+91 9611100374|admin@indiaforyou.in

ಯಾದವ ನೀ ಬಾ

Home//ಯಾದವ ನೀ ಬಾ

ಯಾದವ ನೀ ಬಾ

ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ||

ಸೋದರಮಾವನ ಮಥರೆಲಿ ಮಡುಹಿದ
ಯಶೋದಾಕಂದ ನೀ ಬಾರೋ||

ಕಣಕಾಲಂದುಗೆ ಘಲುಘಲುಗೆನುತಲಿ
ಝಣಝಣ ವೇಣುನಿನಾದದಲಿ|
ಚಿಣ್ಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣವರೊಡಗೂಡಿ ನೀ ಬಾರೋ||

ಶಂಖ ಬಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ|
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಚಬ ಬಕ್ತರಿಗೊಲಿ ಬಾರೋ||

ಖಗವಾಹನನೆ ಬಗೆಬಗೆರೂಪನೆ
ನಗೆಮೊಗದರಸನೆ ನೀ ಬಾರೋ|
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಟ್ಠಲ ನೀ ಬಾರೋ||

—-ಪುರಂದರದಾಸ

By | 2015-04-17T12:22:07+00:00 April 17th, 2015||0 Comments

About the Author:

Leave A Comment