+91 9611100374|admin@indiaforyou.in

ರಾಮಕೃಷ್ಣ ಗುರುವೇ

//ರಾಮಕೃಷ್ಣ ಗುರುವೇ

ರಾಮಕೃಷ್ಣ ಗುರುವೇ

ರಾಮಕೃಷ್ಣಗುರುವೇ ಪರಮಹಂಸ ಗುರುವೇ|
ಕಾಮಿತದಾಯಕ ಪ್ರೇಮದಿ ನಮಿಪೆವು ||

ಸಕಲ ಮತವ ನೀನೇಕವೆಂದೆಣಿಸಿದೆ
ಅಕಲಂಕಮಹಿಮ ಮಮ ದೇವ|
ಲೋಕಸೇವೆಯಿಂ ಖ್ಯಾತಿಯ ಹೊಂದಿದೆ
ಮುಕ್ಕಣ್ಣನ ಪ್ರಿಯ ನಮಿಪೆವು ದೇವ||

ಸ್ವಾಮಿ ವಿವೇಕಾನಂದನ ಗುರುವೇ
ಪ್ರೇಮದಿ ಸಲಹೈ ಸಕಲ ಲೋಕವ|
ತಾಮಸ ಮಾಡದೆ ಕಾವುದು ಎಮ್ಮನು
ಚಾಮುಂಡಾಂಬೆಯ ವರಭಕ್ತನೆ||

—-ಮೈಸೂರು ದೇವೇಂದ್ರಪ್ಪ

By | 2015-04-21T05:56:40+00:00 April 21st, 2015||0 Comments

About the Author:

Leave A Comment