆಣ್ಣೆ, ಉಪ್ಪು ಹಾಕಿ ಕಲೆಸಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ಕಲೆಸಿ ಇಡಿ. 15 ನಿಮಿಷದ ನಂತರ, ತೆಳ್ಳಗೆ ಲಟ್ಟಿಸಿ, ಯಾವುದಾದರೂ ಡಬ್ಬ/ಬಾಟಲಿನ ಮುಚ್ಚಳದ ಸಹಾಯದಿಂದ ಚಿಕ್ಕ ಚಿಕ್ಕ ಪೂರಿ ಅಳತೆಗೆ ಒತ್ತಿ, ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ. ಒಂದು ಪೂರಿ ಹಾಕಿ ಜಾಲರಿಯಿಂದ ಅದರ ಮೇಲೆ ಮೆತ್ತಗೆ ಒತ್ತಿದರೆ ಪೂರಿ ಉಬ್ಬುತ್ತದೆ. ಹೀಗೆ ಪ್ರತಿ ಪೂರಿ ಉಬ್ಬುವಂತೆ ಮಾಡಿ ಕೆಂಪಗೆ ಕರಿಯಿರಿ. ಹೆಚ್ಚಿನ ಎಣ್ಣೆ ತೆಗೆಯಲು paper napkin ಮೇಲೆ ಹಾಕಿ, ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

      

4 ಚಮಚ ಹುಣಿಸೆ ರಸ, ಚೂರು ಬೆಲ್ಲ ಹಾಕಿ ಕುದಿಸಿ ಸಿಹಿ ಚಟ್ನಿ ಮಾಡಿಡಿ.

6 ಗಂಟೆ ನೆನೆಸಿದ 1/2 ಲೋಟ ಕಪ್ಪು ಕಡಲೆ ಕಾಳನ್ನು 4 ಅಥವಾ 5 ವಿಷಯ ಕೂಗಿಸಿಡಿ.

   

2 ಆಲೂಗೆಡ್ಡೆ ತೊಳೆದು, ಬೇಯಿಸಿ, ಸಿಪ್ಪೆ ತೆಗೆದು ಪುಡಿ ಮಾಡಿಡಿ.

2 ಈರುಳ್ಳಿ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಬೇಯಿಸಿದ ಕಾಳು, ಪುಡಿ ಮಾಡಿದ ಆಲೂಗೆಡ್ಡೆ, 1 ಚಮಚ ಚಾಟ್ ಮಸಾಲ, 1 ಚಮಚ ಖಾರಾ ಪುಡಿ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಕಲೆಸಿಡಿ.

 

ಪಾನಿ ಮಾಡುವ ವಿಧಾನ:-

ಬಟ್ಟಲಿನಲ್ಲಿ 1 1/2 ಲೀಟರಿನಷ್ಟು ತಣ್ಣನೆಯ ನೀರು ತೆಗೆದುಕೊಳ್ಳಿ. 2 ಹಿಡಿ ಕೊತ್ತಂಬರಿ ಸೊಪ್ಪು, 2 ಹಿಡಿ ಪುದೀನ, 3 ಹಸಿ ಮೆಣಸಿನ ಕಾಯಿ, 1 ಇಂಚು ಸಿಪ್ಪೆ ತೆಗೆದು ತುರಿದ ಶುಂಠಿ ಇಪ್ಟನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ತಣ್ಣನೆ ನೀರಿಗೆ ಸೋಸಿ ಹಾಕಿ. ನೀರಿಗೆ 1 ಚಮಚ ಕಾಲಾ ನಮಕ್ (ರೆಡಿ ಮೇಡ್ ಸಿಗುತ್ತೆ, ಚಾಟ್ ಗಳಿಗೆ ಹಾಕಿದರೆ ಒಳ್ಳೆಯ ಸುವಾಸನೆ ಬರುತ್ತೆ, ಫೋಟೋ ಹಾಕಿದ್ದೇನೆ ನೋಡಿ), 1 ಚಮಚ ಚಾಟ್ ಮಸಾಲ ಪುಡಿ, ಉಪ್ಪು, 1/2 ನಿಂಬೆ ರಸ ಹಾಕಿ ಕಲೆಸಿದರೆ ಪಾನಿ ಸಿದ್ಧ! ನಿಮ್ಮ ರುಚಿಗೆ ತಕ್ಕ ಹಾಗೆ ಖಾರಾ, ಚಾಟ್ ಮಸಾಲ, ಕಾಲಾ ನಮಕ್ ಹಾಕಿ ಕೊಳ್ಳಿ.

