ಏಕಾಗ್ರತೆ ಎಲ್ಲಿ?

//ಏಕಾಗ್ರತೆ ಎಲ್ಲಿ?

ಏಕಾಗ್ರತೆ ಎಲ್ಲಿ?

ಒಬ್ಬ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ನಗರದ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಅದು ಮಾರುಕಟ್ಟೆ ಪ್ರದೇಶವಾದ್ದರಿಂದ ಅನೇಕ ವಾಹನಗಳಿಂದ, ಜನಜಂಗುಳಿಯಿಂದÀ ಕೂಡಿತ್ತು. ಎಲ್ಲೆಲ್ಲೂ ಶಬ್ದದಿಂದಲೇ ತುಂಬಿಹೋಗಿತ್ತು. ಹೀಗೆ ಹೋಗುತ್ತಿದ್ದಾಗ ಈ ವ್ಯಕ್ತಿ ತನ್ನ ಸ್ನೇಹಿತನಿಗೆ ಹೇಳಿದ, “ನನಗೆ ಮಿಡತೆಯ ರೆಕ್ಕೆಬಡಿತದ ಶಬ್ದ ಕೇಳಿ ಬರುತ್ತಿದೆ”, ಎಂದು. “ಏನು? ನಿನಗೇನಾದರೂ ಹುಚ್ಚು ಹಿಡಿದಿದೆಯೆ? ಇಂತಹ ಶಬ್ದದ ಮಧ್ಯೆ ಮಿಡತೆಯ ರೆಕ್ಕೆಯ ಸದ್ದು ಕೇಳಿಸುವುದೆಂದರೇನು?” “ಇಲ್ಲ, ನಾನು ನಿಜವಾಗಿ ಕೇಳಿಸಿಕೊಂಡೆ” ಹೇಳಿದ ಇವನು. “ಸಾಧ್ಯವೇ ಇಲ್ಲ”, ಪಟ್ಟು ಬಿಡದೆ ನುಡಿದ ಸ್ನೇಹಿತ. ಈ ವ್ಯಕ್ತಿ ಸ್ವಲ್ಪ ಹೊತ್ತು ಆ ಶಬ್ದವನ್ನೆ ಆಲಿಸುತ್ತಿದ್ದು ನಂತರ ಒಂದು ಸಿಮೆಂಟಿನ ಕಟ್ಟಡದ ಬಳಿಗೆ ನಡೆದು ಅಲ್ಲಿ ಪಕ್ಕದಲ್ಲಿ ಬೆಳೆದಿದ್ದ ಪೊದೆಯಲ್ಲಿ ಹುಡುಕಿದ. ಸ್ವಲ್ಪ ಸಮಯದಲ್ಲೇ ಈ ವ್ಯಕ್ತಿ ಹೇಳಿದ ಮಿಡತೆ ಇವರ ಕಣ ್ಣಗೆ ಗೋಚರಿಸಿತು. ಸ್ನೇಹಿತ ಆಶ್ಚರ್ಯದಿಂದ, “ವಾಹ್! ನಿನಗೆ ಅತಿಮಾನುಷ ಕಿವಿಗಳೇ ಇರಬೇಕು” ಎಂದ. “ನನಗೂ ನಿನ್ನಂತಹವೆ ಕಿವಿಗಳಿವೆ. ಆದರೆ,ನಾವು ಏನನ್ನು ಕಿವಿಗೊಟ್ಟು ಕೇಳುತ್ತೇವೆ ಅನ್ನುವುದೇ ಮುಖ್ಯ”. “ಅದು ಸಾಧ್ಯವಿಲ್ಲ. ನನಗಂತೂ ಇಂತಹ ಶಬ್ದದಲ್ಲಿ ಮಿಡತೆಯ ರೆಕ್ಕೆಯ ಸದ್ದು ಕೇಳಿಸುವುದೇ ಇಲ್ಲ”, ನುಡಿದ ಸ್ನೇಹಿತ. “ಅದು ಸಾಧ್ಯ. ನೀನು ಯಾವುದಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡುವೆಯೊ ಅದರ ಮೇಲೆ ಅವಲಂಬಿಸಿದೆ. ನಾನೊಂದು ಸ್ವಾರಸ್ಯ ತೋರಿಸುತ್ತೇನೆ, ನೋಡು”, ಎಂದ ಈ ವ್ಯಕ್ತಿ. ತನ್ನ ಜೇಬಿನಿಂದ ಕೆಲವು ನಾಣ್ಯಗಳನ್ನು ಹೊರತೆಗೆದು ಬೇಕಂತಲೇ ಜನಗಳು ನಡೆಯುವ ಕಾಲ್ದಾರಿಯಲ್ಲಿ ಶಬ್ದವಾಗುವಂತೆ ಚೆಲ್ಲಿದ. ಅಂತಹ ಶಬ್ದದ ನಡುವೆಯೂ ಅಲ್ಲಿಂದ ಸುಮಾರು ಇಪ್ಪತ್ತು ಅಡಿ ಅಂತರದಲ್ಲಿರುವ ಎಲ್ಲ ತಲೆಗಳೂ ಇತ್ತ ಕಡೆಯೇ ತಿರುಗಿದವು, ಎಲ್ಲಿ ತಮ್ಮ ಜೇಬಿನಿಂದಲೇನಾದರೂ ದುಡ್ಡು ಹೊರ ಬಿತ್ತೇ ಎಂದು ನೋಡಲು! ತಕ್ಷಣ ವ್ಯಕ್ತಿ ನಗುತ್ತ, “ನಾನು ಹೇಳಲಿಲ್ಲವೆ? ನೀನು ಯಾವುದಕ್ಕೆ ಪ್ರಾಮುಖ್ಯತೆ ನೀಡುವೆಯೊ ಅದು ನಿನ್ನ ಗಮನವನ್ನು ಸೆಳೆಯುತ್ತದೆ,”ಎಂದು ಹೇಳಿದ. ಏಕಾಗ್ರತೆಯ ಸಮಸ್ಯೆ ಎಲ್ಲರಿಗೂ ಇದ್ದದ್ದೆ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಯೊಬ್ಬನಿಗೆ ಅಧ್ಯಯನ ಮಾಡುವ ಸಮಯದಲ್ಲಿ ಹೇಗೆ ತನ್ನ ವಿಷಯದಲ್ಲಿ ಏಕಾಗ್ರತೆಯನ್ನು ಸಂಪಾದಿಸುವುದು ಎಂಬುದೇ ಚಿಂತೆಯಾಗಿರುತ್ತದೆ. ಅದಕ್ಕೆ ಉತ್ತರ, ತನ್ನ ಅಧ್ಯಯನದ ವಿಷಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವುದು. ಆಸಕ್ತಿಯಿದ್ದ ಕಡೆ ಮನಸ್ಸು ಸಂಪೂರ್ಣ ಅದರ ಮೇಲೆ ಕೇಂದ್ರೀಕೃತವಾಗುತ್ತದೆ. ಅದೇ ಏಕಾಗ್ರತೆ. ಈ ಏಕಾಗ್ರತೆಯೆ ಜ್ಞಾನದ ಕೀಲಿಕೈ.
-ಸ್ವಾಮಿ ಕರುಣಾಕರಾನಂದ

By | 2017-05-14T23:55:07+00:00 May 14th, 2017|Kannada Articles|0 Comments

About the Author:

Leave A Comment

%d bloggers like this: