+91 9611100374|admin@indiaforyou.in

Vidhyuth Vani

//Vidhyuth Vani

Vidhyuth Vani

ನನ್ನ ಆದರ್ಶವನ್ನು ಕೆಲವೇ ಪದಗಳಲ್ಲಿ ವಿವರಿಸಬವುದು : ಮಾನವ ಜನಾಂಗಕ್ಕೆ  ಅವರ ದೈವಿಕತೆಯನ್ನೂ ಅವರ ಜೀವನದ ಪ್ರತಿಯೊಂದು ಚಲನವಲನದಲ್ಲೂ  ಹೇಗೆ ಅದನ್ನು ವ್ಯಕ್ತಗೊಳಿಸಿಸುವುದು ಎಂಬುದನ್ನೂ ಬೋಧಿಸುವುದು.

ಧರ್ಮದ ರಹಸ್ಯವಿರುವುದು ಸಿದ್ಧಾಂತತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು ಇದೇ ಧರ್ಮದ ಸರ್ವಸ್ವ.

ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವದ ಪ್ರಕಾಶನವೇ ಧರ್ಮ.

ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯಾನನ್ನಾಗಿಸಿ, ಮನುಷ್ಯನನ್ನು  ದೇವರನ್ನಾಗಿಸುವ  ಭಾವನೆಯೇ ಧರ್ಮ.

ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ  ಅವನು ನಾಸ್ತಿಕ.ಹಳೆಯ ಧರ್ಮಗಳು  ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು.ಈ ಜಗತ್ತಿನ ಇತಿಹಾಸ ಅತ್ಮಶ್ರದ್ಧೆಯನ್ನು ಹೊಂದಿದ್ದ  ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ  ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.

ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.

ಪ್ರತೀಯೋಬನಲ್ಲಿಯೂ ಪೂರ್ಣ ಋಷಿತ್ವವನ್ನು ಪಡೆಯವ ಸಾಮರ್ಥ್ಯ ಅಂತರ್ಹಿತವಾಗಿದೆ.

ಶೈಶವಾವಸ್ಥೆಯಿಂದಲೇ  ಮಕ್ಕಳು  ಶಕ್ತಿ  ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ  ಆಚರಣೆಗಳನ್ನಾಗಲ್ಲಿ  ಬೋಧಿಸಬೇಡಿ.  ಅವರನ್ನು  ಶಕ್ತಿವಂತರನ್ನಾಗಿ ಮಾಡಿ.

ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ  ಸಾಧಿಸಲ್ಪಡುತ್ತದೆ.

ಶಕ್ತಿಯೆಲ್ಲ  ನಿಮ್ಮೊಳಗೇ ಇದೆ ; ನೀವು ಏನು ಬೇಕಾದರೂ  ಮಾಡಬಲ್ಲಿರಿ,  ಎಲ್ಲವನ್ನೂ ಮಾಡಬಲ್ಲಿರಿ.

ನೀವು  ಯಶಸ್ಸನ್ನು ಪಡೆಯಲು  ದೃಢ  ಪ್ರಯತ್ನಬೇಕು, ಅಪಾರ ಇಚ್ಛಾಶಕ್ತಿ ಬೇಕು. ‘ನಾನು  ಸಮುದ್ರವನ್ನೇ  ಪಾನಾಮಾಡುತ್ತೇನೆ,’  ಎಂದು  ಪ್ರಯತ್ನಶೀಲನು  ಹೇಳುತ್ತಾನೆ. ‘ನನ್ನ ಸ0ಕಲ್ಪದ ಮುಂದೆ ಪರ್ವತಗಳೇ  ಪುಡಿಪುಡಿ  ಯಾಗುತ್ತವೆ’  ಎನ್ನುತ್ತಾನವನು. ಇಂತಹ  ಶಕ್ತಿಯನ್ನೂ,  ಛಾತಿಯನ್ನೂ ಪಡೆಯಿರಿ ; ಕಷ್ಟಪಟ್ಟು  ದುಡಿಯಿರಿ, ನೀವು  ಗುರಿ  ಸೇರುವುದು  ನಿಶ್ಚಯ.

ಸ್ವಾರ್ಥವೇ  ಅಧರ್ಮ; ನಿಸ್ವಾರ್ಥವೇ  ಧರ್ಮ. ಹೆಚ್ಚು  ನಿಸ್ವಾರ್ಥಿಯಾದವನೇ  ಧರ್ಮಿಷ್ಠ  ಮತ್ತು ಶಿವನಿಗೆ  ಹತ್ತಿರ. ನಿಜವಾಗಿಯೂ  ಜೀವನ  ಸೇವೆಯೇ ಶಿವನ ಸೇವೆ.