   

ಒಂದು ತಟ್ಟೆಯಲ್ಲಿ 8 ಪೂರಿ ಜೋಡಿಸಿಡಿ. ಪೂರಿಯ ಮೇಲೆ ಮೆತ್ತಗೆ ಒತ್ತಿ, ಪೂರಿಯ ಒಳಗಡೆ, ಆಲೂ ಕಾಳಿನ ಮಿಶ್ರಣ ತುಂಬಿ, ಮೇಲೆ ಹೆಚ್ಚಿದ ಈರುಳ್ಳಿ ಹಾಕಿ, ಸಿಹಿ ಚಟ್ನಿ ಸ್ವಲ್ಪ ಹಾಕಿ, ಪೂರಿ ತುಂಬುವಷ್ಟು ಪಾನಿ ಹಾಕಿ ತಕ್ಷಣ ತಿನ್ನಲು ಕೊಡಿ.

ಸಿಹಿ ಚಟ್ನಿ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿ ಕೊಳ್ಳಿ. ಸಿಹಿ ಚಟ್ನಿ ಹಾಕದೆ ಕೂಡ ತಿನ್ನಬಹುದು. ಮಕ್ಕಳಿಗೆ ಸಿಹಿ ಚಟ್ನಿ ಇಷ್ಟ ಆಗುತ್ತೆ. ಅವರಿಗೆ ಬೇಕಾದರೆ ತುಸು ಹೆಚ್ಚಿಗೆ ಹಾಕಿ ಕೊಡಿ.

   

ಕಾಳಿನ ಮಿಶ್ರಣಕ್ಕೆ ಬೇಕಾದರೆ ಹೆಚ್ಚಿದ ಈರುಳ್ಳಿ ಹಾಕಿ ಒಟ್ಟಿಗೆ ಕಲೆಸಿ ಮಾಡಬಹುದು. ನಾನು ಮಕ್ಕಳು ಈರುಳ್ಳಿ ತಿನ್ನುವುದಿಲ್ಲ ಎಂದು ಬೇರೆ ತೋರಿಸಿದ್ದೇನೆ.

ನಾನು ಇಲ್ಲಿ ಹಾಕಿರುವುದು ಬೆಂಗಳೂರಿನಲ್ಲಿ ನಾವು ತಿನ್ನುವ ರೆಸಿಪಿ. ಒಂದೊಂದು ಕಡೆ ಬೇರೆ ಬೇರೆ ರೀತಿ ಮಾಡುತ್ತಾರೆ. ಕೆಲವರು ರುಬ್ಬುವಾಗ, ಬೆಳ್ಳುಳ್ಳಿ, ಮೆಣಸು, ಜೀರಿಗೆ ಕೂಡ ಹಾಕುತ್ತಾರೆ. ನಾನು ಮಾಡಿರುವ ರೆಸಿಪಿ mild ಆಗಿದೆ. ಪಾನಿಯನ್ನು ಹಾಗೆಯೇ ಕುಡಿಯಬಹುದು!

ಧನ್ಯವಾದಗಳು.

By | 2017-12-04T18:57:44+00:00 December 1st, 2017|Kannada, Tindi Tinisu|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment

Bitnami