+91 9611100374|admin@indiaforyou.in

ರಾಮ ಎಂಬುವ ಎರಡು

Home//ರಾಮ ಎಂಬುವ ಎರಡು

ರಾಮ ಎಂಬುವ ಎರಡು

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ||

ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿಗತವಾದ ಅತಿ ಪಾಪವನನ್ನು|
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೇಕಿ ಮುನಿರಾಯ ಬಲ್ಲ||

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳಪೊಗದಂತೆ ಕವಾಟವಾಗಿ|
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ||

ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು|
ಸಿರಿಯರಸ ಪುರಂದರ ವಿಟ್ಠಲನ ನಾಮವನು
ಸಿರಿಕಾಶಿಯೊಳಗಿಪ್ಪ ಶಿವನು ತಾ ಬಲ್ಲ||

—-ಪುರಂದರದಾಸ

By | 2015-04-20T09:53:13+00:00 April 20th, 2015||0 Comments

About the Author:

Leave A Comment