+91 9611100374|admin@indiaforyou.in

ರಾಘವ ನೀ ಬಾ

Home//ರಾಘವ ನೀ ಬಾ

ರಾಘವ ನೀ ಬಾ

ರಾಘವ ನೀ ಬಾ ರಘುಕುಲನಂದನ
ಅಘಮರ್ಷಣನೇ ನೀ ಬಾರೋ|
ದಶಮುಖರಾವಣನ ಲಂಕೆಲಿ ಮಡುಹಿದ
ಕೌಸಲ್ಯಾತನಯನೇ ನೀ ಬಾರೋ||

ಧನುರ್ಬಾಣವ ಕರದಲಿ ಧರಿಸಿದ
ದನುಜಕುಲಾಂತಕ ನೀ ಬಾರೋ|
ಇನವಂಶವನು ಪಾವನಗೈದ
ಮನುಜಶ್ರೇಷ್ಠನೇ ನೀ ಬಾರೋ||

ಅಹಲ್ಯೋದ್ಧಾರಕ ತಾಟಕಿಘಾತಕ
ಅಹರಹ ಭಜಿಸುವೆ ನೀ ಬಾರೋ|
ಇಹದಲಿ ಪರದಲಿ ಗತಿ ನೀನೆನ್ನುತ
ತಹತಹ ಪಡುತಿಹೆ ನೀ ಬಾರೋ||

ಪಿತೃಭಕ್ತನೇ ಸತ್ಯಶೀಲನೇ
ಸತತವು ನಿನ್ನನೇ ಸ್ತುತಿಸುವೆ ಬಾರೋ|
ನತಜನರನು ಪರಿಪಾಲಿಸುವವನೇ
ಸೀತಾರಮಣಾ ನೀ ಬಾರೋ||

—-ಸ್ವಾಮಿ ಹರ್ಷಾನಂದ

By | 2015-04-20T09:28:17+00:00 April 20th, 2015||0 Comments

About the Author:

Leave A Comment