+91 9611100374|admin@indiaforyou.in

ಹುವ್ವ ತರುವರ ಮನೆಗೆ

//ಹುವ್ವ ತರುವರ ಮನೆಗೆ

ಹುವ್ವ ತರುವರ ಮನೆಗೆ

ಹುವ್ವ ತರುವರ ಮನೆಗೆ ಹುಲ್ಲ ತರುವ
ಅವ್ವ ಲಕುಮೀರಮಣ ಇವಗಿಲ್ಲ ಗರುವ||

ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ
ಇಂದಿರಾರಮಣಗೆ ಅರ್ಪಿತವೆನುತ|
ಒಂದೇ ಮನಸಿನಲಿ ಸಿಂಧುಶಯನ ಎನೆ
ಎಂದೆಂದು ವಾಸಿಪನಾ ಮಂದಿರದೊಳಗೆ||

ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿ|
ಅಂಡಜವಾಹನ ನಮ್ಮ ಪುರಂದರವಿಟ್ಠಲನು
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು||

—-ಪುರಂದರದಾಸ

By | 2015-04-22T07:42:27+00:00 April 22nd, 2015||0 Comments

About the Author:

Leave A Comment