+91 9611100374|admin@indiaforyou.in

ಹಂಸ ನಿನ್ನಲಿ ನೀ ನೋಡೋ

//ಹಂಸ ನಿನ್ನಲಿ ನೀ ನೋಡೋ

ಹಂಸ ನಿನ್ನಲಿ ನೀ ನೋಡೋ

ಹಂಸ ನಿನ್ನಲಿ ನೀ ನೋಡೋ| ಭವ-
ಪಾಶಮುಕ್ತನಾಗಿ ಹರಿಯನ್ನು ಕೂಡೋ||

ಪಕ್ಕಗಳೆರಡುಂಟು ನಿನಗೆ| ನೀ
ಹೊಕ್ಕು ಹೋಗುವೆ ಮೂರು ಪಂಜರದೊಳಗೆ|
ಲೆಕ್ಕವಿಲ್ಲದ ದಾರಿ ನಿನಗೆ| ಈಗ
ಸಿಕ್ಕಿದೆಯೋ ಮಾಯಾಪಾಶದೊಳಗೆ||

ಹಬ್ಬದ ಸವಿಗೆ ನೀ ಬಂದೆ| ಬಲು
ಕೊಬ್ಬಿಲಿ ಕಾಣದೆ ವಿಷದೊಳು ಬಿದ್ದೆ|
ದಿಬ್ಬಣದಲಿ ಮೈಯ ಮರೆತೆ| ನೀ
ಒಬ್ಬನೆ ಹೋಗಿ ಕಾಲಕ್ಕೆ ಗುರಿಯಾದೆ||

ಯಾರಿಗೆ ಯಾರು ಮತ್ತಿಲ್ಲ| ನಡು-
ದಾರಿಯೊಳಗೆ ಕೈಯ ಬಿಡುವರೆ ಎಲ್ಲ|
ದೂರ ಹೋಯಿತು ಪ್ರಾಯವೆಲ್ಲ| ಸಿರಿ
ಪುರಂದರವಿಟ್ಠಲನಲದೆ ಬೇರೆಯಿಲ್ಲ||

—-ಪುರಂದರದಾಸ

By | 2015-04-22T07:32:56+00:00 April 22nd, 2015||0 Comments

About the Author:

Leave A Comment