+91 9611100374|admin@indiaforyou.in

ಸಕಲಕೆಲ್ಲಕೆ ನೀನೇ

Home//ಸಕಲಕೆಲ್ಲಕೆ ನೀನೇ

ಸಕಲಕೆಲ್ಲಕೆ ನೀನೇ

ಸಕಲಕೆಲ್ಲಕೆ ನೀನೇ ಅಕಲಂಕ ಗುರುವೆಂದು
ನಿಖಿಲ ಶಾಸ್ತ್ರವು ಪೇಳುತಿರಲರಿದೆನು||

ಅವರವರ ದರುಶನಕೆ ಅವರವರ ದೇಶದಲಿ
ಅವರವರಿಗೆಲ್ಲ ಗುರು ನೀನೊಬ್ಬನೇ|
ಅವರವರ ಭಾವಕ್ಕೆ, ಅವರವರ ಅರ್ಚನೆಗೆ
ಅವರವರಗೆ ದೇವ ನೀನೊಬ್ಬನೇ||

ಹೋರಾಟವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಜಗದೊಱಗೆ ಎಲೆ ದೇವನೇ|
ಆರೂ ಅರಿಯರು ನೀನು ಬೇರಾದ ಪರಿಗಳನು
ಮಾರಾರಿ ಶಿವ ಷಡಕ್ಷರಿಲಿಂಗವೆ||

—-ಮುಪ್ಪಿನ ಷಡಕ್ಷರಿ

By | 2015-04-21T12:26:43+00:00 April 21st, 2015||0 Comments

About the Author:

Leave A Comment