+91 9611100374|admin@indiaforyou.in

ಶ್ರೀಶಾರದದೇವಿ ಹೇ ಮಹಾಮಾತೆ

//ಶ್ರೀಶಾರದದೇವಿ ಹೇ ಮಹಾಮಾತೆ

ಶ್ರೀಶಾರದದೇವಿ ಹೇ ಮಹಾಮಾತೆ

ಶ್ರೀಶಾರದದೇವಿ ಹೇ ಮಹಾಮಾತೆ
ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ|
ಪರಮಪಾವನಹೃದಯೆ ಕಲಿಯುಗದ ಸೀತೆ
ಭಕ್ತಿಯಿಂದಾರಾಧಿಪೆವು ನಿನ್ನನಮ್ಮ||

ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ
ನಿನ್ನ ತೇಜದ ಭಾಗವೀ ನಮ್ಮ ಸೂರ್ಯ|
ನೀ ಕಾಳಿ ನೀ ಲಕ್ಷ್ಮಿ ನೀ ಬಿಜ್ಜೆಯಮ್ಮ
ಮಕ್ಕಳಾಗಿಹ ನಮ್ಮ ಪೊರೆ ಶಕ್ರಿಯಮ್ಮ||

ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ
ಗುರುವರ್ಯನಂ ತಿಳಿದ ನೀ ಮಹಿಮಳಮ್ಮ|
ಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ
ಪರಶಕ್ತಿ ನೀನಮ್ಮ ನಮ್ಮ ಸಲಹಮ್ಮ||

ನಿನ್ನ ನಾಮವೆ ಜನನಿ ಸುರನದಿಯ ತೀರ್ಥ
ಎಲೆ ತಾಯೆ, ನೀನೇ ಪವಿತ್ರತಮ ತೀರ್ಥ|
ನಿನ್ನ ಪೂಜೆಯೆ ಭಕ್ತಿ, ಸಾಧನ ವಿರಕ್ತಿ
ನಿನ್ನ ನೆನೆವುದೆ ನಮಗೆ ಗುರು ತಪಶ್ಶಕ್ತಿ||

—-ಕುವೆಂಪು

By | 2015-04-21T12:08:20+00:00 April 21st, 2015||0 Comments

About the Author:

Leave A Comment