ದಕ್ಷತೆ

//ದಕ್ಷತೆ

ದಕ್ಷತೆ

ಒಮ್ಮೆ ಒಬ್ಬ ಮರ ಕಡಿಯುವವನಿಗೆ ಒಂದು ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಮಾಲೀಕ ಆತನ ಯೋಗ್ಯತೆಯೇನೆಂದು ಕೇಳಿದಾಗ ತಾನು ದಿನದಲ್ಲಿ 20 ಮರಗಳನ್ನು ಕಡಿದು ತರುವುದಾಗಿ ಹೇಳಿದ. ಮಾಲೀಕ ಸಂತೋಷಗೊಂಡು ಅವನಿಗೆ ಮರಕ್ಕೆ ನೂರು ರೂಪಾಯಿಗಳನ್ನು ಕೊಡುವುದಾಗಿ ಹೇಳಿದ. ಈತ ಅತ್ಯಂತ ಉತ್ಸಾಹದಿಂದ ಹೊತ್ತಾರೆ ಎದ್ದು ಕಾಡಿಗೆ ಹೋಗಿ ಮರಗಳನ್ನು ಕಡಿದು ಹಣ ಸಂಪಾದಿಸಲು ತೊಡಗಿದ. ಆದರೆ, ದಿನೇ ದಿನೇ ಇವನ ಸಾಮಥ್ರ್ಯ ಕುಗ್ಗುತ್ತಿರುವಂತೆ ಇವನಿಗೆ ಭಾಸವಾಯಿತು. ಹಿಂದೆ ದಿನಕ್ಕೆ ಇಪ್ಪತ್ತು ಮರಗಳನ್ನು ಕುಯ್ಯುತ್ತಿದ್ದು, ಬರ ಬರುತ್ತ ಹತ್ತಕ್ಕೆ ಇಳಿದಿತ್ತು. ಮಾಲೀಕ ಇವನ ಕೆಲಸದಿಂದ ಅಸಮಾಧಾನಗೊಂಡು ಮತ್ತೊಬ್ಬನನ್ನು ನೇಮಿಸಿಕೊಂಡ. ದಿನವೂ ಇಬ್ಬರೂ ಮರ ಕಡಿಯಲು ಕಾಡಿಗೆ ಹೋಗುತ್ತಿದ್ದರು. ಒಮ್ಮೆ ತನ್ನ ಕೆಲಸದ ಮಧ್ಯೆ ಮೊದಲನೆಯವನು ಎರಡನೆಯವನನ್ನು ಅವನ ಸಂಬಳವೆಷ್ಟೆಂದು ಕೇಳಿದ. ಅದಕ್ಕೆ ಎರಡನೆಯವನು ಮರಕ್ಕೆ ಇನ್ನೂರೆಂದು ಉತ್ತರಿಸಿದ. ಮೊದ¯ನೆಯವನು ಕೋಪಿಸಿಕೊಂಡು ಮಾಲೀಕನಲ್ಲಿ ತಮ್ಮಿಬ್ಬರ ವೇತನದಲ್ಲಿ ತಾರತಮ್ಯವೇಕೆಂದು ಕೇಳಿದಾಗ ಮಾಲೀಕ ಹೇಳಿದ, “ನೋಡು, ನಿನಗಿಂತ ಎರಡರಷ್ಟು ಕೆಲಸ ಅವನು ಮಾಡುವುದರಿಂದ, ಅವನಿಗೆ ನಿನ್ನಷ್ಟೇ ಸಂಬಳ ಕೊಡಲು ಹೇಗೆ ಸಾಧ್ಯ?” “ಅದು ಹೇಗೆ ಅವನು ನನಗಿಂತ ಎರಡರಷ್ಟು ಮಾಡುತ್ತಾನೆ?” ಪ್ರಶ್ನಿಸಿದ ಈತ. “ನೀನೇ ಅವನನ್ನು ಕೇಳಿ ನೋಡು”, ಎಂದ ಮಾಲೀಕ. ಈತ ಹೋಗಿ ಆ ಎರಡನೆಯವನನ್ನು ಅವನು ಹೇಗೆ ತನಗಿಂತ ಎರಡರಷ್ಟು ಕೆಲಸ ಮಾಡಲು ಸಾಧ್ಯವಾಯಿತು ಎಂದು ಕೇಳಿದಾಗ ಆತ ಇವನನ್ನು ಪ್ರಶ್ನಿಸುತ್ತಾನೆ, “ನೀನು ಪ್ರತಿ ಮರ ಕಡಿದ ನಂತರ ಏನು ಮಾಡುತ್ತಿ?” “ಏಕೆ? ಇನ್ನೊಂದು ಮರವನ್ನು ಕಡಿಯುತ್ತೇನೆ”, ಉತ್ತರಿಸಿದ ಮೊದಲನೆಯವನು. “ಆದರೆ, ನಾನು ಪ್ರತಿಯೊಂದು ಮರವನ್ನು ಕಡಿದ ಮೇಲೂ ಕಾಲು ಗಂಟೆ ನನ್ನ ಕೊಡಲಿಯನ್ನು ಹರಿತಗೊಳಿಸಿಕೊಳ್ಳುತ್ತೇನೆ. ಇದರಿಂದ ನಾನು ಪ್ರತಿ ಮರವನ್ನು ನಿನಗಿಂತ ಬಹಳ ಕಡಿಮೆ ಅವಧಿಯಲ್ಲಿ ಕಡಿಯಬಲ್ಲೆ; ನಿನಗಿಂತ ಕಡಿಮೆ ಶ್ರಮದಲ್ಲಿ, ಆದರೆ ನಿನಗಿಂತ ಎರಡರಷ್ಟು ಮರಗಳನ್ನು ಕಡಿಯಲು ನನ್ನಿಂದ ಸಾಧ್ಯ.” ನಾವು ಗುರಿಯನ್ನು ಸಾಧಿಸುವ ಹಾದಿಯನ್ನೇ ಮರೆತುಬಿಡುತ್ತೇವೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ, “ಗುರಿಗೆ ಎಷ್ಟು ಪ್ರಾಮುಖ್ಯತೆಯನ್ನು ನಾವು ನೀಡುವೆವೊ, ಅಷ್ಟೇ ಪ್ರಾಮುಖ್ಯತೆಯನ್ನು ಉಪಾಯಗಳಿಗೂ ನೀಡಬೇಕು” ಎಂದು. ಆಗಲೇ ನಾವು ಮಾಡುವ ಕಾರ್ಯದಲ್ಲಿ ದಕ್ಷತೆ ಉಂಟಾಗುತ್ತದೆ.

By | 2017-05-14T23:49:46+00:00 May 14th, 2017|Kannada Articles|0 Comments

About the Author:

Leave A Comment

%d bloggers like this: