+91 9611100374|admin@indiaforyou.in

DIDHEER TOMATO SAARU ದಿಢೀರ್ ಟೊಮೇಟೋ ಸಾರು

////DIDHEER TOMATO SAARU ದಿಢೀರ್ ಟೊಮೇಟೋ ಸಾರು

DIDHEER TOMATO SAARU ದಿಢೀರ್ ಟೊಮೇಟೋ ಸಾರು

ದಿಢೀರ್ ಟೊಮೇಟೋ ಸಾರು ಮಾಡುವ ವಿಧಾನ:-

4 ಟೊಮೇಟೋ ತೊಳೆದು ಕತ್ತರಿಸಿ, 1 ಚಮಚ ಕರಿ ಮೆಣಸು, 1 ಚಮಚ ಜೀರಿಗೆ, 1 ಗೆಡ್ಡೆ ಬೆಳ್ಳುಳ್ಳಿ, 2 ಹಸಿ ಮೆಣಸಿನ ಕಾಯಿ ಹಾಕಿ ನೀರು ಸೇರಿಸದೆ ರುಬ್ಬಿ ಕೊಳ್ಳಿ (ಹುರಿಯುವ ಅಗತ್ಯವಿಲ್ಲ, ಮೆಾದಲು ಮೆಣಸು, ಜೀರಿಗೆ, ಬೆಳ್ಳುಳ್ಳಿ ಸ್ವಲ್ಪ ಪುಡಿ ಮಾಡಿ, ನಂತರ ಟೊಮೇಟೋ ಹಾಕಿ ರುಬ್ಬಿ) ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಚಿಟಿಕೆ ಅರಿಶಿಣ ಹಾಕಿ, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗು ಫ್ರೈ ಮಾಡಿ, ಉಪ್ಪು, ಸ್ವಲ್ಪ ನೀರು ಸೇರಿಸಿ, ಕುದಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ಅನ್ನದ ಜೊತೆ ಬಡಿಸಿ, ಜೊತೆ 1 ಚಮಚ ತುಪ್ಪ ಇದ್ದರೆ ಆಹಾ! ರುಚಿ ಅದ್ಭುತ, ಮಾಡುವುದು ಸುಲಭ, ಬೇಳೆ ಬೇಯಿಸುವ ಅಗತ್ಯವಿಲ್ಲ, ಬೇಗ ಮಾಡಬಹುದು. ಅನ್ನದ ಜೊತೆಗೂ ಸೈ!!! ಹಾಗೆ ಕುಡಿಯಲು ಸೈ!!!

          

ಬೆಳ್ಳುಳ್ಳಿ ಇಷ್ಟ ಇಲ್ಲದವರು ಅದರ ಬದಲು ಒಗ್ಗರಣೆಗೆ ಹಿಂಗು ಹಾಕಿದರೆ ಆಯ್ತು. ಮೆಣಸು, ಜೀರಿಗೆ, ಬೆಳ್ಳುಳ್ಳಿ ಜೀರ್ಣಕ್ಕೆ ಒಳ್ಳೆಯದು. ಹೀಗೆ ಮಾಡಿದ ಸಾರು 4 ಜನಕ್ಕೆ ಸಾಕಾಗುತ್ತೆ, ಮಾಡಿ ನೋಡಿ.

ಹಸಿ ಮೆಣಸಿನಕಾಯಿ, ಕರಿ ಮೆಣಸು ಎರಡೂ ಹಾಕುವುದರಿಂದ ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ!

ಅಂದ ಹಾಗೆ ನಾನು ಈ ರೆಸಿಪಿನ ನನ್ನ Face book friend ಸುಮಾ ಅವರಿಂದ ಕಲಿತದ್ದು, Thanks a lot Suma, for the wonderful recipe.

By | 2017-12-04T21:16:35+00:00 November 19th, 2017|Kannada, Oota|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment

Bitnami