+91 9611100374|admin@indiaforyou.in

ರಾಮಕೃಷ್ಣ ಪದಾಂಬುಜದಿ

Home//ರಾಮಕೃಷ್ಣ ಪದಾಂಬುಜದಿ

ರಾಮಕೃಷ್ಣ ಪದಾಂಬುಜದಿ

ರಾಮಕೃಷ್ಣ ಪದಾಂಬುಜದಿ
ನಲಿಯೋ ಎನ್ನ ಮನದ ಭ್ರಮರ|
ಮುಳ್ಳಿನಿಂ ಮುಸುಕಿದೆ ವಿಷಯಕೇದಗೆ
ನಿಲ್ಲದಿರಲ್ಲಿ ನೀ ಮೈಯನು ಮರೆತು||

ಜನುಮ ಮರಣ ವಿಷಮ ವ್ಯಾಧಿಯ
ಎನಿತು ಕಾಲ ಸಹಿಪೆ ಇನ್ನು|
ಪ್ರೇಮಸುಧೆಯ ಸವಿ ಶ್ರೀಪದದಿ
ಭವದ ಯಾತನೆ ಉಳಿಯದಿನ್ನು||

ಧರ್ಮಾಧರ್ಮ-ಸುಖ-ದುಃಖ-ಶಾಂತಿ-ತಾಪ
ದ್ವಂದ್ವದಲ್ಲಿರಲು ಮುಕ್ತಿಯದೆಲ್ಲಿ|
ಜ್ಞಾನಖಡ್ಗದಿ ಪರಮ ಯತ್ನದಿ
ಕತ್ತರಿಸು ನೀ ಕರ್ಮದ ಪಾಶವ||

ರಾಮಕೃಷ್ಣನಾಮ ನಾಲಿಗೆ ನುಡಿಯಲಿ
ಮೋಹದದ ಕತ್ತಲು ಕಳೆವುದಾಗ|
ದುಃಸ್ವಪ್ನ ಜ್ವಾಲೆ ಆರುವುದಾಗ
ಮತ್ತಿನ ನಿದ್ರೆಯು ಉಳಿಯದಿನ್ನು||

By | 2015-04-21T06:27:25+00:00 April 21st, 2015||0 Comments

About the Author:

Leave A Comment