ಸ್ವಾರ್ಥತೆಯೇ  ಪ್ರತಿಯೊಬ್ಬನಲ್ಲಿಯೂ  ಇರುವ  ಪ್ರತ್ಯಕ್ಷ  ರಾಕ್ಷಸ.  ಪ್ರತಿಯೊಂದು  ಬಗೆಯ  ಸ್ವಾರ್ಥವೂ  ಸೈತಾನನೇ.

ಪ್ರತಿಯಾಗಿ   ಏನನ್ನೂ  ಬಯಸಬೇಡಿ. ಆದರೆ  ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಬರುತ್ತದೆ.

ವಿಕಾಸವೇ ಜೀವನ ; ಸಂಕೋಚವೇ  ಮರಣ. ಪ್ರೇಮವೆಲ್ಲಾ ವಿಕಾಸ ; ಸ್ವಾರ್ಥವೆಲ್ಲಾ  ಸ0ಕೋಚ; ಆದುದರಿಂದ ಪ್ರೇಮವೇ  ಬದುಕಿನ  ಧರ್ಮ.

ಪ್ರೀತಿಯ ಮೂಲಕ,  ಸಹಾನುಭೂತಿಯ  ಮೂಲಕ  ಮಾತ್ರವೇ  ಒಳ್ಳೆಯ ಫಲಿತಾಂಶಗಳು  ಉಂಟಾಗುತ್ತವೇ.

ಪರರ ಸೇವೆಗಾಗಿ  ಸರ್ವಸ್ವವನ್ನೂ ತೊರೆಯುವವನು ಮಾತ್ರ ಮುಕ್ತಿಗೆ ಅರ್ಹ.

ಬುದ್ಧಿ  ಶ್ರೇಷ್ಠವಾದುದು ನಿಜ. ಆದರೆ ಅದರ  ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ  ಉಂಟಾಗುವುದು   ಹೃದಯದ  ಮೂಲಕ; ಹೃದಯವೇ ಸ್ಫೂರ್ತಿಯ  ಮೂಲ.

ವತ್ಸ, ಪ್ರೀತಿಗೆ  ಸೋಲೆ0ಬುದಿಲ್ಲ; ಇ0ದೊ  ನಾಳೆಯೊ  ಅಥವಾ  ಯುಗಾಂತರವೊ  ಸತ್ಯ ಗೆದ್ದೇತೀರುವುದು. ಪ್ರೀತಿ ಖ0ಡಿತ ಜಯ ಗಳಿಸುತ್ತದೆ. ನಿಮ್ಮ  ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು ?

ಜೀವನಾವಧಿ ಅಲ್ಪ, ಪ್ರಪಾಂಚಿಕ  ವಿಷಯಗಳೆಲ್ಲ  ಕ್ಷಣಿಕ. ಆದರೆ  ಯಾರು ಇತರರಿಗಾಗಿ ಬಾಳುತ್ತಾರೋ ಅವರೇ  ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ಮೃತರು.

ಎದ್ದೇಳಿ, ಕರ್ಯೋನ್ಮುಖರಾಗಿ.  ಈ  ಜೀವನವಾದರೂ ಎಷ್ಟು ಕಾಲ ?  ನೀವು ಈ  ಜಗತ್ತಿಗೆ ಬಂದ  ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಮರ ಕಲ್ಲುಗಳಿಗೂ ಏನು ವ್ಯತ್ಯಾಸ ? ಅವೂ ಅಸ್ತಿತ್ವಕ್ಕೆ  ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

ಪರಹಿತಕ್ಕಾಗಿ ನಿಮ್ಮ ಜೀವನವನ್ನು  ಮುಡಿಪಾಗಿಡಿ. ನೀವು  ತ್ಯಾಗಜೀವನವನ್ನು  ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ  ತಿರುಗಿಯೂ ನೋಡಬೇಡಿ.

ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯನ್ನು ಕೂಡ ಈಡಾಡಿ. ಇತರರಿಗೆ  ಸಹಾಯ ಮಾಡಿ.

ಮಹತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ.

ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಅವು ಸಂಪೂರ್ಣವಾಗಿ  ಉದ್ವೇಗದ ಅಧೀನದಲ್ಲಿರುವುವು.

ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಜೀವನದಲ್ಲಿ ಉನ್ನತ ಆದರ್ಶವನ್ನು ಸ್ವೀಕರಿಸಿ ಅದಕ್ಕಾಗಿ ಇಡೀ ಜೀವನವನ್ನೇ ಬಲಿಕೊಡುವುದು ಪರಮಶ್ರೇಷ್ಠ.

ನಮ್ಮ ದೇಶಕ್ಕೆ ಪುರುಷಸಿಂಹರು ಬೇಕಾಗಿದ್ದಾರೆ. ಪುರುಷಸಿಂಹರಾಗಿ. ಬಂಡೆಯಂತೆ ಸ್ಥಿರವಾಗಿ ನಿಲ್ಲಿ. ಸತ್ಯವು  ಯಾವಾಗಲೂ ಜಯಿಸುತ್ತದೆ.

ಯಾರು ತನ್ನ ಹೃದಯದ ನೆತ್ತರಿನಿಂದ ಇತರರಿಗೆ ದಾರಿ ನಿರ್ಮಿಸುತ್ತಾನೋ ಅವನೇ ಶ್ರೇಷ್ಠ ವ್ಯಕ್ತಿ.

ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ  ಮಾನವಕೋಟಿಯ ಸ್ನೇಹಿತ.

ನಿಮ್ಮ ಸೌಲಭ್ಯಗಳನ್ನೂ ನಿಮ್ಮ ಸುಖಗಳನ್ನೂ ನಿಮ್ಮ ಹೆಸರು, ಕೀರ್ತಿ. ಸ್ಥಾನಮಾನಗಳನ್ನೂ, ಅಷ್ಟೇ ಏಕೆ, ನಿಮ್ಮ ಜೀವಿತವನ್ನೇ ಬಲಿಕೊಟ್ಟು ಒಂದು ಮಾನವ ಸೇತುವನ್ನು ನಿರ್ಮಿಸಿ. ಅದರ ಮೂಲಕ ಲಕ್ಷಾಂತರ ಜನರು ಈ ಭಾವ ಜಲಧಿಯನ್ನು ದಾಟುವಂತಾಗಲಿ.

ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರಿಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.

ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.

ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ, ಸಹಾನು ಭೂತಿಯುಳ್ಳವರಾಗಿ.

ಸತ್ಯಕ್ಕಾಗಿ  ಸರ್ವವನ್ನೂ  ಸಮರ್ಪಿಸಬಹುದು.ಆದರೆ ಸತ್ಯವನ್ನು ಮತ್ತಾವುದಕ್ಕೂ ತೆರುವುದಕ್ಕೆ ಆಗುವುದಿಲ್ಲ.

ಸತ್ಯನಿಷ್ಠೆ, ಪವಿತ್ರತೆ ಮತ್ತು  ನಿಃಸ್ವಾರ್ಥತೆ  ಈ ಮೂರು  ಯಾರಲ್ಲಿರುತ್ತದೋ ಅವರನ್ನು  ಈ ಜಗತ್ತಿನ ಯಾವ ಶಕ್ತಿಯೂ  ನಿಗ್ರಹಿಸಲಾರದು.  ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ  ಎದುರಿಸಬಲ್ಲ.

ಶುದ್ಧಚಾರಿತ್ರ್ಯವೊಂದೇ  ಕಷ್ಟ ಪರಂಪರೆಗಳ ಅಭೇದ್ಯ  ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು.

ಶಕ್ತಿ ಇರುವುದು ಸಾಧುಸ್ವಭಾವದಲ್ಲಿ,  ಚಾರಿತ್ರ್ಯಶುದ್ಧಿಯಲ್ಲಿ.

ಮೊದಲು  ಚಾರಿತ್ರ್ಯವನ್ನು  ಬೆಳೆಸಿ.  ನೀವು  ಮಾಡಬೇಕಾದ ಅತ್ಯುನ್ನತ  ಕರ್ತವ್ಯ ಇದು.

ಮನಸ್ಸುನ್ನು  ಶಕ್ತಿಯುತವೂ,  ಶಿಸ್ತುಬದ್ಧವೂ  ಆಗಿಸುವುದರಲ್ಲಿಯೇ  ಜ್ಞಾನದ ಮೌಲ್ಯವಿರುವುದು.

