+91 9611100374|admin@indiaforyou.in

ವನಸುಮದೊಲೆನ್ನ

Home/Uncategorized/ವನಸುಮದೊಲೆನ್ನ

ವನಸುಮದೊಲೆನ್ನ

ವನಸುಮದೊಲೆನ್ನ ಜೀ-
ವನವು ವಕಸಿಸುವಂತೆ
ಮನವನನುಗೊಳಿಸು ಗುರುವೇ ಹೇ ದೇವ||

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೋ ಜಗದ ಪೊಗಳಿಕೆಗೆ ಬಾಯ್ ಬಿಡದೆ||

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸುಸಿ ನಲವಿಂ|
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಆಬಿ-
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ||

ಉಪಕಾರಿ ನಾನು ಎ-
ನ್ನುಪಕೃತಿಯು ಜಗಕೆಂಬ
ವಿಪರೀತಮತಿಯನುಳಿದು|
ವಿಸುಲಾಶ್ರಯವನೀವ
ಸುಫಲ ಸುಮಭರಿತ ಪಾ-
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು||

—-ಡಿ.ವಿ.ಜಿ.

By | 2015-04-21T07:30:32+00:00 April 21st, 2015|Uncategorized|0 Comments

About the Author:

Leave A Comment