+91 9611100374|admin@indiaforyou.in

ಹಾಂಗೆ ಇರಬೇಕು

//ಹಾಂಗೆ ಇರಬೇಕು

ಹಾಂಗೆ ಇರಬೇಕು

ಹಾಂಗೆ ಇರಬೇಕು ಸಂಸಾದಲ್ಲಿ
ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಹಾರಿ ಹೋದಂತೆ||

ನಾನಾ ಪರಿಯಲಿ ಸಂತೆ ನೆರೆದಂತೆ
ನಾನಾ ಪಂಥವ ಹಿಡಿದು ಹೋದಂತೆ||

ಮಕ್ಕಳು ಆಡಿ ಮನೆ ಕಟ್ಟಿದಂತೆ
ಆಟ ಸಾಕೆಂದು ಅಳಿಸಿ ಪೋದಂತೆ||

ವಸತಿಕಾರನು ವಸತಿ ಕಂಡಂತೆ
ಹೊತ್ತಾರೆದ್ದು ಹೊರಟು ಹೋದಂತೆ||

ಸಂಸಾರಪಾಶವ ನೀನೇ ಬಿಡಿಸಯ್ಯಾ
ಕಂಸಾರಿ ಪುರಂದರವಿಟ್ಠಲರಾಯ||

—-ಪುರಂದರದಾಸ

By | 2015-04-22T07:38:14+00:00 April 22nd, 2015||0 Comments

About the Author:

Leave A Comment