ಉನ್ನತ  ಆಲೋಚನೆಗಳಿಂದ, ಅತ್ಯುನ್ನತ  ಆದರ್ಶಗಳಿಂದ  ನಿಮ್ಮ ಮಿದುಳನ್ನು  ತುಂಬಿ; ಅವುಗಳನ್ನು  ಹಗಲಿರುಳೂ ನಿಮ್ಮ  ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ  ಉದ್ಭವಿಸುತ್ತದೆ.

ನಿಮ್ಮ  ಪಾಲಿಗೆ ಬಂದ  ಕರ್ತವ್ಯವನ್ನು  ಮಾಡಿ  ನೀವು  ಶುದ್ಧ  ಚಾರಿತ್ರ್ಯವನ್ನು  ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು  ಮಾಡಿದರೆ ಕಾರ್ತವ್ಯಭಾರದಿಂದ  ಪಾರಾಗುತ್ತೇವೆ.

ಯಾವಾಗಲೂ ಒಳ್ಳೆಯದನ್ನೇ  ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ  ಆಲೋಚಿಸಿ. ದುಷ್ಟ  ಸಂಸ್ಕಾರಗಳನ್ನು  ನಿಗ್ರಹಿಸುವುದಕ್ಕೆ  ಇದೊಂದೇ ಮಾರ್ಗ.

ಪ್ರತಿಕೂಲವಾದ  ಸನ್ನಿವೇಶಗಳನ್ನು  ಎದುರಿಸಿ ಜೀವಿಯು  ವಿಕಾಸ ಮತ್ತು  ಬೆಳವಣಿಗೆಯನ್ನು  ಹೊಂದುವುದೆ  ಜೀವನ.

ಪರಿಸ್ಥಿತಿಗಳನ್ನು  ಉತ್ತಮಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು  ಬದಲಾಯಿಸುವುದರಿ0ದ  ನಾವು  ಉತ್ತಮರಾಗುತ್ತೇವೆ.

ಪ್ರತಿಯೊಬ್ಬ  ವ್ಯಕ್ತಿಯೂ, ಪ್ರತಿಯೊಂದು  ರಾಷ್ಟ್ರವೂ  ಶ್ರೇಷ್ಟತೆಯನ್ನು  ಪಡೆಯಲು  ಮೂರು  ಸಂಗತಿಗಳು  ಅವಶ್ಯಕ:

  1. ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ.
  2. ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ.
  3. ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ.

ನಮಗೆ ನಾವೇ  ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟು  ಮಾಡಲಾರದು ಎಂಬುದು ನಿಶ್ಚಯ.

ನಮ್ಮ  ದುಃಖಗಳಿಗೆಲ್ಲ  ನಾವೇ ಜವಾಬ್ದಾರರು, ಮತ್ತಾರೂ ಅಲ್ಲ.  ನಮ್ಮ ಅದೃಷ್ಟವನ್ನು  ರೂಪಿಸಿಕೊಳ್ಳುವವರು ನಾವೇ.

ನಿಮ್ಮ  ತಪ್ಪಿಗಾಗಿ  ಇತರರನ್ನು  ದೂಷಿಸಬೇಡಿ. ನಿಮ್ಮ ಕಾಲ  ಮೇಲೆ  ನೀವು ನಿಲ್ಲಿ. ಸ0ಪೂರ್ಣ  ಜವಾಬ್ದಾರಿಯನ್ನು ನಿಮ್ಮ ತಲೆಯ ಮೇಲೆ ಹೊತ್ತುಕೊಳ್ಳಿ.

ನಿಮ್ಮನ್ನು ನಿಂದಿಸುವ ಜನರನ್ನು ಆಶೀರ್ವದಿಸಿ. ನಿಮ್ಮಲ್ಲಿರುವ  ದುಹಂಕರವನ್ನು  ಹತ್ತಿಕ್ಕಲು  ಅವರು ಎಷ್ಟೊಂದು ಸಹಾಯ ಮಾಡುತ್ತಿದ್ದಾರೆ  ಎಂಬುದನ್ನು ಯೋಚಿಸಿ.

ನಿಮಗಾಗಿ  ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು, ಅವನಲ್ಲೇ  ಬಾಳುವುದು, ಚಲಿಸುವುದು ಎಂದರೆ ಇದೇ.

By | 2017-09-08T18:44:41+00:00 September 8th, 2017|Uncategorized|0 Comments

About the Author:

Leave A Comment