+91 9611100374|admin@indiaforyou.in

PALAK KOFTHA ಪಾಲಾಕ್ ಕೊಫ್ತಾ

////PALAK KOFTHA ಪಾಲಾಕ್ ಕೊಫ್ತಾ

PALAK KOFTHA ಪಾಲಾಕ್ ಕೊಫ್ತಾ

ಪಾಲಾಕ್ ಸೊಪ್ಪು ಹೇರಳವಾಗಿ ಕಬ್ಬಿಣದ ಅಂಶ ತುಂಬಿ ಕೊಂಡಿದೆ. ಈ ಸೊಪ್ಪಿನಿಂದ ಮಾಡುವ ರುಚಿಯಾದ ಗ್ರೇವಿಯ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ಬ್ರೆಡ್ ಕೊಫ್ತಾ

8 ಸಾಲ್ಟ್ ಬ್ರೆಡ್ ಸ್ಲೈಸ್ ಗಳನ್ನು ಸುತ್ತಲಿನ ಕಂದು ಭಾಗವನ್ನು ತೆಗೆದು ನೀರಿನಲ್ಲಿ ಅದ್ದಿ ತಕ್ಷಣ ತೆಗೆದು ಹಿಂಡಿ ತೆಗೆದಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿ, ಕೊತ್ತಂಬರಿ ಸೊಪ್ಪು, 1/2 ಚಮಚ ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಬೇಕಾದರೆ ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಸೇರಿಸಿ ಚಿಕ್ಕ ಚಿಕ್ಕ ಕೊಫ್ತಾ ಉಂಡೆಗಳನ್ನು ಮಾಡಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆದಿಡಿ.

     

 

ಪಾಲಾಕ್ ಗ್ರೇವಿ

4 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ, ತೊಳೆದು ಬಾಣಲೆಯಲ್ಲಿ ನೀರು ಹಾಕಿ ಬೇಯಿಸಿಡಿ. ಬೇಯುವಾಗ ಚಿಟಿಕೆ ಸಕ್ಕರೆ ಹಾಕಿದರೆ ಬಣ್ಣ ಹಾಗೆ ಇರುತ್ತದೆ. ಬೇಯುವಾಗ ತಟ್ಟೆ ಮುಚ್ಚಬಾರದು.

2 ಈರುಳ್ಳಿ ಹೆಚ್ಚಿಡಿ, 1 ಟೋಮೇಟೋ ಸಣ್ಣಗೆ ಹೆಚ್ಚಿಡಿ.

1/2 ಇಂಚು ಶುಂಠಿ, 6 ಎಸಳು ಬೆಳ್ಳುಳ್ಳಿ, 4 ಹಸಿ ಮೆಣಸಿನಕಾಯಿ, 6 ಗೋಡಂಬಿ, ಹೆಚ್ಚಿದ ಈರುಳ್ಳಿ , ಟೋಮೇಟೋ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.

ಹೆಚ್ಚಿದ ಈರುಳ್ಳಿ 1 ಚಮಚ ಒಗ್ಗರಣೆಗೆ ತೆಗೆದಿಡಿ.

ಹುರಿದ ಈರುಳ್ಳಿ ಮಿಶ್ರಣ ಸ್ವಲ್ಪ ರುಬ್ಬಿ. ನಂತರ ಬೆಂದ ಪಾಲಾಕನ್ನು ನೀರಿನಿಂದ ತೆಗೆದು ಈರುಳ್ಳಿ ಜೊತೆಗೆ ಸೇರಿಸಿ ಒಂದು ಸುತ್ತು ರುಬ್ಬಿದರೆ ಸಾಕು. ಪಾಲಾಕ್ ಬೇಯಿಸಿದ ನೀರು ಚೆಲ್ಲದೆ ಗ್ರೇವಿಗೆ ಹಾಕಲು ಇಡಿ.

ಬಾಣಲೆಯಲ್ಲಿ 2 ಚಮಚ ತುಪ್ಪ/ಎಣ್ಣೆ ಹಾಕಿ, ಹೆಚ್ಚಿದ 1 ಚಮಚ ಈರುಳ್ಳಿ, ಜೀರಿಗೆ, 1/2 ಚಮಚ ಧನಿಯ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು ಹಾಕಿ ಸ್ವಲ್ಪ ಹುರಿದು ರುಬ್ಬಿದ ಮಿಶ್ರಣವನ್ನು ಹಾಕಿ, ಪಾಲಾಕ್ ಬೇಯಿಸಿದ ನೀರು ಸ್ವಲ್ಪ ಸೇರಿಸಿ ಕುದಿಸಿ.

ಕೊನೆಯಲ್ಲಿ 2 ಚಮಚ ಫ್ರೆಶ್ ಕ್ರೀಮ್, ಬ್ರೆಡ್ ಕೊಫ್ತಾಗಳನ್ನು ಹಾಕಿ ಕಲೆಸಿ ಒಲೆಯಿಂದ ಇಳಿಸಿ ಚಪಾತಿ, ರೋಟಿಯೊಂದಿಗೆ ಬಡಿಸಿ!

ಧನ್ಯವಾದಗಳು.

By | 2017-12-04T21:17:22+00:00 November 18th, 2017|Indian Food Recipe, Kannada, Oota|0 Comments

About the Author:

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment

Bitnami