+91 9611100374|admin@indiaforyou.in

ಯಾರ ಪ್ರೇಮದ ಪರಮಪೂರವು

//ಯಾರ ಪ್ರೇಮದ ಪರಮಪೂರವು

ಯಾರ ಪ್ರೇಮದ ಪರಮಪೂರವು

ಯಾರ ಪ್ರೇಮದ ಪರಮಪೂರವು ನೀಚರೆದೆಗೂ ಹರಿಯಿತೋ,
ಯಾವ ಲೋಕಾತೀತಮಹಿಮನ ಕರಣೆ ಲೋಕಕೆ ದುಡಿಯಿತೋ,
ಯಾವನಪ್ರತಿ-ಮಹಿಮನೋ ಮೇಣ್ ಮಾತೆ ಸೀತೆಯ ನಾಥನೋ,
ಯಾರು ಸೀತೆಯ ಭಕುತಿಯಿಂದಲಿ ಜ್ಞಾನದೇಹದಿ ವ್ಯಾಪ್ತನೋ

ಯಾರು ಮಧುತರ ಶಾಂತಗೀತೆಯ ಯುದ್ಧರಂಗದಿ ಮೊಳಗುತ
ಪ್ರಳಯಶಬ್ದವ ಸ್ತಬ್ಧಗೊಳಿಸುತ ಸಿಂಹನಾದವ ಸಿಡಿಸುತ
ಮೋಹತಿಮಿರವನಿಲ್ಲಗೈಯುತ ಕೃಷ್ಣರೂಪದಿ ನಿಂದನೋ
ಅವನೆ ಇಂದಿಗೆ ರಾಮಕೃಷ್ಣನ ಹೆಸರೊಳೆಸೆಯುತಲಿರುವನು

—-ಮುರಳೀಧರ

By | 2015-04-17T12:48:28+00:00 April 17th, 2015||0 Comments

About the Author:

Leave A Comment